ದೆಹಲಿ, ಏ. 06: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI)ಯಾಗಿ ಎನ್.ವಿ.ರಮಣ ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಮಣ ಅವರನ್ನು ನೇಮಕಮಾಡಿದ್ದು, ಏಪ್ರಿಲ್ 24ರಂದು ೪೮ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಲಿದ್ದಾರೆ. ಈಗಿನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.. ಹಾಗೇ, ಮುಂದಿನ ಸಿಜೆಐ ಸ್ಥಾನಕ್ಕೆ ಎನ್.ವಿ.ರಮಣ ಹೆಸರನ್ನು ಬೊಬ್ಡೆಯವರೇ ಶಿಫಾರಸು ಮಾಡಿದ್ದರು.
1957ರ ಆಗಸ್ಟ್ 27ರಂದು ಆಂಧ್ರಪ್ರದೇಶದ ಪೊನ್ನಾವರಂ ಗ್ರಾಮದಲ್ಲಿ ಜನಿಸಿದ ಇವರು, 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿ ಜೀವನ ಆರಂಭಿಸಿದ್ದರು. ರಮಣ ಅವರು 2000ರ ಜೂನ್ 27ರಂದು ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು.