ಭಾರತದಲ್ಲಿ ಪಬ್‌ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್‌ಜಿ ಕಾರ್ಪೋರೇಷನ್ ತೆಗೆದುಕೊಳ್ಳಲಿದೆ. ಈ ಮೂಲಕ ಭಾರತದಲ್ಲಿ ಪ್ರತ್ಯೇಕವಾಗಿ ಪಬ್‌ಜಿ ಕಾರ್ಯ ನಿರ್ವಹಿಸಲಿದೆ. ಗಡಿ ಭಾಗದಲ್ಲಿ ಭಾರತದ ಜೊತೆಗೆ ಚೀನಾ ತಕರಾರು ತೆಗೆದ ಬೆನ್ನಲ್ಲೇ ಚೀನಾ ಬೆಂಬಲ ಇರುವ 118 ಆ್ಯಪ್ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ದೇಶದ ಭದ್ರತೆಗೆ ದಕ್ಕೆ ತರುತ್ತಿರುವ ಆರೋಪದ ಮೇಲೆ 118 ಆ್ಯಪ್ಗಳನ್ನು ಬ್ಯಾನ್ ಮಾಡಲಾಗಿದೆ. ಪಬ್‌ಜಿ ಸೇರಿ 118 ಆ್ಯಪ್ಗಳನ್ನು ಪ್ಲೇ ಸ್ಟೋರ್ನಿಂದ ತೆಗೆಯಲಾಗಿದೆ. ಆದರೆ ಈ ಆ್ಯಪ್ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇತ್ತು. ಅಕ್ಟೋಬರ್ 30ರಿಂದ ಪಬ್‌ಜಿ ಕಾರ್ಯ ಸ್ಥಗಿತಗೊಳಿಸಿದ್ದರೆ ನವೆಂಬರ್ 5ರಿಂದ ಪಬ್ ಜಿ ಲೈಟ್ ಕಾರ್ಯ ನಿಲ್ಲಿಸಿತ್ತು. ಆದರೆ, ಈಗ ಪಬ್‌ಜಿ ಮತ್ತೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ಶೀಘ್ರವೇ ಪಬ್‌ಜಿ ಮೊಬೈಲ್ ಹೊಸ ರೂಪದಲ್ಲಿ ಭಾರತಕ್ಕೆ ಬರಲಿದೆ.
ಕೊರಿಯಾದಲ್ಲಿ ಈ ಆಟ ಮೊದಲು ಪರಿಚಯಗೊಂಡಿದ್ದು 2017ರ ಡಿಸೆಂಬರ್ 20ರಂದು ಪಬ್‌ಜಿ ಕಾರ್ಪೋರೇಷನ್ ಈ ಆಟದ ಸೃಷ್ಟಿಕರ್ತ. ಆದರೆ, ಪಬ್ ಜಿ ಈ ಮೊದಲು ಕೇವಲ ವಿಡಿಯೋ ಗೇಮ್ ಆಗಿತ್ತು. ನಂತರ ಇದನ್ನು ಪಬ್‌ಜಿ ಮೊಬೈಲ್ ಆಗಿ ಬದಲಾಯಿಸಿದ್ದು ಚೀನಾ ಮೂಲದ Tencent Games ಕಂಪನಿ. ಪಬ್ಜಿಗೆ ಚೀನಾ ಕಂಪೆನಿಯ ಸಹಭಾಗಿತ್ವ ಇರುವ ಕಾರಣ ಭಾರತದಲ್ಲಿ ಈ ಗೇಮ್ ಬ್ಯಾನ್ ಮಾಡಲಾಗಿತ್ತು.
ಭಾರತದಲ್ಲಿ ಪಬ್‌ಜಿ ಮೇಲಿನ ಸಂಪೂರ್ಣ ಹಿಡಿತವನ್ನು ಪಬ್‌ಜಿ ಕಾರ್ಪೋರೇಷನ್ ತೆಗೆದುಕೊಳ್ಳಲಿದೆ. ಈ ಮೂಲಕ ಭಾರತದಲ್ಲಿ ಪ್ರತ್ಯೇಕವಾಗಿ ಪಬ್‌ಜಿ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಭಾರತದಲ್ಲಿ ಪ್ರತ್ಯೇಕ ಅಂಗಸಂಸ್ಥೆಯನ್ನು ಪಬ್‌ಜಿ ರಚನೆ ಮಾಡಲಿದೆ. ಅಲ್ಲದೆ, 100 ಕ್ಕೂ ಹೆಚ್ಚು ನೌಕರರನ್ನು ಕೂಡ ನೇಮಕ ಮಾಡಿಕೊಳ್ಳಲಿದೆ.
ಇನ್ನು, ಭಾರತಕ್ಕಾಗಿ ಕೆಲ ಬದಲಾವಣೆಯನ್ನು ಪಬ್‌ಜಿ ಮಾಡಿದೆ. ಇಲ್ಲಿ ಬರುವ ಆಟಗಾರರು ಉಡುಗೆ ಧರಿಸಿಯೇ ಬ್ಯಾಟಲ್ ಗ್ರೌಂಡ್ಗೆ ಇಳಿಯಲಿದ್ದಾರೆ. ಅಲ್ಲದೆ, ಗ್ರೀನರಿಯನ್ನು ಹೆಚ್ಚು ಹೈಲೈಟ್ ಮಾಡೋಕೆ ನಿರ್ಧರಿಸಲಾಗಿದೆ. ಪಬ್‌ಜಿ ಮತ್ತೆ ಭಾರತಕ್ಕೆ ಮರಳಿದರೆ ಪ್ಲೇಸ್ಟೋರ್ನಲ್ಲೇ ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.