Mumbai : 40 ಬ್ಯಾಂಕ್ ಗ್ರಾಹಕರು ಕೇವಲ 3 ದಿನಗಳಲ್ಲಿ ತಮ್ಮ ಖಾತೆಯಲ್ಲಿ ಉಳಿಸಿಕೊಂಡಿದ್ದ ಲಕ್ಷಗಟ್ಟಲೇ ಹಣವನ್ನು ಒಂದೇ ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಈ ಗ್ರಾಹಕರು ಮಾಡಿದ ತಪ್ಪೇನು? ಅವರು ಕ್ಲಿಕ್ ಮಾಡಿದ (online fraud fake link) ಲಿಂಕ್ ಆದರೂ ಯಾವುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮುಂಬೈನ ಖಾಸಗಿ ಬ್ಯಾಂಕ್‌ನ ಕನಿಷ್ಠ 40 ಗ್ರಾಹಕರು ತಮಗೆ ಕೆವೈಸಿ( KYC) ಮತ್ತು ಪ್ಯಾನ್( PAN) ವಿವರಗಳನ್ನು ನವೀಕರಿಸಲು ನಕಲಿ ಸಂದೇಶಗಳ
ಮೂಲಕ ಕಳುಹಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಮೂರು ದಿನಗಳಲ್ಲಿ ಲಕ್ಷ ರೂಪಾಯಿಗಳನ್ನು (online fraud fake link) ಕಳೆದುಕೊಂಡಿದ್ದಾರೆ.
ಈ ರೀತಿಯ ವಂಚನೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ! ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಬ್ಯಾಂಕ್ ಸೇವೆಗಳಲ್ಲಿ ಆಧಾರ್, ಪ್ಯಾನ್ ಕಡ್ಡಾಯವಾಗಿದೆ.
ಒಬ್ಬ ಗ್ರಾಹಕ ಹೆಚ್ಚುವರಿ ವಹಿವಾಟು ನಡೆಸಲು ಈ ಮೂಲ ದಾಖಲಾತಿಗಳು ಅಗತ್ಯವಾಗಿದೆ. ಅತೀ ಮುಖ್ಯವಾಗಿ ಬ್ಯಾಂಕ್ ಸೇವೆಗಳು ಗ್ರಾಹಕರಿಗೆ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿ,
ಕೆವೈಸಿ ಲಿಂಕ್ ಮಾಡಿಸಿ ಎಂದು ಆಗಾಗ್ಗೆ ಹೇಳುತ್ತಿರುತ್ತದೆ. ಜೊತೆಗೆ ಆಯಾ ಬ್ಯಾಂಕ್ ಹೆಸರಿನಲ್ಲಿ ಒಂದು ಸಂದೇಶವು ಕೂಡ ಬರುತ್ತಿರುತ್ತದೆ.
ಇದೇ ರೀತಿ ಬಂದ ಒಂದು ನಕಲಿ ಲಿಂಕ್ ಹೊಂದಿದ ಸಂದೇಶಕ್ಕೆ ಗಮನಕೊಟ್ಟು ಇಲ್ಲಿನ ಗ್ರಾಹಕರು ತಮ್ಮ ಖಾತೆಯಲ್ಲಿದ್ದ ಲಕ್ಷಗಟ್ಟಲೇ ಹಣವನ್ನು ಕಳೆದುಕೊಂಡಿದ್ದಾರೆ!
ಸಲಹೆಯೊಂದರಲ್ಲಿ, ಬ್ಯಾಂಕ್ ಗ್ರಾಹಕರ ಗೌಪ್ಯ ವಿವರಗಳನ್ನು ಕೇಳುವ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಇದೀಗ ಮುಂಬೈ ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ವಂಚಕರು ತಮ್ಮ KYC/PAN ಕಾರ್ಡ್ ವಿವರಗಳನ್ನು ಅಪ್‌ಡೇಟ್ ಮಾಡದಿದ್ದಕ್ಕಾಗಿ ತಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳುವ
ಮೂಲಕ ಗ್ರಾಹಕರಿಗೆ ನಕಲಿ ಲಿಂಕ್‌ಗಳೊಂದಿಗೆ ನಕಲಿ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.
ಅಂತಹ ಲಿಂಕ್‌ಗಳು ಗ್ರಾಹಕರನ್ನು ತಮ್ಮ ಬ್ಯಾಂಕ್‌ನ ನಕಲಿ ವೆಬ್‌ಸೈಟ್‌ಗೆ (Website) ನಿರ್ದೇಶಿಸುತ್ತವೆ,
ಅಲ್ಲಿ ಅವರ ಗ್ರಾಹಕ ID, ಪಾಸ್‌ವರ್ಡ್ ಮತ್ತು ಇತರ ಗೌಪ್ಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಆಪಾದಿತ ವಂಚನೆಗೆ ಒಳಗಾದ 40 ಗ್ರಾಹಕರಲ್ಲಿ ನಟಿ ಶ್ವೇತಾ ಮೆಮನ್ ಕೂಡ ಒಬ್ಬರು!

ಈ ಬಗ್ಗೆ ದೂರು ನೀಡಿದ್ದ ನಟಿ ಶ್ವೇತಾ ಮೆಮನ್(Shweta Memom) ಅವರು, ಕಳೆದ ಗುರುವಾರ ನಕಲಿ (online fraud fake link) ಸಂದೇಶದ ಲಿಂಕ್ ಅನ್ನು ಕ್ಲಿಕ್ ಮಾಡಿದೆ,
ಅದು ತನ್ನ ಬ್ಯಾಂಕ್‌ನಿಂದ ಬಂದಿದೆ ಎಂದು ನಂಬಿದ್ದೆ. ಹೀಗಾಗಿ ಓಪನ್ ಆದ ಪೋರ್ಟಲ್‌ನಲ್ಲಿ, ನಾನು ನನ್ನ ಗ್ರಾಹಕ ID, ಪಾಸ್‌ವರ್ಡ್‌ಗಳು ಮತ್ತು OTP ಅನ್ನು ನಮೂದಿಸಿದೆ ಎಂದು ಹೇಳಿದರು.
ಬ್ಯಾಂಕ್ ಅಧಿಕಾರಿಯಂತೆ ನಟಿಸುತ್ತಿದ್ದ ಮಹಿಳೆಯೊಬ್ಬರಿಂದ ನನಗೆ ಫೋನ್ ಕರೆ ಬಂದಿತು. ಆಕೆ ನನ್ನ ಮೊಬೈಲ್ ಸಂಖ್ಯೆಗೆ ಸ್ವೀಕರಿಸಿದ ಮತ್ತೊಂದು OTP ಅನ್ನು ಹೇಳಲು ಕೇಳಿದಳು.
ಅದರಂತೆಯೇ ನಾನು ಆಕೆಗೆ ತಿಳಿಸಿದೆ. ಇದಾದ ಬೆನ್ನಲ್ಲೇ ನನ್ನ ಖಾತೆಯಿಂದ 57,636 ರೂ. ಹಣ ಡೆಬಿಟ್ ಆಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಇವರಂತೆಯೇ ಅನೇಕ ಗ್ರಾಹಕರು ಇದೇ ರೀತಿ ನಕಲಿ ಲಿಂಕ್ ಕ್ಲಿಕ್ ಮಾಡಿ, ಓಟಿಪಿ ಹೇಳಿ ಲಕ್ಷಗಟ್ಟಲೇ ಹಣ ಕಳೆದುಕೊಂಡಿದ್ದಾರೆ.