New Delhi: ಯುದ್ಧ ಪೀಡಿತ ಇಸ್ರೇಲ್ನಲ್ಲಿ (Israel) ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಆಪರೇಷನ್ ಅಜಯ್ (Operation Ajay – launched to bring Indians) ಅನ್ನು
ಪ್ರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಘೋಷಿಸಿದ್ದಾರೆ. ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇತರ ವ್ಯವಸ್ಥೆಗಳನ್ನು ಜಾರಿಗೆ
ತರಲಾಗುತ್ತಿದೆ ಎಂದು (Operation Ajay – launched to bring Indians) ಅವರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಮುಂಬೈನಲ್ಲಿರುವ ಇಸ್ರೇಲ್ನ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಅವರು 20,000 ಕ್ಕೂ ಹೆಚ್ಚು ಭಾರತೀಯರು ಇಸ್ರೇಲ್ನಲ್ಲಿ ವಾಸಿಸುತ್ತಿದ್ದಾರೆ. ಆದರೆ ಪ್ರಸ್ತುತ ಇಸ್ರೇಲ್ ಹಮಾಸ್ನೊಂದಿಗೆ
(Hamas) ಯುದ್ಧದಲ್ಲಿದೆ. ಹೀಗಾಗಿ ಇಸ್ರೇಲ್ನಲ್ಲಿ ಸಿಲುಕಿರುವ ಭಾರತೀಯರ ನಿಖರವಾದ ಸಂಖ್ಯೆ ತಮಗೆ ತಿಳಿದಿಲ್ಲ ಎಂದು ಶೋಶಾನಿ ಹೇಳಿದ್ದಾರೆ.
ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಕೇರಳ ರಾಜ್ಯದ ಸುಮಾರು
7,000 ಜನರು ಇಸ್ರೇಲ್ನಲ್ಲಿದ್ದಾರೆ ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸಲು ಕೋರಿದ್ದರು. ಇಸ್ರೇಲ್ನಲ್ಲಿ ಸಿಲುಕಿರುವ ರಾಜ್ಯದ 84 ಮಂದಿಯ ಬಗ್ಗೆ ಮಾಹಿತಿ ಪಡೆದಿರುವುದಾಗಿ
ತಮಿಳುನಾಡು (Tamilnadu) ಸರ್ಕಾರವೂ ಹೇಳಿಕೆ ನೀಡಿದೆ.
ನಟ ನುಶ್ರತ್ ಭರುಚ್ಚ ಅವರು ಇಸ್ರೇಲ್ನಲ್ಲಿ ಸಿಕ್ಕಿಬಿದ್ದ ನಂತರ ಅಕ್ಟೋಬರ್ 8 ರಂದು ಮುಂಬೈಗೆ ಬಂದಿದ್ದು, ಯುದ್ಧ ಪ್ರಾರಂಭವಾದಾಗ ಅವರು ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಹಾಯದ ಅಗತ್ಯವಿರುವ ಭಾರತೀಯರಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ಟೆಲ್
ಅವಿವ್ ಮತ್ತು ರಾಮಲ್ಲಾದಲ್ಲಿ ಪ್ರತ್ಯೇಕ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಿದೆ. ಕರ್ನಾಟಕ ಸರ್ಕಾರವು ಕೂಡಾ ವಿಶೇಷ ಸಹಾಯವಾಣಿಯನ್ನು ಆರಂಭಿಸಿದೆ.
ಇನ್ನು ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ದಾಳಿಯೂ ಭೀಕರ ಸ್ವರೂಪ ಪಡೆದುಕೊಂಡಿದ್ದು, ಹಮಾಸ್ ನಡೆಸಿದ ರಾಕೆಟ್ ದಾಳಿಯ ನಂತರ ಗಾಜಾಪಟ್ಟಿಯ ಮೇಲೆ ನಿರಂತರವಾಗಿ
ವೈಮಾನಿಕ ದಾಳಿ ನಡೆಸುತ್ತಿರುವ ಇಸ್ರೇಲ್ ವಾಯುಪಡೆಗಳು, ಇಡೀ ಗಾಜಾಪಟ್ಟಿಯ (Gazapatti) ಮೇಲೆ ದಿಗ್ಬಂಧನ ಹೇರಿವೆ. ಸದ್ಯ ಗಾಜಾಪಟ್ಟಿಯಲ್ಲಿ ನೀರು, ವಿದ್ಯುತ್, ಆಹಾರ, ತೈಲ
ಸೇರಿವುದೇ ಅಗತ್ಯ ವಸ್ತುಗಳು ಸಿಗದಂತೆ ಇಸ್ರೇಲ್ ಸೇನೆ ನೋಡಿಕೊಳ್ಳುತ್ತಿದೆ. ಹೀಗಾಗಿ ಇಸ್ರೇಲ್ ಸೇನೆ ಇದೀಗ ಗಾಜಾಪಟ್ಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವತ್ತ ದೃಷ್ಟಿನೆಟ್ಟಿದೆ.
ವಾಯುದಾಳಿಯ ನಂತರ ಇಸ್ರೇಲ್ ಸೇನೆ ಗಾಜಾಪಟ್ಟಿ ಪ್ರವೇಶಿಸಲಿದೆ ಎನ್ನಲಾಗುತ್ತಿದೆ.
ಇದನ್ನು ಓದಿ: NTPCಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಆರಂಭಿಕ ವೇತನ 40,000..!