ಇಂದು ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಹೆಚ್ಚಳ ; ಪೆಟ್ರೋಲ್, ಡೀಸೆಲ್ ದರಗಳು ಮತ್ತಷ್ಟು ಹೆಚ್ಚಾಗುತ್ತದೆಯಾ?

ದೇಶದಾದ್ಯಂತ ಹಲವಾರು ಪ್ರದೇಶಗಳಲ್ಲಿ ಪೆಟ್ರೋಲ್(Petrol) ಮತ್ತು ಡೀಸೆಲ್(Diesel) ಬೆಲೆಗಳು ಕ್ರಮವಾಗಿ 100 ರೂ. ಗಡಿ ತಲುಪಿದ್ದು, ಸಾಮಾನ್ಯ ಜನರ ಮೇಲೆ ತಾಳಲಾರದ ಹೊರೆಯನ್ನು ಹೆಚ್ಚಿಸಿದೆ. ಇಂದು ಏಪ್ರಿಲ್ 04 ಸೋಮವಾರ(Monday) ಕೂಡ ಇಂಧನ(Oil) ದರದಲ್ಲಿ 40-43 ಪೈಸೆ ಹೆಚ್ಚಳವಾಗಿದೆ.

ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ದೀರ್ಘಾವಧಿಯ ವಿರಾಮ ಕೊನೆಗೊಂಡ ಬಳಿಕ ಬೆಲೆಯಲ್ಲಿ ಇದು 12ನೇ ದಿನದ ಹೆಚ್ಚಳವಾಗಿದೆ. ಒಟ್ಟಾರೆಯಾಗಿ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಲೀಟರ್‌ಗೆ 8.40 ರೂ.ಗಿಂತ ಹೆಚ್ಚಾಗಿದೆ. ಇಂಧನ ದರಗಳನ್ನು ದೇಶಾದ್ಯಂತ ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯ ಸಂಭವವನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಶ್ರೀನಗರದಿಂದ ಕೊಚ್ಚಿವರೆಗಿನ ಎಲ್ಲಾ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100 ರೂ. ಗರಿಷ್ಠತೆಯನ್ನು ತಲುಪಿದೆ.

ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ 103.81 ಮತ್ತು 95.07 ರೂ. ಮುಂಬೈನಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್‌ಗೆ 118.83 ರೂ ಮತ್ತು 103.07 ರೂ. ಇದೆ. ಕೋಲ್ಕತ್ತಾದಲ್ಲಿ ಸೋಮವಾರ ಪೆಟ್ರೋಲ್ ದರ ಲೀಟರ್‌ಗೆ 113.45 ರೂ ಮತ್ತು ಡೀಸೆಲ್ ಲೀಟರ್‌ಗೆ 98.22 ರೂ. ರಾಜ್ಯದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 109.41 ರೂ. ಚೆನ್ನೈ 109.34, ಗುರ್ಗಾಂವ್ 104.06, ನೋಯ್ಡಾ 104.00, ಲಕ್ನೋ ರೂ 103.52, ಪಾಟ್ನಾ ರೂ 115.45, ಮತ್ತು ಹೈದರಾಬಾದ್ ರೂ 117.68.

ಪಿಟಿಐ ವರದಿಯ ಅನುಸಾರ, ಭುವನೇಶ್ವರ್, ಹೈದರಾಬಾದ್, ಪಾಟ್ನಾ, ತಿರುವನಂತಪುರಂ, ಮುಂಬೈ, ರಾಯ್‌ಪುರ ಮತ್ತು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವಾರು ನಗರಗಳಲ್ಲಿ ಡೀಸೆಲ್ ಬೆಲೆ 100 ರೂ ಗಡಿ ದಾಟಿದೆ. ಆಂಧ್ರಪ್ರದೇಶದ ಚಿತ್ತೋರ್‌ನಲ್ಲಿ ಡೀಸೆಲ್ ಅತ್ಯಂತ ದುಬಾರಿಯಾಗಿದ್ದು, (ಲೀಟರ್‌ಗೆ 105.52 ರೂ.), ಆದರೆ ಪೆಟ್ರೋಲ್ ಲೀಟರ್‌ಗೆ 120.65 ರೂ. ರಾಜಸ್ಥಾನದ ಗಡಿ ಪಟ್ಟಣವಾದ ಶ್ರೀ ಗಂಗಾನಗರದಲ್ಲಿ ದುಬಾರಿಯಾಗಿದೆ. ಇದು ಸದ್ಯ ಆಯಾ ರಾಜ್ಯಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆಗೊಂಡಿರುವ ವರದಿ.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.