ನವದೆಹಲಿ, ಜೂ. 05: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ RSS ಮುಖಂಡರ ಖಾತೆಗಳ ಬ್ಲೂ ಟಿಕ್ ರದ್ದು ಬೆನ್ನಲ್ಲೇ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ನೋಟಿಸ್ ಜಾರಿ ಮಾಡಿದೆ. ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ನೋಟಿಸ್ ನೀಡಲಾಗಿದೆ. ಕೇಂದ್ರ ಸರ್ಕಾರ ಹೊಸ ಐಟಿ ನಿಯಮಗಳನ್ನು ರೂಪಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಅದಕ್ಕೆ ಮೇ.15ರವರೆಗೆ ಆಕ್ಷೇಪಣೆಗೆ ಕಾಲಾವಕಾಶ ಕೂಡ ನೀಡಲಾಗಿತ್ತು. ಈಗ ಕಾಲಾವಕಾಶ ಮುಕ್ತಾಯಗೊಂಡಿದೆ. ಈಗಾಗಲೇ ವಾಟ್ಸ್ ಆಪ್ ಸೇರಿದಂತೆ ಅನೇಕ ಸೋಷಿಯಲ್ ಮೀಡಿಯಾಗಳಿಗೆ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಂತ ಕೇಂದ್ರ ಸರ್ಕಾರ, ಈಗ ಟ್ವಿಟ್ಟರ್ ಗೆ ಅಂತಿಮ ಸೂಚನೆ ನೀಡಿದೆ.
ಹೊಸ ಐಟಿ ನಿಯಮಗಳನ್ನು ಪಾಲಿಸದಿದ್ದಲ್ಲಿ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಟ್ವಿಟ್ಟರ್‌ಗೆ ನೋಟಿಸ್ನಲ್ಲಿ ಎಚ್ಚರಿಸಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯ ಅನುಸರಣಾ ಅಧಿಕಾರಿಯವರು ವಿವರಗಳನ್ನು ಒಳಗೊಂಡಂತ ಹೊಸ ಐಟಿ ನಿಯಮಗಳ್ನು ಪಾಲಿಸುವ ಪತ್ರ ಬರೆದಿದ್ದು, ಕೇಂದ್ರ ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವಂತೆ ಅಂತಿಮ ಸೂಚನೆಯನ್ನು ಪತ್ರದ ಮೂಲಕ ತಿಳಿಸಿದೆ.
ಇಂದು ಟ್ವಿಟ್ಟರ್ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ರದ್ದು ಪಡಿಸಿ ವಿವಾದಕ್ಕೂ ಗುರಿಯಾಗಿತ್ತು. ಆ ನಂತ್ರ ಮರುಸ್ಥಾಪಿಸಿತ್ತು ಕೂಡ. ಇದಾದ ನಂತ್ರ ಈಗ RSS ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ವಿವಿಧ RSS ಮುಖಂಡರಿಗೆ ನೀಡಿದ್ದಂತ ಬ್ಲೂ ಟಿಕ್ ವೆರಿಫಿಕೇಷನ್ ಬ್ಯಾಡ್ಜ್ ಅನ್ನು ರದ್ದುಗೊಳಿಸಿ, RSS ಮುಖಂಡರ ಕೆಂಗಣ್ಣಿಗೆ ಗುರಿಯಾಗಿದೆ. ಆರ್ಎಸ್ಎಸ್ ಜಂಟಿ ಕಾರ್ಯದರ್ಶಿಗಳಾದ ಕೃಷ್ಣ ಗೋಪಾಲ್ ಮತ್ತು ಅರುಣ್ ಕುಮಾರ್, ಆರ್ಎಸ್ಎಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಷಿ ಅಲಿಯಾಸ್ ಭಯ್ಯಾಜಿ, ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ ಹಾಗೂ ಆರ್ಎಸ್ಎಸ್ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ ಅವರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಅನ್ನು ಟ್ವಿಟ್ಟರ್ ರದ್ದುಪಡಿಸಿದೆ.
ಖ್ಯಾತನಾಮರ ಅಧಿಕೃತ ಖಾತೆಗಳು ಎಂದು ಗುರುತಿಸಲು ಟ್ವಿಟರ್ನಿಂದ ಅಧಿಕೃತವಾಗಿ ಬ್ಲೂ ಟಿಕ್ ನೀಡಲಾಗುತ್ತೆ. ಈಗ ಆರ್ಎಸ್ಎಸ್ ಮುಖಂಡರ ಖಾತೆಗಳಿಗೆ ಬ್ಲೂ ಟಿಕ್ ರದ್ದು ಮಾಡಿರುವುದು ವಿವಾದಕ್ಕೆ ಗುರಿಯಾಗಿದೆ. ಟ್ವಿಟ್ಟರ್ ನಡೆ ಖಂಡಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.