ಭಾರತ(India) ಮೂಲದ ನೋನಿ(Noni), ಪ್ರಕೃತಿಯಲ್ಲಿ ದೊರೆಯುವ ಅದ್ಭುತ ಆರೋಗ್ಯ ವರ್ಧಕ ಹಾಗೂ ರೋಗ ನಿರೋಧಕ ಹಣ್ಣುಗಳಲ್ಲೊಂದು.
ನೋನಿ ಗಿಡದ ಬಹುತೇಕ ಎಲ್ಲ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಹಣ್ಣಿನ ರಸವಂತೂ ಸರ್ವರೋಗ ನಿವಾರಕ ಔಷಧ ಎಂದೇ ಖ್ಯಾತವಾಗಿದೆ. ನೋನಿಯ ವೈಜ್ಞಾನಿಕ ಹೆಸರು ಮೊರಿಂಡಾ ಸಿಟ್ರಿಫೋಲಿಯಾ ರುಬಿಯೇಸಿಯ. ಸಂಸ್ಕೃತದಲ್ಲಿ ಇದನ್ನು ಅಚ್ಚುಕ ಫಲ ಅಥವಾ ಆಯುಷ್ಯ ಎಂದರೆ, ಕನ್ನಡದಲ್ಲಿ ತಗಟೆ ಹಣ್ಣು ಎನ್ನುತ್ತಾರೆ.
ಹೀಗೆ ನಾನಾ ಹೆಸರುಗಳಿಂದ ಪ್ರಚಲಿತದಲ್ಲಿರುವ ನೋನಿ ಹಣ್ಣು ಮೂಲತಃ ನಮ್ಮ ನೆಲದ ಅಮೃತ ಫಲ. ಆರೋಗ್ಯ ಸಂರಕ್ಷಣೆಗೆ ಅಗತ್ಯವಾಗಿ ಬೇಕಾದ ಝರೋನಿನ್ ಅಂಶವುಳ್ಳ ಫಲವಿದು.
ನೋನಿ ಎಲೆಯಲ್ಲಿ ನೋವು ನಿವಾರಕ ಗುಣವಿದೆಯಾದ್ದರಿಂದ ಇದನ್ನು ‘ಪೇನ್ ಕಿಲ್ಲಿಂಗ್ ಟ್ರೀ’ ಎಂತಲೂ, ಹಣ್ಣು ಬೆಣ್ಣೆಯಂತಿರುವುದರಿಂದ ‘ಚೀಸ್ ಫ್ರೂಟ್’ ಎಂತಲೂ, ಹಣ್ಣು ಕೆಟ್ಟ ವಾಸನೆ ಹೊರಸೂಸು ವುದರಿಂದ “ಡೆಡ್ ಮ್ಯಾನ್ ಟ್ರೀ’ ಎಂತಲೂ ಕರೆಯುತ್ತಾರೆ.
ಅಮೃತ ಸಮಾನ ಹಣ್ಣಿನಲ್ಲಿ ಆರೋಗ್ಯ ರಕ್ಷಣೆಗೆ ಪೂರಕವಾದ ಝರೋನಿನ್, ಬೀಟಾ ಕ್ಯಾರೋಟಿನ್, ಕ್ಯಾಲ್ಸಿಯಂ, ಮೆಗ್ನಿಷಿಯಂ, ಪೆಕ್ಟಿನ್, ಪೋಟ್ಯಾಷಿಯಂ, ಪ್ರೊಝೆರೋನಿನ್, ಪ್ರೊಝೆರೋ ನಿನೇಸ್, ಬಿ ಮತ್ತು ಸಿ ವಿಟಮಿನ್ ಮುಂತಾದ ಅಂಶ ಗಳಿರುವುದರಿಂದ ನೋನಿಯ ಉತ್ಪನ್ನಗಳು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ.
ಈ ರಸದಲ್ಲಿ ಪ್ರಬಲ ಆ್ಯಂಟಿಆಕ್ಸಿಡೆಂಟ್ಗಳೂ ಇವೆ. ಇದನ್ನು ಚರ್ಮಕ್ಕೆ ಲೇಪಿಸಿದರೆ ಉತ್ತಮ ಮಾಯಿಶ್ಚರ್ನಂತೆ ಕೆಲಸ ಮಾಡುತ್ತದೆ. ಇದರ ಬಳಕೆಯಿಂದ ಚರ್ಮ ಆರೋಗ್ಯವಾಗಿರುತ್ತದೆ.
ನೆತ್ತಿಯಲ್ಲಿ ಕೆರೆತ, ಸೋಂಕು ಉಂಟಾಗಿದ್ದರೆ ಅಲ್ಲಿಗೆ ನೋನಿ ರಸ ಲೇಪಿಸಿ. ಇದರಲ್ಲಿ ಫಂಗಸ್ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳಿದ್ದು, ಇವು ನೆತ್ತಿಯ ಸೋಂಕನ್ನು ತಡೆಯುತ್ತವೆ.
ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡಲು ನೋನಿ ರಸ ತುಂಬಾ ಬೆಸ್ಟ್. ಇದರ ನಿಯಮಿತ ಸೇವನೆಯಿಂದ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳಬಹುದು.
ನೋನಿ ರಸ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಇದರಲ್ಲಿ ವೈರಸ್ ನಿರೋಧಕ ಗುಣವೂ ಇದ್ದು, ಕೆಮ್ಮು, ಜ್ವರಕ್ಕೆ ಪರಿಣಾಮಕಾರಿಯಾಗಿದೆ.