ಕಿತ್ತಳೆ ಹಣ್ಣಿನ ಉಪಯೋಗ ತಿಳಿದರೆ ಈಗಲೇ ತಿನ್ನಲು ಪ್ರಾರಂಭಿಸುವಿರಿ

  • ಪ್ರೀತು

ಸ್ವಲ್ಪ ಕಹಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ, ನಮಗೆ ಗೊತ್ತಿರುವ ಹಾಗೆ ದಿನಕ್ಕೊಂದು ಸೇಬು ಸೇವಿಸಿದರೆ ವೈದ್ಯರನ್ನು ದೂರವಿಡಬಹುದು  ಎಂಬ ಗಾದೆ ನಮಗೆ ಗೊತ್ತಿದೆ ಗಾದೆಯಲ್ಲಿ ಸೇರಿಕೊಂಡಿರುವ ಸೇಬು ಹಣ್ಣಿನ ಸರಿಸಮಾನವಾಗಿ ಕಿತ್ತಲೆಹಣ್ಣನ್ನು ಕೂಡ ಅತಿ ಹೆಚ್ಚಾಗಿ ಬಳಸಬಹುದು. ಏಕೆಂದರೆ ಈ ಕಿತ್ತಲೆಗೆ ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಇದೆ.

ಸಾಮಾನ್ಯವಾಗಿ ನವಂಬರ್ ನಿಂದ ಮಾರ್ಚ್ ವರೆಗೆ ಕಿತ್ತಲೆ ಹಣ್ಣು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ.  ಈ ಕಿತ್ತಳೆಯನ್ನು ಇಂದೇ ನಿಮ್ಮ ಮನೆಗೆ ತೆಗೆದುಕೊಂಡು ಬಂದು ನಿಮ್ಮ ಆರೋಗ್ಯವನ್ನು ವೃದ್ಧಿಗೊಳಿಸಿಕೊಳ್ಳಿ.

ಕಿತ್ತಳೆಯಿಂದ ತೂಕ  ಇಳಿಸಿಕೊಳ್ಳುವುದುರ ಜೊತೆ ಜೊತೆಯಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ   ಇನ್ನು ಚಳಿಗಾಲದಲ್ಲಿ ಕಿತ್ತಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು  ಇದು ನೆಗಡಿ ಕೆಮ್ಮಿಗೆ ತುಂಬಾ ಪ್ರಯೋಜನಕಾರಿಯಾದ  ಹಣ್ಣು.

ಈ ಕಿತ್ತಲೆ ಹಣ್ಣಿನ ಉಪಯೋಗಗಳು ಎಂದರೆ …..

 ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು

  ಕಿತ್ತಳೆ ಹಣ್ಣಿನಲ್ಲಿ ಸಿಟ್ರಿಕ್ ಇಮೋನಿಯ  ಅಗಾಧ ಪ್ರಮಾಣದಲ್ಲಿ ಇರುತ್ತದೆ  ಇದು ಚರ್ಮ, ಶ್ವಾಸಕೋಶ,  ಹೊಟ್ಟೆ ಹಾಗೂ ಕರುಳಿನ ಕ್ಯಾನ್ಸರ್ಗಳನ್ನು ಒಳಗೊಂಡಂತೆ  ನಾನಾ ಬಗೆಯ ಕ್ಯಾನ್ಸರ್ ಗಳ ವಿರುದ್ಧ ಹೋರಾಡುವುದರಲ್ಲಿ ಸಹಕರಿಸುತ್ತದೆ ಎಂದು ಸಾಬೀತಾಗಿದೆ.

ಕಣ್ಣಿನ ಆರೋಗ್ಯಕ್ಕೆ

 ನಾವು  ವಯಸ್ಸಾದಂತೆ ನಮ್ಮ ಕಣ್ಣುಗಳ ಶಕ್ತಿ ಕೂಡ ಕಡಿಮೆಯಾಗುತ್ತ ಬರುತ್ತದೆ  ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ  ಮತ್ತು ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಅಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ ಅದರಿಂದ ದೃಷ್ಟಿ ಚೆನ್ನಾಗಿರಬೇಕು ಎಂದು ಬಯಸುವವರು ದಿನನಿತ್ಯ ಕಿತ್ತಲೆ ಹಣ್ಣು ಸೇವಿಸಿ.

ಯಂಗ್ ಆಗಿ  ಕಾಣುವಿರಿ

 ಚಿಕ್ಕವಯಸ್ಸಿನಲ್ಲಿ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ  ಈ ಕತ್ತಲೆಯನ್ನು ಸೇವಿಸುವುದು ಬಹಳ ಒಳ್ಳೆಯದು  ಏಕೆಂದರೆ ಈ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್-ಸಿ ಅಂಶಗಳು ಇರುವುದರಿಂದ ವಯಸ್ಸಾದವರಂತೆ ಕಾಣುತ್ತಿರುವ ನೀವು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ  ಜೊತೆಗೆ ಚರ್ಮದ ಹೊಳಪಿಗಾಗಿ  ಈ ಹಣ್ಣನ್ನು ಸೇವಿಸಬಹುದು.

 ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ

ಒಂದು ಕಪ್ ಕಿತ್ತಲೆ ಕೇವಲ 85 ಕ್ಯಾಲರಿಗಳನ್ನು ಮಾತ್ರ ಹೊಂದಿರುತ್ತದೆ ಹಾಗೂ 4.3 ಗ್ರಾಂ ಫೈಬರ್ ಇರುತ್ತದೆ  ಸಂಯುಕ್ತವು ನಿಯಮಿತವಾಗಿ  ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ತೂಕ ಇಳಿಸಲು ಕೂಡ ನಿಮಗೆ ಸಹಾಯ ಮಾಡುತ್ತದೆ

Latest News

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,