• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಆನ್‌ಲೈನ್‌ ಗೇಮಿಂಗ್‌ ನಿಯಂತ್ರಣ ಮಸೂದೆ: ಬೆಟ್ಟಿಂಗ್‌ ಮೇಲೆ ಕಟ್ಟುನಿಟ್ಟಿನ ಕಾನೂನು, 7 ವರ್ಷ ಜೈಲು ಶಿಕ್ಷೆ ಸಾಧ್ಯತೆ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಆನ್‌ಲೈನ್‌ ಗೇಮಿಂಗ್‌ ನಿಯಂತ್ರಣ ಮಸೂದೆ: ಬೆಟ್ಟಿಂಗ್‌ ಮೇಲೆ ಕಟ್ಟುನಿಟ್ಟಿನ ಕಾನೂನು, 7 ವರ್ಷ ಜೈಲು ಶಿಕ್ಷೆ ಸಾಧ್ಯತೆ
0
SHARES
37
VIEWS
Share on FacebookShare on Twitter
  • ಆನ್‌ಲೈನ್‌ ಬೆಟ್ಟಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ ಸರ್ಕಾರ
  • 7 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಮಸೂದೆ ಜಾರಿ ಆಗುವ ಸಾಧ್ಯತೆ
  • ಜಾಹೀರಾತು ಮತ್ತು ಪ್ರಚಾರಕ್ಕೆ ಸಂಪೂರ್ಣ ನಿಷೇಧ

New delhi: ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವ ಆನ್‌ಲೈನ್‌ ಗೇಮಿಂಗ್‌(Online gaming) ಮತ್ತು ಬೆಟ್ಟಿಂಗ್‌ ಆ್ಯಪ್‌ಗಳ(Betting app) ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಸಚಿವ ಸಂಪುಟವು ಮಹತ್ವದ ಕರಡು ಮಸೂದೆಗೆ ಅನುಮೋದನೆ ನೀಡಿದ್ದು, ಸಂಸತ್ತಿನಲ್ಲಿ ಮಂಡನೆ ಸಾಧ್ಯತೆ ಇದೆ.

ಈ ಮಸೂದೆ ಅಂಗೀಕರಿಸಿದರೆ, ಅನಧಿಕೃತ ಬೆಟ್ಟಿಂಗ್‌(Unauthorized betting) ನೇರವಾಗಿ ಕ್ರಿಮಿನಲ್ ಅಪರಾಧವಾಗಲಿದ್ದು, ಗರಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲಾಗುತ್ತಿದೆ.

ಹೊಸ ಕಾಯ್ದೆಯಡಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಆನ್‌ಲೈನ್‌ ಆಟಗಳಿಗೆ ಹಣ ವರ್ಗಾವಣೆ ಮಾಡಲು ಅನುಮತಿ ನೀಡುವುದಿಲ್ಲ.

ಅಂದರೆ, ನೈಜ ಹಣವನ್ನು ಬಳಸುವ ಬೆಟ್ಟಿಂಗ್‌ ಮತ್ತು ಗೇಮಿಂಗ್‌ ಆ್ಯಪ್‌ಗಳಿಗೆ(Gaming app) ನೇರ ಹಣಕಾಸು ಬೆಂಬಲ ಕಡಿತಗೊಳ್ಳಲಿದೆ.

Online Gaming Regulation Bill
ಇನ್ನು ಮುಂದಿನ ದಿನಗಳಲ್ಲಿ ನೈಜ ಹಣದ ಗೇಮಿಂಗ್‌ ಪ್ರಚಾರ ಮಾಡುವ ಜಾಹೀರಾತುಗಳನ್ನು(Advertisement) ಸಂಪೂರ್ಣ ನಿಷೇಧಿಸಲಾಗುತ್ತದೆ.

ಆದರೆ ಇ-ಕ್ರೀಡೆಗಳು (E-Sports) ಮತ್ತು ಕೌಶಲ್ಯ(Skill) ಆಧಾರಿತ, ಹಣವಿಲ್ಲದ ಆಟಗಳು ಮಾತ್ರ ಮುಂದುವರಿಯಲು ಅವಕಾಶ ಇರುತ್ತದೆ. ಸಿನಿತಾರೆಗಳು,

ಕ್ರೀಡಾಪಟುಗಳು ಅಥವಾ ಸಾಮಾಜಿಕ ಜಾಲತಾಣ ಪ್ರಭಾವಿಗಳು ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚಾರ ಮಾಡಿದರೆ ಅವರ ಮೇಲೂ ಕಠಿಣ ಕ್ರಮ ಜರುಗಲಿದೆ.

2023 ಅಕ್ಟೋಬರ್‌ನಲ್ಲಿ ಆನ್‌ಲೈನ್‌ ಗೇಮಿಂಗ್‌ ಮೇಲೆ 28% GST ವಿಧಿಸಲಾಗಿತ್ತು. ಇದಾದ ನಂತರ, FY25ರಿಂದ ಆಟಗಳಲ್ಲಿ ಗೆಲ್ಲುವ ಮೊತ್ತದ ಮೇಲೆ 30% ತೆರಿಗೆ ಕಡ್ಡಾಯವಾಗಿದೆ.

ವಿದೇಶಿ (ಆಫ್‌ಶೋರ್) ಗೇಮಿಂಗ್‌ ಕಂಪನಿಗಳನ್ನು(Gaming company) ಸಹ ಭಾರತದ ತೆರಿಗೆ ಜಾಲದೊಳಗೆ ತರುವ ಕ್ರಮ ಸರ್ಕಾರ ಕೈಗೊಂಡಿದೆ.

ಇನ್ನು 2023 ಡಿಸೆಂಬರ್‌ನಲ್ಲಿ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹೊಸ ನಿಯಮಗಳು ಜಾರಿಯಾಗಿದ್ದು, ಅನಧಿಕೃತ ಬೆಟ್ಟಿಂಗ್‌ ಅಪರಾಧವೆಂದು ಘೋಷಿಸಲಾಯಿತು.

ಆ ನಿಯಮದ ಪ್ರಕಾರ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.2022ರಿಂದ ಫೆಬ್ರವರಿ 2025ರವರೆಗೆ ಸರ್ಕಾರವು 1,400 ಕ್ಕೂ ಹೆಚ್ಚು ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ತಡೆಗಟ್ಟಿದೆ.

ಮಸೂದೆ ಅಂಗೀಕರಿಸಿದ ಬಳಿಕ, ಎಲೆಕ್ಟ್ರಾನಿಕ್ಸ್‌(Electronics) ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನೂತನ ನೋಡಲ್‌ ನಿಯಂತ್ರಕವಾಗಲಿದ್ದು(nodal controller),

ಯಾವುದೇ ನೋಂದಾಯಿಸದ ಅಥವಾ ಕಾನೂನುಬಾಹಿರ ಪ್ಲಾಟ್‌ಫಾರ್ಮ್‌ಗಳನ್ನು(Illegal platforms) ನೇರವಾಗಿ ನಿರ್ಬಂಧಿಸುವ ಅಧಿಕಾರ ಪಡೆಯಲಿದೆ.

ಶಿಕ್ಷಣ ಸಚಿವಾಲಯವು ಪೋಷಕರು ಹಾಗೂ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದು, ಅಪ್ರಾಪ್ತ ವಯಸ್ಕರಲ್ಲಿ ಗೇಮಿಂಗ್‌ ವ್ಯಸನ ಹೆಚ್ಚುತ್ತಿರುವ ಅಪಾಯವನ್ನು ತಿಳಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಸಾರಕರಿಗೆ ನಿರ್ದೇಶನ ನೀಡಿದ್ದು, ಗೇಮಿಂಗ್‌ನಲ್ಲಿ ಇರುವ ಆರ್ಥಿಕ ಅಪಾಯಗಳ ಕುರಿತು ಹಕ್ಕು ನಿರಾಕರಣೆ (disclaimer)ಗಳನ್ನು ಕಡ್ಡಾಯಗೊಳಿಸಿದೆ.

2024ರಲ್ಲಿ ಭಾರತದ ಆನ್‌ಲೈನ್‌ ಗೇಮಿಂಗ್‌ ಮಾರುಕಟ್ಟೆ ₹32 ಸಾವಿರ ಕೋಟಿ ಮೌಲ್ಯದ್ದಾಗಿದ್ದು, 2029ರ ವೇಳೆಗೆ ಇದು ₹79 ಸಾವಿರ ಕೋಟಿ ಮೌಲ್ಯಕ್ಕೆ ಏರಲಿದೆ.

ಇದನ್ನು ಓದಿ :  ಆನ್‌ಲೈನ್‌ ಗೇಮಿಂಗ್ ಹಾವಳಿ ತಡೆಗೆ ಸೆಪ್ಟೆಂಬರ್‌ನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ: ರಾಜ್ಯ ಸರ್ಕಾರ

ಆದರೆ ಈ ಬೆಳವಣಿಗೆಯೊಂದಿಗೆ ಅಕ್ರಮ ಹಣ ಹರಿವು, ವಿದೇಶಿ ಕಂಪನಿಗಳ(foreign companies) ನಿಯಮ ಉಲ್ಲಂಘನೆ ಮತ್ತು ಯುವಕರ ವ್ಯಸನ ಹೆಚ್ಚುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Tags: Betting appcentral govtforeign companiesgaming appIllegal platformsonline gamingPM Narendra ModiUnauthorized betting

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.