download app

FOLLOW US ON >

Tuesday, January 25, 2022
English English Kannada Kannada

ಗುಜರಾತ್‌ನಲ್ಲಿ ಒಮಿಕ್ರಾನ್‌ ಪ್ರಕರಣ ಪತ್ತೆ

ಕರ್ನಾಟಕದಲ್ಲಿ 2  ಒಮಿಕ್ರಾನ್‌ ಪ್ರಕರಣ ಕಂಡುಬಂದ ಬೆನ್ನಲ್ಲೇ ಇತ್ತ ಗುಜರಾತ್‌ನಲ್ಲಿ ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರ ಓಮಿಕ್ರಾನ್ (Omicron) ಪತ್ತೆಯಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು  ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ.

ನವದೆಹಲಿ ಡಿ 4 : ಕರ್ನಾಟಕದಲ್ಲಿ 2  ಒಮಿಕ್ರಾನ್‌ ಪ್ರಕರಣ ಕಂಡುಬಂದ ಬೆನ್ನಲ್ಲೇ ಇತ್ತ ಗುಜರಾತ್‌ನಲ್ಲಿ ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರ ಓಮಿಕ್ರಾನ್ (Omicron) ಪತ್ತೆಯಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ಒಮಿಕ್ರಾನ್‌ನ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು  ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. 


ದಕ್ಷಿಣ ಆಫ್ರಿಕಾ ದಿಂದ ಬಂದಿರುವ ವ್ಯಕ್ತಿಯ ಆರ್‌ಟಿ-ಪಿಸಿಆರ್ (RT-PCR) ವರದಿಗಳನ್ನು ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿದೆ.  ಜಿಂಬಾಬ್ವೆ ನಿವಾಸಿಯೊಬ್ಬರು ಜಾಮ್‌ನಗರಕ್ಕೆ ಆಗಮಿಸಿದ್ದು, ಅವರ COVID-19 ನ ವರದಿಯು ಪಾಸಿಟಿವ್ ಬಂದಿದ್ದು, ಅವರು ಒಮಿಕ್ರಾನ್‌ನಿಂದ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಕಂಡುಹಿಡಿಯಲು ಮಾದರಿಗಳನ್ನು ಮತ್ತೊಂದು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರ ವರದಿ ಬಂದಿದ್ದು ಅವರು ಒಮಿಕ್ರಾನ್‌ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ ಎಂದು ಶುಕ್ರವಾರ ಗುಜರಾತ್‌ನ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. 

ಇದೀಗ ದೇಶದಲ್ಲಿ ಒಂದೊಂದೇ ಪ್ರಕರಣಗಳು ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಕರೋನಾ ವೈರಸ್‌ನ (Coronavirus) ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ರೂಪಾಂತರವು ಐದು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ಹಿಂದಿನಂತೆ ಮುನ್ನೆಚ್ಚರಿಕೆ ವಹಿಸುವಂತೆ ಸರ್ಕಾರ ಸಲಹೆ ನೀಡಿದೆ. 

WHO ಹೇಳಿಕೆ :
ಒಮಿಕ್ರಾನ್ ಅನ್ನು ಕಂಡುಹಿಡಿದ ದಕ್ಷಿಣ ಆಫ್ರಿಕಾದ ವೈದ್ಯರು ಪ್ರಸ್ತುತ ರೋಗಿಗಳಲ್ಲಿ ಸೌಮ್ಯವಾದ ರೋಗಲಕ್ಷಣಗಳನ್ನು ಮಾತ್ರ ಕಾಣುತ್ತಿದ್ದಾರೆ ಎಂದು ಹೇಳಲಾಗಿದೆ. ಈ ರೂಪಾಂತರದಿಂದ ಸೋಂಕಿಗೆ ಒಳಗಾದ ಜನರು ಗಂಭೀರವಾದ ಅನಾರೋಗ್ಯಕ್ಕೆ ಒಳಗಾಗಲಿಲ್ಲ. WHO ಒಮಿಕ್ರಾನ್ ಅನ್ನು ‘ವೆರಿಯೇಂಟ್ ಆಫ್ ಕನ್ಸರ್ನ್ ವಿಭಾಗದಲ್ಲಿ ಇರಿಸಿದೆ. Omicron ರೂಪಾಂತರದ ಬಗ್ಗೆ ನಿಖರವಾಗಿ ಯಾವುದೂ ಸ್ಪಷ್ಟವಾಗಿಲ್ಲ. 

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article