- ಕೇಂದ್ರದ ಹೊಸ ಗೇಮಿಂಗ್ ಮಸೂದೆಯಿಂದಾಗಿ ಕ್ರಿಕೆಟ್ ಲೋಕದ ಮೇಲೆ ಭಾರೀ ಪರಿಣಾಮ
- ಬಿಸಿಸಿಐಗೆ ಕೋಟಿ ಕೋಟಿ ನಷ್ಟ, ಆಟಗಾರರ ಆದಾಯಕ್ಕೆ ದೊಡ್ಡ ಹೊಡೆತ (online gaming bill bcci to lose sponsor)
- ಐಪಿಎಲ್ ಪ್ರಾಯೋಜಕತ್ವದಲ್ಲಿ ಭಾರೀ ಬದಲಾವಣೆ: ಫ್ರಾಂಚೈಸಿಗಳಿಗೆ ಆರ್ಥಿಕ ಸಂಕಷ್ಟ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಆನ್‌ಲೈನ್ ಗೇಮಿಂಗ್ ಮಸೂದೆ(Online gaming bill) ಕ್ರೀಡಾ ಲೋಕದಲ್ಲಿ ದೊಡ್ಡ ಸಂಚಲನ ಉಂಟುಮಾಡಿದೆ.
ಈ ನಿರ್ಧಾರವು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ(BCCI) ಮಾತ್ರವಲ್ಲದೆ, ಅಗ್ರ ತಾರೆ ಆಟಗಾರರಿಗೂ ಕೋಟ್ಯಾಂತರ ನಷ್ಟವನ್ನು ತಂದುಕೊಡಲಿದೆ.
ಆನ್‌ಲೈನ್ ಗೇಮಿಂಗ್ ಕ್ಷೇತ್ರವನ್ನು(Online gaming sector) ನಿಷೇಧಿಸುವ ಕ್ರಮದಿಂದ ಕ್ರೀಡೆ, ಉದ್ಯಮ ಮತ್ತು ಆರ್ಥಿಕತೆಗೆ ಗಂಭೀರ ಹೊಡೆತ ಬಿದ್ದಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಪ್ರಮುಖ ಆದಾಯದ ಮೂಲಗಳಲ್ಲಿ ಒಂದು ಎಂದರೆ ಜೆರ್ಸಿ ಪ್ರಾಯೋಜಕತ್ವ ಮತ್ತು ಐಪಿಎಲ್(IPL) ಜಾಹೀರಾತು ಒಪ್ಪಂದಗಳು.
ಡ್ರೀಮ್ 11 ನಂತಹ ಕಂಪನಿಗಳು ಟೀಮ್ ಇಂಡಿಯಾದ(Team India) ಅಧಿಕೃತ ಪ್ರಾಯೋಜಕರಾಗಿದ್ದು, ಬಿಸಿಸಿಐಗೆ ನೂರಾರು ಕೋಟಿ ರೂಪಾಯಿ ಆದಾಯ ತರುತ್ತಿದ್ದವು.
ಆದರೆ ಹೊಸ ಗೇಮಿಂಗ್ ಬಿಲ್ ಜಾರಿಗೆ ಬಂದ ಬಳಿಕ, ಈ ಒಪ್ಪಂದಗಳಿಗೆ ತೆರೆ ಬೀಳಲಿದೆ. ಇದರ ಪರಿಣಾಮವಾಗಿ ಮುಂಬರುವ ಏಷ್ಯಾ ಕಪ್‌ನಲ್ಲಿ(Asia Cup) ಟೀಮ್ ಇಂಡಿಯಾ ಪ್ರಾಯೋಜಕರಿಲ್ಲದೆ ಆಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಷ್ಟೇ ಅಲ್ಲದೆ, ಮೈ ಇಲೆವೆನ್ ಸರ್ಕಲ್(My Eleven Circle) ಸೇರಿದಂತೆ ಹಲವು ಗೇಮಿಂಗ್ ಕಂಪನಿಗಳು(Gaming companies) ಐಪಿಎಲ್‌ನಲ್ಲಿ ಸಹ ಪ್ರಾಯೋಜಕರಾಗಿದ್ದವು.
ವರ್ಷಕ್ಕೆ ಶೇಕಡಾ 125 ಕೋಟಿ ರೂಪಾಯಿ ಬಿಸಿಸಿಐಗೆ ಹರಿದು ಬರುತ್ತಿದ್ದ ಈ ಒಪ್ಪಂದವೂ ಈಗ ಪ್ರಶ್ನಾರ್ಥಕವಾಗಿದೆ.
ಫ್ರಾಂಚೈಸಿಗಳಾದ ಕೆಕೆಆರ್, ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದ್ರಾಬಾದ್, ಲಖನೌ ಸೂಪರ್ ಜೈಂಟ್ಸ್‌ಗಳಿಗೂ ಪ್ರಾಯೋಜಕತ್ವ ನಷ್ಟವು ದೊಡ್ಡ ತೊಂದರೆಯಾಗಲಿದೆ.
ಇನ್ನು ಈ ನಿಷೇಧದಿಂದ ಅತಿದೊಡ್ಡ ಹೊಡೆತ ತಾರೆ ಕ್ರಿಕೆಟಿಗರ ವೈಯಕ್ತಿಕ ಆದಾಯಕ್ಕೆ ತಾಗಲಿದೆ.
ಡ್ರೀಮ್ 11, MPL, ವಿನ್ಜೊ ಮುಂತಾದ ಕಂಪನಿಗಳೊಂದಿಗೆ ಮಾಡಿದ ಒಪ್ಪಂದಗಳಿಂದ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಮೊದಲಾದವರು ಕೋಟ್ಯಾಂತರ ರೂಪಾಯಿ ಗಳಿಸುತ್ತಿದ್ದರು.
ಉದಾಹರಣೆಗೆ, MPL ಜತೆ ಒಪ್ಪಂದ ಮಾಡಿಕೊಂಡಿದ್ದ ವಿರಾಟ್ ಕೊಹ್ಲಿ ವರ್ಷಕ್ಕೆ 10-12 ಕೋಟಿ ರೂಪಾಯಿ ಸಂಪಾದಿಸುತ್ತಿದ್ದರು.
ರೋಹಿತ್ ಶರ್ಮಾ ಮತ್ತು ಧೋನಿ ತಲಾ 6-7 ಕೋಟಿ ರೂಪಾಯಿಗಳಷ್ಟು ಜಾಹೀರಾತುಗಳಿಂದ(advertisements) ಪಡೆದುಕೊಳ್ಳುತ್ತಿದ್ದರು. ಈಗ ಈ ಎಲ್ಲಾ ಒಪ್ಪಂದಗಳಿಗೆ ಬ್ರೇಕ್ ಬಿದ್ದಿದೆ.
ಈ ಪಟ್ಟಿ ಕೇವಲ ಕೊಹ್ಲಿ, ಧೋನಿ, ಶರ್ಮಾಗೆ ಸೀಮಿತವಲ್ಲ. ಹಾರ್ದಿಕ್ ಪಾಂಡ್ಯ, ಜಸ್ಪ್ರಿತ್ ಬೂಮ್ರಾ, KL ರಾಹುಲ್, ರಿಷಭ್ ಪಂತ್, ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್ ಮೊದಲಾದವರೂ ಗೇಮಿಂಗ್ ಜಾಹೀರಾತುಗಳಿಂದ ವಾರ್ಷಿಕವಾಗಿ ಕೋಟ್ಯಾಂತರ ಆದಾಯ ಗಳಿಸುತ್ತಿದ್ದರು.
ತಜ್ಞರ ಅಂದಾಜು ಪ್ರಕಾರ, ಕೇವಲ ಈ ಜಾಹೀರಾತುಗಳ ಮೂಲಕವೇ ವರ್ಷಕ್ಕೆ 150-200 ಕೋಟಿ ರೂಪಾಯಿ ಆಟಗಾರರ ಕೈ ಸೇರಿಸುತ್ತಿತ್ತು. ಹೊಸ ಕಾನೂನಿನಿಂದಾಗಿ ಈ ಆದಾಯ ಸಂಪೂರ್ಣವಾಗಿ ಕಡಿತಗೊಳ್ಳಲಿದೆ.
ಈ ಬಿಲ್‌ನ ಪರಿಣಾಮ ಕೇವಲ ಬಿಸಿಸಿಐ ಮತ್ತು ಐಪಿಎಲ್‌ಗೆ ಸೀಮಿತವಾಗಿಲ್ಲ. ಡ್ರೀಮ್ 11 ಮತ್ತು ಇತರ ಕಂಪನಿಗಳು ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗಳು(State Cricket Associations)
ಆಯೋಜಿಸುವ ಟಿ20 ಲೀಗ್‌ಗಳು, ಸ್ಥಳೀಯ ಪಂದ್ಯಾವಳಿಗಳು, ಇತರ ಕ್ರೀಡಾಕೂಟಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಪ್ರಾಯೋಜಕರಾಗಿದ್ದವು.
ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ಜಾಹೀರಾತಿಗೆ ಖರ್ಚು ಮಾಡುತ್ತಿದ ಕಂಪನಿಗಳು ಈಗ ಹಿಂತೆಗೆದುಕೊಳ್ಳಲಿವೆ. ತಜ್ಞರ ಲೆಕ್ಕಾಚಾರದ ಪ್ರಕಾರ, ಒಟ್ಟು ನಷ್ಟವು 8000ರಿಂದ 10,000 ಕೋಟಿ ರೂಪಾಯಿವರೆಗೆ ಏರಲಿದೆ.
ಆನ್‌ಲೈನ್ ಗೇಮಿಂಗ್ ಕ್ಷೇತ್ರವು ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಶೇಕಡಾ 1.5-2ರಷ್ಟು ಕೊಡುಗೆ ನೀಡುತ್ತಿತ್ತು. ಈ ವಲಯದಿಂದ 20 ಸಾವಿರ ಕೋಟಿಗೂ ಹೆಚ್ಚು ತೆರಿಗೆ ಸರ್ಕಾರಕ್ಕೆ ಬರುತ್ತಿತ್ತು.
ಜೊತೆಗೆ, 2 ಲಕ್ಷಕ್ಕೂ ಅಧಿಕ ಉದ್ಯೋಗಗಳು ಈ ಕ್ಷೇತ್ರದಿಂದಲೇ ಸೃಷ್ಟಿಯಾಗಿದ್ದವು. ವಿದೇಶಿ ಹೂಡಿಕೆಗಳಾಗಿ 25 ಸಾವಿರ ಕೋಟಿ ರೂಪಾಯಿ ಭಾರತಕ್ಕೆ ಹರಿದುಬಂದಿತ್ತು.
ಇದನ್ನು ಓದಿ : ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆ: ಬೆಟ್ಟಿಂಗ್ ಮೇಲೆ ಕಟ್ಟುನಿಟ್ಟಿನ ಕಾನೂನು, 7 ವರ್ಷ ಜೈಲು ಶಿಕ್ಷೆ ಸಾಧ್ಯತೆ
ಇಂತಹ ಭಾರೀ ಪ್ರಮಾಣದ ಕೊಡುಗೆ ನೀಡುತ್ತಿದ್ದ ವಲಯವನ್ನು ನಿಷೇಧಿಸುವುದರಿಂದ GDP ಮೇಲೆಯೂ ನೇರ ಪರಿಣಾಮ ಬೀಳುವಿದಂತೂ ಪಕ್ಕಾ ಆಗಿದೆ. (online gaming bill bcci to lose sponsor)