ಆಪರೇಶನ್ ಎಪಿಕ್ ಫ್ಯೂರಿ (Operation Epic Fury Lose to America) ಅಮೆರಿಕಕ್ಕೆ ಭಾರೀ ಪೆಟ್ಟು
F-35 ಸೇರಿದಂತೆ 42 ಯುದ್ಧ ವಿಮಾನ ಮತ್ತು ಡ್ರೋನ್‌ಗಳಿಗೆ ಹಾನಿ
ಬಿಲಿಯನ್ ಡಾಲರ್ ನಷ್ಟದ ನಡುವೆ ಅಮೆರಿಕ ಸೇನೆಗೆ ಭಾರಿ ಹಿನ್ನೆಡೆ
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ತೀವ್ರಗೊಂಡಿರುವ ನಡುವೆಯೇ, ಇರಾನ್ ವಿರುದ್ಧ ಅಮೆರಿಕ (Operation Epic Fury Lose to America) ಆರಂಭಿಸಿದ್ದ “ಆಪರೇಶನ್ ಎಪಿಕ್ ಫ್ಯೂರಿ” (Operation Epic Fury) ಕಾರ್ಯಾಚರಣೆ ಇದೀಗ ಅಮೆರಿಕ ಸೇನೆಗೆಲೇ ದೊಡ್ಡ ಹೊಡೆತವಾಗಿ ಪರಿಣಮಿಸಿದೆ ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.
ಅಮೆರಿಕ ಕಾಂಗ್ರೆಸ್ ಅಧೀನದಲ್ಲಿರುವ ಸಂಸತ್ತೀಯ ಸಂಶೋಧನಾ ಸೇವೆ (CRS) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಅಮೆರಿಕದ ಹಲವು ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳು ಗಂಭೀರ ಹಾನಿಗೊಳಗಾಗಿವೆ.
ವಿಶ್ವದ ಅಗ್ರ ಸೈನಿಕ ಶಕ್ತಿಯೆಂದು ಪರಿಗಣಿಸಲ್ಪಡುವ ಅಮೆರಿಕದ ಕಾರ್ಯತಂತ್ರದ ಸಾಮರ್ಥ್ಯದ ಮೇಲೆಯೇ ಈ ಘಟನೆ ಪ್ರಶ್ನೆಗಳನ್ನು ಎಬ್ಬಿಸಿದೆ.

ಫೆಬ್ರವರಿ 28ರಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಒಟ್ಟು 42 ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳು ಹಾನಿಗೊಳಗಾಗಿವೆ ಅಥವಾ ಸಂಪೂರ್ಣ ನಾಶವಾಗಿವೆ ಎಂದು ವರದಿ ತಿಳಿಸಿದೆ.
ಇದರಲ್ಲಿ ನಾಲ್ಕು F-15E ಸ್ಟ್ರೈಕ್ ಈಗಲ್ (Strike Eagle) ಯುದ್ಧ ವಿಮಾನಗಳು, ಒಂದು (Operation Epic Fury Lose to America) ಅತ್ಯಾಧುನಿಕ F-35A ಲೈಟ್ನಿಂಗ್-II ಫೈಟರ್ ಜೆಟ್ (Lightning-II Fighter Jet) , ಒಂದು A-10 ಥಂಡರ್‌ಬೋಲ್ಟ್ ದಾಳಿ ವಿಮಾನ ಸೇರಿದಂತೆ ಅನೇಕ ಪ್ರಮುಖ ವಿಮಾನಗಳಿವೆ.
ಇದರ ಜೊತೆಗೆ ಏಳು KC-135 ಸ್ಟ್ರಾಟೋಟ್ಯಾಂಕರ್ ಇಂಧನ ಪೂರೈಕೆ ವಿಮಾನಗಳು, E-3 ಸೆಂಟ್ರಿ AWACS ಮೇಲ್ವಿಚಾರಣಾ ವಿಮಾನ, MC-130J ಕಮಾಂಡೋ-II (Commando-II) ವಿಶೇಷ ಕಾರ್ಯಾಚರಣೆ ವಿಮಾನಗಳು ಹಾಗೂ HH-60W ಜಾಲಿ ಗ್ರೀನ್-II ಹೆಲಿಕಾಪ್ಟರ್ (Jolly Green-II helicopter) ಕೂಡ ಕಾರ್ಯಾಚರಣೆಯಲ್ಲಿ ಹಾನಿಗೊಳಗಾಗಿವೆ ಎಂದು ತಿಳಿಸಲಾಗಿದೆ.
ಅಮೆರಿಕದ ಡ್ರೋನ್ ವ್ಯವಸ್ಥೆಯ ಮೇಲೂ ಭಾರೀ ಹೊಡೆತ ಬಿದ್ದಿರುವುದು ಗಮನಾರ್ಹವಾಗಿದೆ. ವರದಿಯ ಪ್ರಕಾರ, 24 MQ-9 ರೀಪರ್ ಡ್ರೋನ್‌ಗಳು ಹಾಗೂ ಒಂದು MQ-4C ಟ್ರಿಟಾನ್ ಡ್ರೋನ್ ಕಾರ್ಯಾಚರಣೆಯಲ್ಲಿ ನಾಶವಾಗಿವೆ ಅಥವಾ ಬಳಕೆಗೆ ಅಸಮರ್ಥವಾಗಿವೆ.
MQ-9 ರೀಪರ್ ಡ್ರೋನ್‌ಗಳು ಅಮೆರಿಕದ ನಿಗಾವ್ಯವಸ್ಥೆ ಮತ್ತು ಗುರಿ ದಾಳಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಅವುಗಳ ನಷ್ಟವು ಕೇವಲ ತಾಂತ್ರಿಕ
ಹಿನ್ನಡೆಯಷ್ಟೇ ಅಲ್ಲ, ಭವಿಷ್ಯದ ಸೈನಿಕ ಕಾರ್ಯಾಚರಣೆಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವರದಿ ಬಹಿರಂಗವಾದ ಬಳಿಕ ಅಮೆರಿಕದ ಯುದ್ಧತಂತ್ರ, ರಕ್ಷಣಾ ವ್ಯವಸ್ಥೆ ಮತ್ತು ವೆಚ್ಚ ನಿರ್ವಹಣೆ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿವೆ. CRS ತನ್ನ ವರದಿಯಲ್ಲಿ ಈ
ಅಂಕಿಅಂಶಗಳನ್ನು ಅಮೆರಿಕ ರಕ್ಷಣಾ ಇಲಾಖೆ, ಸೆಂಟ್ರಲ್ ಕಮಾಂಡ್ ಹಾಗೂ ವಿವಿಧ ಮಾಧ್ಯಮ ಮೂಲಗಳ ಆಧಾರದ ಮೇಲೆ ಸಂಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಆದರೆ ಮಧ್ಯಪ್ರಾಚ್ಯದಲ್ಲಿ ಇನ್ನೂ ಸಂಘರ್ಷದ ವಾತಾವರಣ ಮುಂದುವರಿದಿರುವುದರಿಂದ, ಮುಂದಿನ ದಿನಗಳಲ್ಲಿ ನಷ್ಟದ ಅಂಕಿಅಂಶಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಲಾಗಿದೆ.
ಇದರ ಜೊತೆಗೆ ಯುದ್ಧ ಕಾರ್ಯಾಚರಣೆಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆ ಅಮೆರಿಕ ಸರ್ಕಾರಕ್ಕೆ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮೇ 12ರಂದು ನಡೆದ ಹೌಸ್ ಅಪ್ರೊಪ್ರಿಯೇಷನ್ಸ್ ಸಬ್‌ಕಮಿಟಿ (House Appropriations Subcommittee) ಸಭೆಯಲ್ಲಿ ಪೆಂಟಗನ್ ಅಧಿಕಾರಿಗಳು ಯುದ್ಧೋಪಕರಣಗಳ ದುರಸ್ತಿ ಮತ್ತು ಬದಲಾವಣೆಯ ವೆಚ್ಚ ನಿರೀಕ್ಷೆಗೂ ಮೀರಿದೆ ಎಂದು ಒಪ್ಪಿಕೊಂಡಿದ್ದಾರೆ.
ಈಗಾಗಲೇ ಇರಾನ್ ವಿರುದ್ಧದ ಕಾರ್ಯಾಚರಣೆಗಳ ಒಟ್ಟು ವೆಚ್ಚ 29 ಬಿಲಿಯನ್ ಡಾಲರ್ (Billion Dollar) ಮೀರಿದೆ ಎಂದು ಅಂದಾಜಿಸಲಾಗಿದೆ.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಕೇವಲ ಸೈನಿಕ ಮಟ್ಟದಲ್ಲಷ್ಟೇ ಅಲ್ಲ, ಜಾಗತಿಕ ಆರ್ಥಿಕ ಮತ್ತು ರಾಜಕೀಯ ವಲಯಗಳ ಮೇಲೆಯೂ ದೊಡ್ಡ ಪರಿಣಾಮ ಬೀರುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ.
ಇದನ್ನು ಓದಿ : https://vijayatimes.com/petrol-diesel-price-hike/