Bengaluru : ಕರ್ನಾಟಕದಲ್ಲಿ ಟೊಮೇಟೊ(Tamato), ಈರುಳ್ಳಿ(Onion Farmers Are In Loss) ಬೆಲೆ ಕುಸಿತ ಉಂಟಾಗಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರ ಹಿತ ಕಾಪಾಡಲು ಈರುಳ್ಳಿ, ಟೊಮೇಟೊ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಹಣ್ಣು ತರಕಾರಿ ಬೆಳೆಗಾರರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಬೆಂಗಳೂರಿನ ಯಶವಂತಪುರ(Yeshwanthpura) ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(Onion Farmers Are In Loss) ಯಾರ್ಡ್‌ನ ಮೂಲಗಳ ಪ್ರಕಾರ,
ಕೆಲವು ದಿನಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ ₹2 ರಿಂದ ₹10 ರ ನಡುವೆ ಕುಸಿದಿತ್ತು. ಆದರೆ, ಈಗ ಉತ್ಪನ್ನದ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ ₹12 ರಿಂದ ₹18 ರವರೆಗೂ ಸ್ಥಿರವಾಗಿದೆ.
ಇನ್ನು “ನಮ್ಮೆಲ್ಲರ ಕಷ್ಟಕ್ಕೆ ಒಂದು ಕೆಜಿ ₹ 12 ಕೂಡ ಅತ್ಯಲ್ಪವಾಗಿದೆ. ಸಾರಿಗೆ, ಲೋಡಿಂಗ್, ಅನ್‌ಲೋಡಿಂಗ್ ಮತ್ತು ಬೆಳೆ ಬೆಳೆಯಲು ಮಾಡಿದ ಹೂಡಿಕೆಗೆ ಯೋಗ್ಯವಾದ ಲಾಭ ಸಿಗುತ್ತಿಲ್ಲ” ಎಂದು ಬೆಂಗಳೂರಿನ ಈರುಳ್ಳಿ ಬೆಳೆಗಾರರೊಬ್ಬರು ಹೇಳಿದ್ದಾರೆ.
ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಿಂದ ದೂರದ ಪ್ರದೇಶಗಳಿಂದ ತಮ್ಮ ಉತ್ಪನ್ನಗಳನ್ನು ತರುತ್ತಿದ್ದ ರೈತರಿಗೆ ನಿರಾಸೆಯಾಗಿದೆ.
ಉತ್ತರ ಕರ್ನಾಟಕದ ಗದಗ(Gadag) ಜಿಲ್ಲೆಯ ತಿಮ್ಮಾಪುರದ ರೈತ ಪವಾಡೆಪ್ಪ ಹಳ್ಳಿಕೇರಿ ಉತ್ತಮ ಈರುಳ್ಳಿ ಫಸಲು ಪಡೆದಿದ್ದು,
ಗದಗ ಎಪಿಎಂಸಿ ಯಾರ್ಡ್‌ನಲ್ಲಿ ಮಾರಾಟ ಮಾಡುವ ಬದಲು ಬೆಂಗಳೂರಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದರು.
ನವೆಂಬರ್ 22 ರಂದು 205 ಕೆಜಿ ಈರುಳ್ಳಿಯೊಂದಿಗೆ ಬೆಂಗಳೂರು ಮಾರುಕಟ್ಟೆಗೆ ಬಂದಾಗ, ನಗರದಲ್ಲಿ ಬೆಲೆ ಕೆಜಿಗೆ ₹ 2 ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.
ಎಲ್ಲ ಖರ್ಚುಗಳನ್ನು ಕಳೆದು ರೈತನಿಗೆ ಕೇವಲ ₹ 8.36 ಲಾಭ ಸಿಕ್ಕಿದ್ದು, ಅವರ ಬಿಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral) ಆಗಿದ್ದವು.

ಇನ್ನು ದಕ್ಷಿಣ ಕರ್ನಾಟಕದ ಟೊಮೆಟೊ ಉತ್ಪಾದಕರ ಸಂಕಷ್ಟಗಳು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗಾರರಿಗಿಂತ ಭಿನ್ನವಾಗಿಲ್ಲ. ಇಲ್ಲಿನ ಕೆ.ಆರ್.
ಮಾರುಕಟ್ಟೆಯ(KR Market) ಸಗಟು ತರಕಾರಿ ವ್ಯಾಪಾರಿ ಮಂಜುನಾಥ್ ಮಾತನಾಡಿ, ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹5ರಿಂದ ₹6ರವರೆಗೆ ಟೊಮೆಟೊ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರಾಟದಲ್ಲಿ ₹8ರಿಂದ ₹12ರವರೆಗೂ ಇದೆ.
ಈರುಳ್ಳಿ, ಆಲೂಗಡ್ಡೆ, ಟೊಮೇಟೊಗೆ ಸರಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ತರಕಾರಿ ಬೆಳೆಗಾರರ ಹೋರಾಟ ಸಮಿತಿ ಆಗ್ರಹಿಸಿದೆ. ‘ನಾವು ತರಕಾರಿ ಬೆಳೆಗಾರರು ಕಣ್ಣೀರಿಡುವಂತಾಗಿದೆ. ಕಷ್ಟಪಟ್ಟು ದುಡಿಮೆ, ಕೂಲಿ,
ಇದನ್ನೂ ಓದಿ : https://vijayatimes.com/my-father-will-become-cm/
ಬಂಡವಾಳ ಹೂಡಿ ತಿಂಗಳುಗಟ್ಟಲೆ ಕಾಯುತ್ತಿದ್ದ ನಮಗೆ ಇತ್ತೀಚಿನ ದಿನಗಳಲ್ಲಿ ಪ್ರತಿ ಕಿಲೋ ಟೊಮೆಟೊಗೆ ₹ 1.5ರಷ್ಟು ಆದಾಯ ಬರುತ್ತಿಲ್ಲ. ಎರಡು ಕ್ವಿಂಟಾಲ್ ಟೊಮೇಟೊ ಬೆಳೆದ ನಮಗೆ ಸಿಗುತ್ತಿರುವುದು ₹300 ಮಾತ್ರ ಎಂದು ರೈತರೊಬ್ಬರು ತಿಳಿಸಿದರು.
- ಮಹೇಶ್.ಪಿ.ಎಚ್