ಉಕ್ರೇನ್ ಹಾಗೂ ರಷ್ಯಾದ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ಸದ್ಯಕ್ಕೆ ಇದು ನಿಲ್ಲುವ ಲಕ್ಷಣ ಕಾಣುತ್ತಿಲ್ಲ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಒಂದು ಗುಡುಗು ಉಕ್ರೇನ್ ಹಾಗೂ ಮಿತ್ರರಾಷ್ಟ್ರಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಪುಟಿನ್ ಅಣ್ವಸ್ತ್ರ ಬಳಕೆಯ ಕುರಿತು ಕೊಟ್ಟ ಒಂದು ಸಣ್ಣ ಕುರುಹು ಇಡೀ ವಿಶ್ವವನ್ನೇ ಕಂಗಾಲಾಗಿಸಿದೆ. ಯಾಕಂದ್ರೆ ರಷ್ಯಾ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಣ್ವಸ್ತ್ರ ಹೊಂದಿರುವ ರಾಷ್ಟ್ರವಾಗಿದೆ.
ರಷ್ಯಾ ಉಕ್ರೇನ್‌ನ ತುಂಡು ಭೂಮಿ ಕಬಳಿಸಲು ಅಣು ಬಾಂಬ್ ಬೆದರಿಕೆ ಒಡ್ಡುತ್ತಿದೆಯಾ ಅಥವಾ ನಿಜವಾಗಿಯೂ ಅಣ್ವಸ್ತ್ರ ಬಳಕೆ ಮಾಡುತ್ತಾ ಅನ್ನೋ ಗೊಂದಲ ಇಡೀ ವಿಶ್ವವನ್ನೇ ಕಾಡುತ್ತಿದೆ.
ಒಂದು ವೇಳೆ ರಷ್ಯಾ ಅಣ್ವಸ್ತ್ರ ಬಳಕೆ ಮಾಡಿದ್ದೇ ಆದ್ರೆ, ಅದು ಈ ಶತಮಾನದ ಘೋರ ದುರಂತಕ್ಕೆ ನಾಂದಿ ಹಾಡಲಿದೆ. ಉಕ್ರೇನ್ ಸರ್ವನಾಶವಾಗುವುದರ ಜೊತೆ ಜೊತೆಗೆ ಪ್ರಪಂಚದ ಇತರ ರಾಷ್ಟ್ರಗಳೂ ಇದರ ದುಷ್ಪರಿಣಾಮ ಅನುಭವಿಸಬೇಕಾದೀತು. ಉಕ್ರೇನ್ ರಷ್ಯಾ ಯುದ್ದ ನಮಗ್ಯಾಕೆ ಅನ್ನೋರು ಇತ್ತ ಒಮ್ಮೆ ಗಮನಿಸಲೇ ಬೇಕು. ಎಲ್ಲೋ ಯುದ್ದ ಆದ್ರೆ ನಮಗೇನಾಗುತ್ತೆ ಅನ್ನೋ ಅಸಡ್ಡೆ ಪ್ರಶ್ನೆಗಳಿಗೆ ಒಂದಷ್ಟು ಖಾರದ ಉತ್ತರಗಳು ಖಂಡಿತ ಇವೆ. ಜಗತ್ತು ಎಂದ ಮೇಲೆ ಎಲ್ಲಾ ದೇಶಗಳು ಒಂದಲ್ಲಾ ಒಂದು ದೇಶವನ್ನ ಅವಲಂಭಿಸಿಯೇ ಇರುತ್ತವೆ.
ಒಂದು ವಸ್ತುವನ್ನ ಆಮದು ಮಾಡಿಕೊಳ್ಳಬಹುದು ಇಲ್ಲಾ ರಫ್ತುವನ್ನಾದರೂ ಮಾಡಬಹುದು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದ್ರು ದೇಶದಲ್ಲಿ ಬೆಲೆ ಏರಿಳಿತಗಳು ಸರ್ವೇಸಾಮಾನ್ಯವಾಗಿ ಬಿಡುತ್ತವೆ. ಹಾಗೆ ನೋಡೋದಾದ್ರೆ ಇತ್ತೀಚಿನ ದಿನಮಾನಗಳಲ್ಲಿ ನಾವು ರಷ್ಯಾ ಮತ್ತು ಉಕ್ರೇನ್ ನಿಂದ ದಿನನಿತ್ಯದ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈಗ ಯುದ್ಧ ಭೀತಿಯಿಂದ ಆಮದು ಸಂಪೂರ್ಣವಾಗಿ ಸ್ಥಗಿತವಾಗಿದೆ. ಆದ್ದರಿಂದ ಬೇಡಿಕೆ ಗಣನೀಯವಾಗಿ ಹೆಚ್ಚಾಗಿರೋದ್ರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದು ಖಚಿತವಾಗಿದೆ. ಜಾಗತಕ ಮಟ್ಟದಲ್ಲಿ 60 ಡಾಲರ್ ಇದ್ದ ಕಚ್ಚಾತೈಲದ ಬೆಲೆ 130 ಡಾಲರ್ ಗೆ ಹೆಚ್ಚಳವಾಗಿದೆ. ಅಂದರೆ ಬರೋಬ್ಬರಿ ದುಪ್ಪಟ್ಟಾಗಿದೆ. ಹಾಗಾಗಿ ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಾಗುವ ಬಗ್ಗೆ ತಜ್ಞರು ಅಂದಾಜಿಸಿದ್ದಾರೆ.
ಅಡುಗೆ ಎಣ್ಣೆ ಕೂಡ 160 ರಿಂದ 180 ರೂಪಾಯಿ ದುಬಾರಿಯಾಗ ಬಹುದು. ಗೋಧಿಯನ್ನ ನಾವು ಅತಿ ಹೆಚ್ಚು ಆಮದು ಮಾಡಿಕೊಳ್ಳುವುದರಿಂದ ಗೋಧಿ ಬೆಲೆ ಶೇಕಡ 55 ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ನಿಧಾನವಾಗಿ ಗ್ಯಾಸ್ ಸಿಮೆಂಟ್ ಕಬ್ಬಿಣದ ಬೆಲೆ ಏರಿಕೆಯಾಗಿದೆ. ಕಬ್ಬಿಣ ಟನ್ ಗೆ 10 ಸಾವಿರ ರೂ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆಯಾಗಬಹುದು. ಅಗತ್ಯ ವಸ್ತುಗಳ ಪೂರೈಕೆ ಕೊರತೆ ಸಾಧ್ಯತೆ ಇದೆ. ರಸಗೊಬ್ಬರದ ಬೆಲೆ ಏರಿಕೆಯಾಗಲಿದೆ. ಭಾರತದಿಂದ ರಷ್ಯಾಕ್ಕೆ ರಫ್ತು ಆಗುತ್ತಿದ್ದ tea, coffee, meat ಅಕ್ಕಿ, ಹಣ್ಣು ತರಕಾರಿಗಳು, ದವಸ ಧಾನ್ಯಗಳು ಜೊತೆಗೆ ತಂಬಾಕು(tobaacco) ಇವೆಲ್ಲವು ಸ್ಥಗಿತವಾಗಿ ಭಾರತದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.
ಕಚ್ಚಾ ತೈಲದ ಬೆಲೆ ಮತ್ತಷ್ಟು ಗಗನಕ್ಕೇರಲಿದೆ : ಒಂದು ಬ್ಯಾರಲ್ ಕಚ್ಚಾ ತೈಲದ ದರ 65 ಡಾಲರ್ ಇದ್ದ ಸಂಧರ್ಭದಲ್ಲಿ ಪೆಟ್ರೋಲ್ ದರ ಭಾರತದಲ್ಲಿ 110 ರವರೆಗೆ ಏರಿಕೆಯಾಗಿತ್ತು. ಈಗ ಯುದ್ಧದ ಎಫೆಕ್ಟ್ ನಿಂದ ಒಂದು ಬ್ಯಾರಲ್ ಕಚ್ಚಾ ತೈಲದ ದರ 130 ಡಾಲರ್ ಆಗುವ ಎಲ್ಲಾ ಸೂಚನೆಗಳು ಇದೆ. ಒಂದು ವೇಳೆ ಏರಿಕೆ ಆಗಿದ್ದೇ ಆದಲ್ಲಿ ಭಾರತದಲ್ಲಿ ಪೆಟ್ರೋಲ್ ದರ ಜನ ಸಾಮಾನ್ಯನಿಗೆ ಊಹಿಸಲು ಅಸಾಧ್ಯ. ಈಗಾಗಲೇ ಅಮೇರಿಕಾ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ತೈಲ ಆಮದನ್ನ ನಿರ್ಭ0ದಿಸಿಕೊಂಡಿದೆ.
ಈ ಹಿನ್ನಲೆಯಲ್ಲಿ ಅರಬ್ ರಾಷ್ಟ್ರಗಳು ನಾ ಮುಂದು ತಾ ಮುಂದು ಎಂದು ತನ್ನ ರಾಷ್ಟ್ರಗಳಿಂದ ತೈಲ ರಫ್ತು ಮಾಡಲು ಮುಗಿ ಬೀಳುತ್ತಿದೆ. ವೀಕ್ಷಕರೆ ಯುದ್ಧ ಅನ್ನೋದು ಬರೀ ಶಸ್ತ್ರಾಸ್ತ್ರಗಳ ಸೆಣಸಾಟ ಮಾತ್ರವಲ್ಲ, ಜಾಗತಿಕ ವ್ಯವಹಾರದ ಜೊತೆಗೆ ನಡೆಯೋ ರಣಭೀಕರ ಕಲಹವು ಹೌದು. ಆದಷ್ಟು ಬೇಗ ಯುದ್ಧಕ್ಕೊಂದು ಅಂತ್ಯ ಸಿಗಲಿ ಎಂದು ಆಶಿಸೋಣ.,
- ಮುಸ್ತಫ