ನೂತನ ಸಂಸತ್ ಭವನಕ್ಕೆ ಶಂಕು ಸ್ಥಾಪನೆ

ನವದೆಹಲಿ, ಡಿ. 10: ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ “ಸಂವಿಧಾನ ಸಭಾಂಗಣ” ಹೊಸ ಸಂಸತ್ ಭವನ ನಿರ್ಮಾಣಕ್ಕೆ ಇಂದು ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಐತಿಹಾಸಿಕ ಭಾಷಣದಲ್ಲಿ ಕರ್ನಾಟಕದ ಬಸವಣ್ಣನವರ ಅನುಭವ ಮಂಟದ ಧ್ಯೇಯ, ಉದ್ದೇಶವನ್ನು ಕನ್ನಡದಲ್ಲಿಯೇ ಸ್ಮರಿಸಿಕೊಂಡು ಕನ್ನಡಿಗರ ಗಮನ ಸೆಳೆದರು.

ವಿಶ್ವದ ಮೊದಲ ಸಂಸತ್​ ಬಸವಣ್ಣನವರ ಅನುಭವ ಮಂಟಪ. ಅದೊಂದು ಜನಸಭೆಯಾಗಿತ್ತು. ಅಲ್ಲಿ ನಾಡಿನ ಹಿತ, ಅಭಿವೃದ್ಧಿಗಳ ಕುರಿತ ಚರ್ಚೆಗಳಾಗುತ್ತಿದ್ದವು. ಅದು ಇಡೀ ಜಗತ್ತಿಗೆ ಮಾದರಿಯಾದುದು. ಭಾರತ ಪ್ರಜಾಪ್ರಭುತ್ವದ ತಾಯಿ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಒಂದು ಸಂಸ್ಕೃತಿ, ಜೀವನ ಮೌಲ್ಯ, ಜೀವನ ಪಥ ಮತ್ತು ದೇಶದ ಜೀವಾಳ . ಶತಮಾನಗಳ ಅನುಭವದ ಆಧಾರದ ಮೇಲೆ ಅಭಿವೃದ್ಧಿ ಪಡಿಸಿದ ವ್ಯವಸ್ಥೆ ನಮ್ಮ ಈ ಪ್ರಜಾಪ್ರಭುತ್ವ ಎಂದು ಪ್ರಧಾನಿ ವಿವರಿಸಿದರು.

ಒಬ್ಬ ಸಂಸದನಾಗಿ 2014ರಲ್ಲಿ ಮೊಟ್ಟ ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದ ಆ ಸಂದರ್ಭ ನನ್ನ ಬದುಕಿನ ಅವಿಸ್ಮರಣೀಯವಾದುದು. ಪ್ರಜಾಪ್ರಭುತ್ವದ ದೇಗುಲವನ್ನು ಪ್ರವೇಶಿಸುವ ಮೊದಲು ನಾನು ತಲೆಬಾಗಿ ನಮಸ್ಕರಿಸಿದ್ದೇನೆ, ಗೌರವ ಸಲ್ಲಿಸದ್ದೇನೆ. ಈ ದಿನ 130 ಕೋಟಿಗೂ ಅಧಿಕ ಭಾರತೀಯರಿಗೆ ಹೆಮ್ಮೆಯ ದಿನವಾಗಿದ್ದು, ನಾವೆಲ್ಲರೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದೇವೆ.

ಹೊಸ ಸಂಸತ್ ಭವನದ ಆವರಣವು ಹಳೆಯ ಮತ್ತು ಹೊಸ ಕಟ್ಟಡಗಳನ್ನು ಒಳಗೊಂಡಿರಲಿದೆ. ಹಳೆಯ ಸಂಸತ್ ಭವನ ದೇಶದ ಕಾಲಕಾಲದ ಅಗತ್ಯಗಳನ್ನು ಪೂರೈಸುವುದಕ್ಕೆ ಬಳಕೆಯಾಗಲಿದ್ದು, ಹೊಸ ಸಂಸತ್ ಭವನದಲ್ಲಿ ದೇಶವನ್ನು ಭವಿಷ್ಯದತ್ತ ಕೊಂಡೊಯ್ಯುವ ಚಾಲನಾ ಶಕ್ತಿ ಒದಗಿಸಲಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.

ಇಪ್ಪತ್ತೊಂದನೇ ಶತಮಾನ ಭಾರತಕ್ಕೆ ಸೇರಿದ್ದು. ಭಾರತಕ್ಕೆ ಬಂದೊದಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಮ್ಮೆಲ್ಲರಿಗೂ ದೇಶ ಮೊದಲು. ಆ ಭಾವದೊಂದಿಗೆ ಕೆಲಸ ಮಾಡೋಣ. ಆತ್ಮನಿರ್ಭರ ಭಾರತವನ್ನು ಕಟ್ಟಿ ಜಗತ್ತಿಗೆ ಮಾದರಿಯಾಗೋಣ. ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.

Latest News

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.

ರಾಜಕೀಯ

1947ರ ಹಿಂದಿನ ಕಾಂಗ್ರೆಸ್ ಬೇರೆ, ಈಗಿನ ಸೋಗಲಾಡಿ ಸಿದ್ಧಹಸ್ತರು ಇರುವ ಕಾಂಗ್ರೆಸ್ಸೇ ಬೇರೆ : ಹೆಚ್‍ಡಿಕೆ

ಇದುವರೆಗೂ ಕಾಂಗ್ರೆಸ್ ನಡೆಸಿದ ಸ್ವಾತಂತ್ರ್ಯ ವಿರೋಧಿ ಕೃತ್ಯಗಳಿಗೆ ಉತ್ತರ ಕೊಡುವಿರಾ? ಕಾಂಗ್ರೆಸ್ ಕೋಳಿ ಕೂಗಿದರೆ ಭಾರತದಲ್ಲಿ ಬೆಳಕು ಹರಿಯುತ್ತದೆ ಎನ್ನುವ ಕಾಲ ಹೋಯಿತು.

ದೇಶ-ವಿದೇಶ

8ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ; `ಜನಾದೇಶಕ್ಕೆ ದ್ರೋಹʼ : ಬಿಜೆಪಿ

164 ಶಾಸಕರ ಪಟ್ಟಿಯನ್ನು ಸಲ್ಲಿಸಿ, ಬಿಹಾರದಲ್ಲಿ ಹೊಸ ಸರ್ಕಾರ ರಚಿಸಲು ಏಳು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಿತೀಶ್ ಕುಮಾರ್ ಇಂದು ಎಂಟನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.