• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಗುಡ್ ನ್ಯೂಸ್

‘ಒಂದೆಲಗ’ದಲ್ಲಿದೆ ಆರೋಗ್ಯ

Sharadhi by Sharadhi
in ಗುಡ್ ನ್ಯೂಸ್, ಲೈಫ್ ಸ್ಟೈಲ್
‘ಒಂದೆಲಗ’ದಲ್ಲಿದೆ ಆರೋಗ್ಯ
0
SHARES
0
VIEWS
Share on FacebookShare on Twitter

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ವೃದ್ಧಿಸಬಹುದು. ಅನೇಕ ಬಾರಿ ನಮಗೆ ಅದರ ಮೌಲ್ಯಗಳೇ ತಿಳಿದಿರುವುದಿಲ್ಲ. ಒಂದೆಲಗ ಇದೊಂದು ಗಿಡಮೂಲಿಕೆಯೂ ಹೌದು, ಇದರ ಹೆಸರೇ ಹೇಳುವಂತೆ ಏಕಪರ್ಣೀ ಎಂದು ಕರೆಯುತ್ತಾರೆ. ಭಾರತದಲ್ಲಿ ಇದು ವಿಶೇಷವಾಗಿ ಸಿಗುತ್ತದೆ. ಇದು ತುಂಬಾ ಸಣ್ಣ ಗಿಡಮೂಲಿಕೆಯಾಗಿದ್ದು, ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಇದರಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳು ದೃಢಪಡಿಸಿದ್ದರೂ ಕೆಲವರು ಇನ್ನೂ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಒಂದೆಲಗದಿಂದ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯ ಲಾಭಗಳು ಇವೆ ಎಂಬುದನ್ನು ಇಲ್ಲಿ ತಿಳಿಯೋಣ.

ಈ ಗಿಡಮೂಲಿಕೆಯನ್ನು ಸಾಮಾನ್ಯವಾಗಿ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು ಎಂದು ಆಯುರ್ವೇದಲ್ಲಿ ಹೇಳಿದೆ. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು. ಈ ಗಿಡಮೂಲಿಕೆಯ ಪ್ರಮುಖ ಉಪಯೋಗಗಳೇನು ಎಂಬುದನ್ನು ನೋಡೋಣ.

  • ಇದು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿ. ಈ ಗಿಡಮೂಲಿಕೆ ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆಯು ದೂರವಾಗಿ ಶಕ್ತಿ ಬರುವುದು.
  • ಒಂದೆಲಗ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಅಲ್ಝೈಮರ್, ಖಿನ್ನತೆ ಮತ್ತು ಆತಂಕ ಇತ್ಯಾದಿ ದೂರ ಮಾಡಲು ನೆರವಾಗುವುದು.
  • ಈ ಗಿಡಮೂಲಿಕೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ.
  • ಈ ಗಿಡಮೂಲಿಕೆಯನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್, ಡರ್ಮಟೈಟಿಸ್ ಇತ್ಯಾದಿಗಳ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುವುದು.
  • ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು (hyperactive) ಅಪಾಯಕ್ಕೆ ಎದುರಾಗ ಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.
  • ವಯಸ್ಸಾಗುವ ಚರ್ಮಕ್ಕೆ ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ವಯಸ್ಸಾಗುವ ಚರ್ಮ, ನೆರಿಗೆ ಮತ್ತು ಗೆರೆಗಳನ್ನು ನಿವಾರಿಸುವುದು. ಕಾಲಜನ್ ಉತ್ಪತ್ತಿಯು ಕಡಿಮೆಯಾದರೆ ಅದರಿಂದ ನೆರಿಗೆ, ವಯಸ್ಸಾಗುವಾಗ ಮೂಡುವ ಸುಕ್ಕು ಚರ್ಮವನ್ನು ಸರಿಯಾಗಿಸುವುದು.
  • ಒಂದೆಲಗವನ್ನು ತುಂಬಾ ಹಿಂದಿನಿಂದಲೂ ಕೂದಲು ಉದುರುವಿಕೆ ತಡೆಯಲು ಬಳಸಲಾಗುತ್ತಿದೆ. ಇದು ಕೂದಲಿನ ಮರುಬೆಳವಣಿಗೆಗೆ ನೆರವಾಗುವುದು. ಕೂದಲಿನ ಕಿರುಚೀಲಗಳು ಪೋಷಣೆಯಿಲ್ಲದೆ ದುರ್ಬಲಗೊಂಡಾಗ ಕೂದಲು ಉದುರುವುದು. ಈ ಗಿಡಮೂಲಿಕೆಯು ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ, ತಲೆಬುರುಡೆಗೆ ಪೋಷಣೆ ನೀಡುವುದು. ಇದು ರಕ್ತಸಂಚಾರ ಉತ್ತಮಪಡಿಸಿ, ಕೂದಲ ಬೆಳವಣಿಗೆಗೆ ನೆರವಾಗುವುದು.
  • ತಲೆಬುರುಡೆಯಲ್ಲಿ ರಕ್ತಸಂಚಾರ ಸುಧಾರಣೆ ಒಂದೆಲಗದಿಂದಾಗಿ ರಕ್ತನಾಳಗಳು ಆರಾಮವಾಗಿ ರಕ್ತ ಸಂಚಾರವು ಉತ್ತಮವಾಗುವುದು. ಇದರಿಂದ ಆಮ್ಲಜನಕ ಮತ್ತು ಇತರ ಪೋಷಕಾಂಶಗಳು ತಲೆಬುರುಡೆಗೆ ಪ್ರವೇಶಿಸಲು ಜಾಗ ಸಿಗುವುದು. ಒಂದೆಲಗವು ತಲೆಬುರುಡೆಗೆ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು, ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು. ಇದರಿಂದ ಬಲಿಷ್ಠ, ಕಾಂತಿಯುತ ಕೂದಲು ನಮ್ಮದಾಗುವುದು.
  • ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಒಂದೆರಡು ಎಲೆ ಒಂದೆಲಗವನ್ನು ತಿನ್ನುವುದರಿಂದ ಬುದ್ಧಿಶಕ್ತಿ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು ಆಯುರ್ವೇದದಲ್ಲಿ ಉಲ್ಲೇಖಿಸಿದೆ.

ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಗಿಡಮೂಲಿಕೆಯು ಪರಿಹಾರವಾಗಿದೆ. ಆದ್ದರಿಂದ ಪ್ರತಿನಿತ್ಯದ ಆಹಾರದಲ್ಲಿ ಈ ಗಿಡಮೂಲಿಕೆಯನ್ನು ಹೆಚ್ಚಾಗಿ ಬಳಸಿದರೆ ಉತ್ತಮ.

Related News

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?
ಲೈಫ್ ಸ್ಟೈಲ್

2022ರಲ್ಲಿ ಅತಿ ಹೆಚ್ಚು ವಿವಾಹಗಳನ್ನು ಆಯೋಜಿಸಿದ ನಗರ ಯಾವುದು ಗೊತ್ತಾ ?

January 20, 2023
60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು
ಮನರಂಜನೆ

60 ವರ್ಷ ಪೂರೈಸಿದ್ದೇನೆ, ಈಗ ನಾನು ತಾತನಾಗಿರುವೆ : ಜಗ್ಗೇಶ್ ಪದವಿಪೂರ್ವ ಚಿತ್ರಕ್ಕೆ ಶುಭಹಾರೈಸಿ, ಹಳೆಯ ನೆನಪುಗಳ ಮೇಲುಕು

December 10, 2022
ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!
Vijaya Time

ಕಾಂತಾರ ನೋಡಿಲ್ಲ ಎಂದು ಟ್ರೋಲ್ ಮಾಡಿದವರಿಗೆ ನಾನು ನೋಡಿದ್ದೇನೆ ಎಂದ ನಟಿ ರಶ್ಮಿಕಾ ಮಂದಣ್ಣ!

December 10, 2022
2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?
ಮನರಂಜನೆ

2022 ರಲ್ಲಿ ಗೂಗಲ್‌ನಲ್ಲಿ  ಅತಿಹೆಚ್ಚು ಹುಡುಕಿದ ಚಲನಚಿತ್ರಗಳ ಪಟ್ಟಿ ಬಿಡುಗಡೆ ; ಕಾಂತಾರ-ಕೆಜಿಎಫ್‌ಗೆ ಎಷ್ಟನೇ ಸ್ಥಾನ?

December 8, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.