ಬೇಸಿಗೆಗಾಲ(Summer) ಸಮೀಪಿಸುತ್ತಿದಂತೆ ಆಯಾ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಗರಿಷ್ಟ ಮಟ್ಟವನ್ನು ಮೀರಿ ಕಾವೇರಿಸುತ್ತಿದೆ! ಕರ್ನಾಟಕ ರಾಜ್ಯದಲ್ಲೂ ಬಿಸಿಲಿನ ತಾಪಮಾನ ಕರಾವಳಿ ಭಾಗದಲ್ಲಿ ಕೆಂಡದಂತೆ ಇದ್ದರೆ, ಇತ್ತ ಉತ್ತರಕರ್ನಾಟಕದ ಭಾಗದಲ್ಲಿ ಬೆಂಕಿಯಂತೆ ಉರಿಯುತ್ತಿದೆ.

ಬಿಸಿಲಿನ ಆರ್ಭಟಕ್ಕೆ ಜನರು ಸಂಪೂರ್ಣ ನಲುಗಿದ್ದು, ಮನೆಯಿಂದ ಹೊರಬರುವುದಕ್ಕೆ ಯೋಚಿಸುತ್ತಿದ್ದಾರೆ. ಈ ಮಧ್ಯೆ ಓಡಿಸಾ ಸರ್ಕಾರ ತಮ್ಮ ರಾಜ್ಯದಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪಮಾನ ತಡೆಯಲಾರದೇ ವಿಭಿನ್ನ ರೀತಿಯಲ್ಲಿ ನಿರ್ಧಾರ ಕೈಗೊಂಡಿದೆ. ಹೌದು, ಓಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದಲ್ಲಿ ಬಿಸಿಲ ಬೇಗೆ ಗರಿಷ್ಟ ಮಟ್ಟವನ್ನು ಮೀರುತ್ತಿರುವ ಕಾರಣ, ಒಡಿಶಾ ಸರ್ಕಾರ ರಾಜ್ಯದ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಮೇ 2 ರಿಂದ ಶಾಲೆಗಳು ಬೆಳಗ್ಗೆ 6 ರಿಂದ 9 ರವರೆಗೆ ಆಫ್‍ಲೈನ್ ಕ್ಲಾಸ್‍ಗಳನ್ನು ನಡೆಸಲಿದ್ದೇವೆ ಎಂದು ಸಮೂಹ ಶಿಕ್ಷಣ ಇಲಾಖೆ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿದುಬಂದಿದೆ.
ಗೊಂದಲಗಳನ್ನು ಬಗೆಹರಿಸಿದ ಸರ್ಕರವು ಸದ್ಯದ ಪರಿಸ್ಥಿತಿಯನ್ನು ಬಹಳ ಸೂಕ್ಷ್ಮವಾಗಿ ಪರಿಗಣಿಸಿದ ಬಳಿಕ ಶಾಲೆಗಳಲ್ಲಿ ಪಾಠದ ವೇಳೆಯನ್ನು ಮೇ 02 ಸೋಮವಾರದಿಂದ ಬೆಳಗ್ಗೆ 6 ರಿಂದ 9 ರವರೆಗೆ ನಡೆಸಲು ಯೋಜಿಸಿದೆ. ಅದರಂತೆಯೇ ಪಾಲಿಸುತ್ತಿದೆ. ಸದ್ಯ ಈ ಹಿಂದೆ ನಿಗದಿ ಮಾಡಲಾಗಿದ್ದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.