• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ʻಆಪರೇಷನ್‌ ಸಿಂಧೂರʼಕ್ಕೆ ಒಂದು ವರ್ಷ: India Forgives Nothing ಎಂದು ಸಂದೇಶ ರವಾನಿಸಿದ ಭಾರತೀಯ ಸೇನೆ 

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ʻಆಪರೇಷನ್‌ ಸಿಂಧೂರʼಕ್ಕೆ ಒಂದು ವರ್ಷ: India Forgives Nothing ಎಂದು ಸಂದೇಶ ರವಾನಿಸಿದ ಭಾರತೀಯ ಸೇನೆ 
0
SHARES
5
VIEWS
Share on FacebookShare on Twitter

ಆಪರೇಷನ್ ಸಿಂದೂರ್ ಗೆ (One year of operation sindoor) 1 ವರ್ಷ

ಭಾರತ ಯಾವುದನ್ನೂ ಮರೆಯಲ್ಲ-ಯಾರನ್ನೂ ಕ್ಷಮಿಸಲ್ಲ ಎಂದ ಭಾರತೀಯ ಸೇನೆ

ಭಾರತೀಯ ಸೇನಾಪಡೆಯ ಸಾಹಸವನ್ನು ಸ್ಮರಿಸಿ ಎಕ್ಸ್ ಪ್ರೊಫೈಲ್ ಚಿತ್ರ ಬದಲಿಸಿದ ಪ್ರಧಾನಿ ಮೋದಿ

New Delhi: 2025ರ ಮೇ 7 ಮತ್ತು 8ರ ರಾತ್ರಿ ಭಾರತೀಯ (One year of operation sindoor) ಸೇನೆ ನಡೆಸಿದ್ದ ʻಆಪರೇಷನ್‌ ಸಿಂಧೂರʼಕ್ಕೆ ಇಂದು ಒಂದು ವರ್ಷ ಪೂರ್ಣಗೊಂಡಿದೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಕೈಗೊಂಡಿದ್ದ ಈ ಕಾರ್ಯಾಚರಣೆ ದೇಶದ ಭದ್ರತಾ ಇತಿಹಾಸದಲ್ಲೇ ಮಹತ್ವದ ಅಧ್ಯಾಯವಾಗಿ ಉಳಿದಿದೆ.

One year of operation sindoor

ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದ ನಿರಪರಾಧಿಗಳ ರಕ್ತಪಾತ ದೇಶದ (One year of operation sindoor) ಮನಸ್ಸನ್ನು ಕಲುಕಿತ್ತು.

ಆ ನೋವಿಗೆ ಪ್ರತಿಯಾಗಿ ಭಾರತ ತೋರಿಸಿದ ಶೌರ್ಯ ಮತ್ತು ತಾಕತ್ತು ಇಂದು ಮತ್ತೊಮ್ಮೆ ನೆನಪಾಗುತ್ತಿದೆ.

2025ರ ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ (Bysaran Valley) ಪ್ರವಾಸಿಗರು ಸುಂದರ ಕ್ಷಣಗಳನ್ನು ಆನಂದಿಸುತ್ತಿದ್ದ ವೇಳೆ ಉಗ್ರರು

ಏಕಾಏಕಿ ದಾಳಿ ನಡೆಸಿದ್ದರು. ಅಲ್ಲಿದ್ದವರ ಧರ್ಮ ಹಾಗೂ ಕಲಿಮಾ ಕೇಳಿ, 26 ಮಂದಿಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿತ್ತು.

ಕ್ಷಣಾರ್ಧದಲ್ಲಿ ಕಣಿವೆ ರಕ್ತದ ಕೆರೆಯಾಗಿದ್ದು, ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವು. ಈ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಗಳು ಕೇಳಿಬಂದಿದ್ದವು.

ಈ ದಾಳಿಯ ಬಳಿಕ ಭಾರತ ಮೊದಲಿಗೆ ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಸಿಂಧೂ ಜಲ ಒಪ್ಪಂದವನ್ನು

ಸ್ಥಗಿತಗೊಳಿಸುವುದು, ಅಟಾರಿ–ವಾಘಾ (Attari–Wagah) ಗಡಿಯನ್ನು ಮುಚ್ಚುವುದು ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಜಾರಿಗೆ ತರಲಾಯಿತು.

ಆದರೆ ದೇಶದ ಜನರಲ್ಲಿ “ಇದು ಸಾಕಾಗುವುದಿಲ್ಲ” ಎಂಬ ಅಭಿಪ್ರಾಯ ಹೆಚ್ಚಾಗಿತ್ತು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಅತ್ಯಂತ ರಹಸ್ಯ ಹಾಗೂ ತಂತ್ರಜ್ಞಾನದ ನೆರವಿನಿಂದ

ʻಆಪರೇಷನ್‌ ಸಿಂಧೂರʼವನ್ನು ರೂಪಿಸಿತು. ಕೇವಲ 23 ನಿಮಿಷಗಳ ದಾಳಿಯಲ್ಲಿ ಪಾಕಿಸ್ತಾನದಲ್ಲಿದ್ದ 9 ಉಗ್ರ ನೆಲೆಗಳನ್ನು ನಾಶಗೊಳಿಸಿ, ಉಗ್ರರಿಗೆ ಭಾರತ ತಕ್ಕ ಉತ್ತರ ನೀಡಿತು.

ಭಾರತೀಯ ಸೇನೆಯ ದಾಳಿ ಕೆಲ ದಿನಗಳ ಕಾಲ ಮುಂದುವರಿದಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಪ್ರತಿದಾಳಿ ನಡೆಸಲು ಯತ್ನಿಸಿತ್ತು. ಈ ವೇಳೆ ಪಾಕಿಸ್ತಾನದ

ಹಲವು ಸೇನಾ ನೆಲೆಗಳು ಮತ್ತು ಉಗ್ರರ ತಾಣಗಳು ಭಾರೀ ಹಾನಿಗೊಳಗಾದವು. ವಿಶೇಷವಾಗಿ ಬ್ರಹ್ಮೋಸ್‌ ಕ್ಷಿಪಣಿಗಳ ದಾಳಿ ಪಾಕ್‌ ಸೇನೆಗೆ ದೊಡ್ಡ ಆಘಾತವಾಗಿತ್ತು.

ಕೆಲ ಪ್ರದೇಶಗಳ ದೇಗುಲಗಳು ಹಾಗೂ ಗುರುದ್ವಾರಗಳಿಗೂ ಹಾನಿಯಾಗಿರುವ ವರದಿಗಳು ಬಂದಿದ್ದವು. ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರೂ, ಅಂತಿಮವಾಗಿ ಮೇ 10ರಂದು

ಕದನ ವಿರಾಮ ಘೋಷಿಸಲಾಯಿತು. ಈ ಕಾರ್ಯಾಚರಣೆ ಭಾರತೀಯ ಸೇನೆಯ ಸಾಮರ್ಥ್ಯ ಹಾಗೂ ತಂತ್ರಜ್ಞಾನದ ಶಕ್ತಿಯನ್ನು ಜಗತ್ತಿನ ಮುಂದೆ ಪ್ರದರ್ಶಿಸಿತು.

ʻಆಪರೇಷನ್‌ ಸಿಂಧೂರʼದ (Operation Sindhoor) ಒಂದು ವರ್ಷ ಕಳೆದರೂ ಅದರ ಪರಿಣಾಮದಿಂದ ಪಾಕಿಸ್ತಾನ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಿಲ್ಲ ಎಂಬ ಮಾಹಿತಿ ವಿವಿಧ ಮೂಲಗಳಿಂದ ಕೇಳಿಬರುತ್ತಿದೆ.

ಕೆಲವು ವಾಯುನೆಲೆಗಳ ಬಳಕೆಯನ್ನು ಪಾಕ್‌ ಕಡಿಮೆ ಮಾಡಿದ್ದು, ನಾಶವಾದ ಉಗ್ರ ನೆಲೆಗಳ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.

ಪಹಲ್ಗಾಮ್‌ ದಾಳಿಯಲ್ಲಿ ಅನೇಕ ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿದ್ದ ಉಗ್ರರಿಗೆ ಭಾರತ ನೀಡಿದ ಈ ಉತ್ತರ ದೇಶದ ಭದ್ರತಾ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ.

ಉಗ್ರತೆಯ ವಿರುದ್ಧ ಭಾರತ ತೋರಿದ ದೃಢ ನಿಲುವು ಹಾಗೂ ಸೇನೆಯ ಸಾಹಸಕ್ಕೆ ದೇಶವೇ ಹೆಮ್ಮೆಪಟ್ಟ ದಿನವಾಗಿ ʻಆಪರೇಷನ್‌ ಸಿಂಧೂರʼ ಇಂದು ಮತ್ತೊಮ್ಮೆ ನೆನಪಾಗುತ್ತಿದೆ.

ಇದನ್ನು ಓದಿ : https://vijayatimes.com/nirmala-sitharaman-holds-meeting-over-cloud-mythos-ai/

Tags: india armyIndian NavyNewdelhioperation sindhoor

Related News

ಐಪಿಎಲ್‌ನಲ್ಲಿ ಅಶಿಸ್ತಿಗೆ ಬ್ರೇಕ್: ಬಿಸಿಸಿಐನಿಂದ ಕಠಿಣ ನಿಯಮ ಜಾರಿ
Sports

ಐಪಿಎಲ್‌ನಲ್ಲಿ ಅಶಿಸ್ತಿಗೆ ಬ್ರೇಕ್: ಬಿಸಿಸಿಐನಿಂದ ಕಠಿಣ ನಿಯಮ ಜಾರಿ

May 13, 2026
ವಿಪಕ್ಷ ನಾಯಕ ರಬ್ಬರ್ ಸ್ಟಾಂಪ್ ಅಲ್ಲ : ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿದ ರಾಹುಲ್ ಗಾಂಧಿ
ದೇಶ-ವಿದೇಶ

ವಿಪಕ್ಷ ನಾಯಕ ರಬ್ಬರ್ ಸ್ಟಾಂಪ್ ಅಲ್ಲ : ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿದ ರಾಹುಲ್ ಗಾಂಧಿ

May 13, 2026
ಚಿನ್ನ-ಬೆಳ್ಳಿ ಆಮದು ಸುಂಕ ಏರಿಕೆ: ಬಂಗಾರ ಖರೀದಿ ಮತ್ತಷ್ಟು ದುಬಾರಿ, ಗ್ರಾಹಕರಿಗೆ ಹೆಚ್ಚಿದ ಹೊರೆ
ದೇಶ-ವಿದೇಶ

ಚಿನ್ನ-ಬೆಳ್ಳಿ ಆಮದು ಸುಂಕ ಏರಿಕೆ: ಬಂಗಾರ ಖರೀದಿ ಮತ್ತಷ್ಟು ದುಬಾರಿ, ಗ್ರಾಹಕರಿಗೆ ಹೆಚ್ಚಿದ ಹೊರೆ

May 13, 2026
NEET UG 2026 ಮರು ಪರೀಕ್ಷೆ: ವಿದ್ಯಾರ್ಥಿಗಳ ಆತಂಕದ ನಡುವೆ ಮಹತ್ವದ ಮಾಹಿತಿ ನೀಡಿದ NTA
ದೇಶ-ವಿದೇಶ

NEET UG 2026 ಮರು ಪರೀಕ್ಷೆ: ವಿದ್ಯಾರ್ಥಿಗಳ ಆತಂಕದ ನಡುವೆ ಮಹತ್ವದ ಮಾಹಿತಿ ನೀಡಿದ NTA

May 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.