ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದು ಡಿಸೇಲ್ ಹಾಗೂ ಪೆಟ್ರೋಲ್ ದರಗಳಿಗೆ ಕಡಿವಾಣ ಬಿದ್ದಿದೆ. ಆದರೂ ಕೂಡ ಭಾರತದಾದ್ಯಂತ ಡೀಸೆಲ್ ಹಾಗೂ ಪೆಟ್ರೋಲ್ ದರ ದಲ್ಲಿ ಇಳಿಕೆಯಾಗಿಲ್ಲ. ಕೊವೀಡ್ ನಡುವೆಯು ದಿನದಿಂದ ದಿನಕ್ಕೆ ಪೆಟ್ರೋಲ್ ದರ ಏರಿಕೆ ಆಗುತ್ತಿರುವುದು ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿರುವುದು ವಿಪರ್ಯಾಸವೇ ಸರಿ.
ಈ ತಿಂಗಳ ಆರಂಭದಲ್ಲೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯು ಕುಸಿದಿದ್ದು ಆದರೆ ತೈಲ ಬೆಲೆ ಕುಸಿದು ಸರಿ ಸಮಾರು 10 ದಿನಗಳು ಕಳೆದರೂ ಕೂಡ ಕೇಂದ್ರ ಸರ್ಕಾರ ತೈಲಬೆಲೆ ಕಡಿಮೆ ಮಾಡುವ ಗೋಜಿಗೆ ಹೋಗಿಲ್ಲ. ಭಾರತದಲ್ಲಿ ಮೊದಲ ಬಾರಿಗೆ ಡಿಸೇಲ್ ಮತ್ತು ಪೆಟ್ರೋಲ್ ನಲ್ಲಿ ಸಾರ್ವಕಾಲೀಕ ಏರಿಕೆ ಕಂಡಿದ್ದು, ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕುಸಿದಿದ್ದರೂ ಕೂಡ ಕೇಂದ್ರ ಸರ್ಕಾರ ಡಿಸೇಲ್ ಮತ್ತು ಪೆಟ್ರೋಲ್ ದರ ಕಡಿಮೆ ಮಾಡದಿರುವುದು ಸಾರ್ವಜನಿಕರನ್ನು ಮತಷ್ಟು ಚಿಂತೆಗೀಡುಮಾಡಿದೆ.
ಅಗತ್ಯ ವಸ್ತುಗಳು ದುಬಾರಿ :
ದೇಶಾದ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರುತ್ತಿದ್ದಂತೆ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದ್ದು, ಸಾಮನ್ಯ ಜನರನ್ನು ಆರ್ಥಿಕ ಸಂಕಷ್ಟಕ್ಕ ದೂಡಿದೆ. ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಾದ ಪರಿಣಾಮ ವಸ್ತುಗಳನ್ನು ಸಾಗಿಸುವ ವಾಹನಗಳ ಬಾಡಿಗೆ ದರವೂ ಏರಿಕೆಯಾಯಿತು. ಇದರಿಂದಾಗಿ ವ್ಯಾಪರಿಗಳು ಕೂಡ ಅಗತ್ಯ ವಸ್ತುಗಳ ಸಹಿತ ಇತರೆ ವಸ್ತುಗಳ ಬೆಲೆ ಕೂಡ ಏರಿಸಿರುವುದು ಜನರ ಗಾಯದ ಮೇಲೆ ಬರೆ ಎಳೆಂದತಾಗಿದೆ. ಇದರ ಜೊತೆಗೆ ಕಳೆದ ಸುಮಾರು 1 ವರ್ಷದಿಂದ ಕೊರೊನಾ ಹಾವಳಿಯಿಂದಾಗಿ ಸಾಕಷ್ಟು ಮಂದಿ ಕೆಲಸವಿಲ್ಲದೆ ಜೀವನ ನಡೆಸುತ್ತಿದ್ದು, ಇದೀಗ ಡಿಸೇಲ್ ಮತ್ತು ಪೆಟ್ರೋಲ್ ಬೆಲೆ ಕಡಿಮೆಯಾಗದಿರುವುದು ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಅಗತ್ಯವಸ್ತುಗಳು ಮಾತ್ರವಲ್ಚದೆ ವಾಹನ ಮಾಲೀಕರು ಹಾಗೂ ಖಾಸಗಿ ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳು ಕೂಡ ಬಾಡಿಗೆ ಮತ್ತು ಟಿಕೆಟ್ ದರ ಏರಿಸಿರುವುದು ಕೂಡ ಜನರ ಜೇವನದ ಮೇಲೆ ಹೊಡೆತ ಬಿದ್ದಿರುವುದಂತೂ ನಿಜ.
ಬೆಲೆ ಏರಿಕೆಗೆ ಕಾರಣಗಳು : ಭಾರತವು ಶೇ 85% ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತಿದೆ ಈ ಕಾರಣದಿಂದಾಗಿ ಡಿಸೇಲ್ ಮತ್ತು ಪೆಟ್ರೋಲ್ ಮೇಲೆ ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ಸುಂಕಗಳನ್ನು ವಿಧಿಸಿರುವುದು ತೈಲ ಬೆಲೆ ಏರಿಕೆಗೆ ಪರೋಕ್ಷ ಕಾರಣವಾಗಿದೆ. ಡಿಸೇಲ್ ಮತ್ತು ಪೆಟ್ರೋಲ್ ಮೇಲೆ ಕೇಂದ್ರ 60% ಮತ್ತು ರಾಜ್ಯ 54% ಸುಂಕ ವಿಧಿಸುತ್ತವೆ. ಮಾರ್ಚ್ ತಿಂಗಳ ವೇಳೆ ಪೆಟ್ರೋಲ್ ಮೂಲ ಬೆಲೆ 33.26 ಆಗಿದ್ದಾಗ ಶಿಪ್ಪಿಂಗ್ ಶುಲ್ಕ ಪ್ರತಿ ಲೀಟರ್ ಗೆ 0.28, ಅಬಕಾರಿ ಶುಲ್ಕ 32.96, ಮಾರಟಗಾರರ ಕಮೀಷನ್ 3.69 ಮತ್ತು ವ್ಯಾಟ್ 21 ರೂ ಇತ್ತು. ಭಾರತವು ಮೂಲಬೆಲೆಗೆ ಖರೀದಿಸುವ ಮೌಲ್ಯಕ್ಕಿಂತ ಸುಮಾರು 65ರೂ ಗಳಷ್ಟು ಹೆಚ್ಚು ಹಣವನ್ನು ವಾಹನ ಸವಾರರು, ಮಾಲೀಕರು ಕೊಡಬೇಕಾಗಿದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ದರವು ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕರಿಗೂ ಹೊರೆ ಕಡಿಮೆಯಾಗಲಿದೆ.
ಬೆಂಗಳೂರಿನಲ್ಲಿ ಕಳೆದ 3 ದಿನಗಳಲ್ಲಿನ ಪೆಟ್ರೋಲ್ ದರ (ಪ್ರತಿ ಲೀಟರ್)
ಆಗಸ್ಟ್ : 09: 105.25
ಆಗಸ್ಟ್ : 10: 105.25
ಆಗಸ್ಟ್ : 11: 105.25
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ : 09: 95.26
ಆಗಸ್ಟ್ : 10: 95.26
ಆಗಸ್ಟ್ : 11: 95.26