Koppala : ಗ್ರಾಹಕರೊಬ್ಬರು ಆನ್ಲೈನ್ ಶಾಪಿಂಗ್(Online Shopping) ನಲ್ಲಿ ಆಪಲ್ ಐಫೋನ್ ಆರ್ಡರ್ ಮಾಡಿದ್ದಕ್ಕೆ ಅವರಿಗೆ ಸಿಕ್ಕಿದ್ದು ನಿರ್ಮಾ ಬಟ್ಟೆ (online shopping fraud) ತೊಳೆಯುವ ಸೋಪು!
ಭಾರತದ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿರುವ ಫ್ಲಿಪ್ ಕಾರ್ಟ್ (Flipkart) ಸಂಸ್ಥೆಯು ತನ್ನ ಗ್ರಾಹಕರೊಬ್ಬರು ಆರ್ಡರ್ ಮಾಡಿದ ವಸ್ತುವಿನ ಬದಲು ತಪ್ಪಾದ ವಸ್ತುವನ್ನು ಕಳಿಸಿಕೊಟ್ಟಿದೆ.
ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಮತ್ತು ಅದರ ಚಿಲ್ಲರೆ ವ್ಯಾಪಾರಿಗಳಿಗೆ ಸೇವೆಯಲ್ಲಿನ ಕೊರತೆ ಮತ್ತು ಅನ್ಯಾಯದ ವ್ಯಾಪಾರ ವಹಿವಾಟಿಗೆ ಮತ್ತು ಗ್ರಾಹಕರಿಗೆ ಮಾನಸಿಕ ಸಂಕಟ ಮತ್ತು ದೈಹಿಕ ಕಿರುಕುಳಕ್ಕಾಗಿ 25,000 ರೂ.
ಮೊತ್ತವನ್ನು ಪಾವತಿಸಲು ಆದೇಶಿಸಿದೆ ಎಂದು ಪಿಟಿಐ (PTI) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ವರದಿ ಅನುಸಾರ, 10,000 ರೂ. ಮತ್ತು ಮಾನಸಿಕ ಸಂಕಟ, ದೈಹಿಕ ಕಿರುಕುಳ ಮತ್ತು ಗ್ರಾಹಕರ ವ್ಯಾಜ್ಯದ ವೆಚ್ಚಕ್ಕಾಗಿ ಮತ್ತೊಂದು 15,000 ರೂ. ಪರಿಹಾರ ಹಣವನ್ನು ನೀಡುವಂತೆ ಆದೇಶಿಸಿದೆ.
ಎರಡು ಸೇರಿಸಿ ಒಟ್ಟು 25000 ರೂ. ನೀಡುವಂತೆ ತಿಳಿಸಿದೆ. ಎಂಟು ವಾರಗಳ ಅವಧಿಯೊಳಗೆ ಫೋನ್‌ನ ನಿಗದಿಪಡಿಸಿದ ಬೆಲೆ 48,999 ರೂ.ಗಳನ್ನು ಮರುಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಜಿಲ್ಲಾ ಕೇಂದ್ರವಾದ ಕೊಪ್ಪಳ ಪಟ್ಟಣದ ವಿದ್ಯಾರ್ಥಿ ಹರ್ಷ .ಎಸ್ (Harish.S) ಎಂಬ ವ್ಯಕ್ತಿ ಐಫೋನ್‌ಗಾಗಿ ಹಣ ಪಾವತಿಸಿದ್ದರು.
ಹರ್ಷ ಅವರು ತಮ್ಮ ದೂರಿನಲ್ಲಿ, ಅವರು ಸ್ವೀಕರಿಸಿದ ಪಾರ್ಸೆಲ್ ಅನ್ನು ತೆರೆದ ನಂತರ ಆಘಾತಕ್ಕೊಳಗಾದ ಬಗ್ಗೆ ವಿವರಿಸಿದ್ದಾರೆ.
ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು ಅದರಲ್ಲಿ 140 ಗ್ರಾಂನ ಒಂದು ‘ನಿರ್ಮಾ’(Nirma) ಡಿಟರ್ಜೆಂಟ್ ಸೋಪ್ ಇತ್ತು ಎಂದು ಹೇಳಿದ್ದಾರೆ.
ಐಫೋನ್‌ಗೆ ಅವರು ಆರ್ಡರ್ ಮಾಡಿ, ಪಾವತಿಸಿದ ಮೊತ್ತ 48, 999 ರೂ. ಎಂದು ಹೇಳಲಾಗಿದೆ.
ಆನ್‌ಲೈನ್ ಮೋಸಕ್ಕೆ ಬಲಿಯಾಗಬೇಡಿ: ಇತ್ತೀಚಿನ ದಿನಗಳಲ್ಲಿ ಈ ರೀತಿ ಆನ್‌ಲೈನ್(Online) ಗ್ರಾಹಕರಿಗೆ ಮೋಸ ಮಾಡೋ ದೊಡ್ಡ ಜಾಲವೇ ಇದೆ. ಇದು ಅಮಾಯಕರನ್ನು(online shopping fraud) ಟಾರ್ಗೆಟ್ ಮಾಡಿ ಭಾರೀ ಮೋಸ ಮಾಡುತ್ತಿದೆ.
ಹಾಗಾಗಿ ಆನ್‌ಲೈನ್ ವ್ಯವಹಾರ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಸಿಕ್ಕ ಸಿಕ್ಕ ಲಿಂಕ್‌ಗಳನ್ನು ಒತ್ತಿ,
ಸುರಕ್ಷಿತವಲ್ಲದ ವೆಬ್‌ಸೈಟ್‌ಗಳಲ್ಲಿ ಯಾವ ವ್ಯವಹಾರವನ್ನೂ ಮಾಡಬಾರದು. ಮಾಡಿದರೆ ಮೂರು ನಾಮ ಕೈಗೆ ಚೊಂಬು ಗ್ಯಾರಂಟಿ.
ಯಾಕಂದ್ರೆ ಈ ಮೋಸಗಾರರನ್ನು ಪತ್ತೆ ಹಚ್ಚಲು ನಮ್ಮ ದೇಶದಲ್ಲಿ ಇನ್ನೂ ಸೈಬರ್ ಪೊಲೀಸರು ಸಶಕ್ತರಾಗಿಲ್ಲ.
ಹಾಗಾಗಿ ಇವರನ್ನು ಹುಡುಕಿ ನಿಮ್ಮ ಹಣ ವಾಪಾಸ್ ಕೊಡಿಸೋದು ನಮ್ಮ ಈಗಿನ ಪೊಲೀಸ್ ವ್ಯವಸ್ಥೆಯಲ್ಲಿ ಅಸಾಧ್ಯದ ಮಾತು. ಹಾಗಾಗಿ ಮೋಸ ಹೋದ ಮೇಲೆ ಪಶ್ಚಾತ್ತಾಪ ಪಡೋ ಬದಲು, ಮೋಸ ಹೋಗೋ ಮುನ್ನ ಎಚ್ಚರವಾಗಿರಿ.