Shivmoga : ವಿಚಾರಣೆಗಾಗಿ ಸಮನ್ಸ್(Summons) ನೀಡಿದ್ದರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಕೆ.ಎಸ್.ಭಗವಾನ್(KS Bhagawan) ವಿರುದ್ದ ಜಾಮೀನು(Non Bailable Warrant) ರಹಿತ ವಾರೆಂಟ್ ಜಾರಿ ಮಾಡಿ ಎಂದು ಶಿವಮೊಗ್ಗ ಜಿಲ್ಲೆಯ, ಸಾಗರದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಇದನ್ನೂ ಓದಿ : https://vijayatimes.com/mp-renukacharya-cried/
ಸಾಗರ ನಿವಾಸಿಯಾಗಿರುವ ಮಹಾಬಲೇಶ್ವರ ಎಂಬುವವರು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು,
ಕೆ.ಎಸ್.ಭಗವಾನ್ ಅವರು ತಮ್ಮ “‘ರಾಮ ಮಂದಿರ ಏಕೆ ಬೇಡ’ ಕೃತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿ, ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ಹಿನ್ನಲೆಯಲ್ಲಿ ಕೆ.ಎಸ್.ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು.
ಈ ಪ್ರಕರಣದ ಕುರಿತು ದೀರ್ಘಕಾಲದ ವಿಚಾರಣೆ ನಡೆಸಿದ ಸಾಗರದ ಜೆಎಂಎಫ್‌ಸಿ ನ್ಯಾಯಾಲಯ(Non Bailable Warrant) ಖುದ್ದು ಹಾಜರಾಗುವಂತೆ ಕೆ.ಎಸ್.ಭಗವಾನ್‌ಅವರಿಗೆ ಸೂಚನೆ ನೀಡಿತ್ತು.

ಆದರೆ ಹಲವು ಬಾರಿ ಸೂಚನೆ ನೀಡಿದ್ದರು ಕೆ.ಎಸ್.ಭಗವಾನ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ.
ಹೀಗಾಗಿ ಕೆ.ಎಸ್.ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿಯಲ್ಲಿ ಕ್ರಿಮಿನಲ್ ಪ್ರಕರಣದಾಖಲಿಸಿ ಸಮನ್ಸ ಜಾರಿ ಮಾಡಲಾಗಿತ್ತು.
https://youtu.be/49tPYYDsOhY ಕಿಲ್ಲರ್ ಕೋಕ್ ! ಪ್ಲೀಸ್… ಮಕ್ಕಳನ್ನ ದೂರ ಇಡಿ.
ಮೈಸೂರು ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಮೂಲಕ ಸಮನ್ಸ್ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಕೆ.ಎಸ್.ಭಗವಾನ್ ಬಂಧನಕ್ಕೆ ಜಾಮೀನು ರಹಿತ ವಾರೆಂಟ್‌ಜಾರಿ ಮಾಡಿ, ಜೆಎಂಎಫ್ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಂಧನಕ್ಕಾಗಿ ನ್ಯಾಯಾಲಯ ವಾರಂಟ್‌ಜಾರಿ ಮಾಡಿರುವುದರಿಂದ ಇಂದು ಕೆ.ಎಸ್.ಭಗವಾನ್ ಅವರನ್ನು ಮೈಸೂರು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.
- ಮಹೇಶ್.ಪಿ.ಎಚ್