Uttar Pradesh : ಅಕ್ಟೋಬರ್ 23 ರಂದು ಭಾನುವಾರ ಉತ್ತರ ಪ್ರದೇಶದ (Nobody Helped The Girl) ಕನೌಜ್‌ನ ಎಂಬ ನಗರದಲ್ಲಿ 13 ವರ್ಷದ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾದ ಕೆಲ ಗಂಟೆಗಳ ನಂತರ ಆಕೆ ಗಂಭೀರ ಗಾಯಗಳಿಂದ ಪತ್ತೆಯಾಗಿರುವುದು ಕಂಡುಬಂದಿದೆ.
ಇದನ್ನೂ ಓದಿ : https://vijayatimes.com/allu-arjun-loves-kantara/
ಬಾಲಕಿ ಸಾರ್ವಜನಿಕ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಾಗ, ಅಲ್ಲೇ ನೆರದಿದ್ದ ಯುವಕರ ಗುಂಪನ್ನು ಸಹಾಯ ಕೋರಿದರು, ಸಹಾಯಕ್ಕೆ ಯಾರು ಮುಂದೆ ಬಂದಿಲ್ಲ ಎಂಬುದೇ ಬೇಸರದ ಸಂಗತಿ!
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ (Nobody Helped The Girl) ಹರಿದಾಡಿದ 25 ಸೆಕೆಂಡ್‌ಗಳ ವೀಡಿಯೊದಲ್ಲಿ,
ಬಾಲಕಿ ತನ್ನ ತೋಳುಗಳಿಂದ ಹರಿದು ಬರುತ್ತಿದ್ದ ರಕ್ತಸ್ರಾವದ ನೋವಿನ ಮಧ್ಯೆ ಪುರಷರ ಗುಂಪನ್ನು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಆದರೆ ಪುರುಷರ ಗುಂಪು ಬಾಲಕಿಯ ಸಹಾಯಕ್ಕೆ ಮುಂದೆ ಬಾರದೆ ಸಿನಿಮಾ ನೋಡುವಂತೆ ವೀಕ್ಷಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು, ಯಾವುದೇ ಸಹಾಯಕ್ಕೆ ಮುಂದೆ ಬಾರದ ಪುರುಷರ ಗುಂಪು, ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸುವಲ್ಲಿ ನಿರತಾರಾಗಿದ್ದರು. ಸಹಾಯಕ್ಕೆ ಮುಂದೆ ಬಾರದವರು,
ವೀಡಿಯೋ ಮಾಡುವಲ್ಲಿ ಮಾತ್ರ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ವೀಡಿಯೋ ಮಾಡಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್(Viral) ಆದ ಹಿನ್ನಲೆ, ನೆಟ್ಟಿಗರು ವಿಡಿಯೋ ವೀಕ್ಷಿಸಿ, “ಮಾನವೀಯತೆ ಸತ್ತು ಹೋಗಿದೆ”! “ವೀಡಿಯೋ ಮಾಡುವುದಕ್ಕೆ ಮಾತ್ರ ಇವರಿಗೆ ತಿಳಿಯಿತೇ ವಿನಃ ಒಂದು ಜೀವವನ್ನು ಉಳಿಸುವ ಪ್ರಯತ್ನ ಮರೆತುಹೋಯಿತಲ್ಲಾ”? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿ ಬರುವವರೆಗೂ ಬಾಲಕಿಗೆ ಸಹಾಯ ದೊರಕಿರಲಿಲ್ಲ. ಪೊಲೀಸ್ ಅಧಿಕಾರಿಯು ಆಂಬ್ಯುಲೆನ್ಸ್ ಬರುವವರೆಗೂ ಕಾಯದೇ, ಬಾಲಕಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ಬಾಲಕಿಗೆ ಹಲ್ಲೆಯಾಗಲು ಕಾರಣವೇನು? ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೇ?, ಹಲ್ಲೆ ಮಾಡಲಾಗಿದೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ! ಬಾಲಕಿಯ ಮನೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪೊಲೀಸರು ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ : https://vijayatimes.com/green-airport-in-india/
ಉತ್ತರ ಪ್ರದೇಶ ಕಾಂಗ್ರೆಸ್ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, “ಕನೌಜ್‌ನಲ್ಲಿ ರಕ್ತದ ಮಡುವಿನಲ್ಲಿ ಮುಗ್ಧ ಹುಡುಗಿಯೊಬ್ಬಳು ರಸ್ತೆಬದಿಯಲ್ಲಿ ನರಳುತ್ತಿದ್ದರು, ಜನರು ಮಾತ್ರ ಚಿತ್ರೀಕರಿಸುತ್ತಲೇ ಇದ್ದರು.
ಆದರೆ, ಅಪರಾಧಿ ಯಾರು ಮತ್ತು ಅವನು ಯಾವಾಗ ಬಂಧಿತವಾಗುತ್ತಾನೆ ಎಂಬುದು ಪ್ರಶ್ನೆಯಾಗಿದೆ ಎಂದು ಟ್ವೀಟ್ ಮಾಡಿದೆ.