ಆಸ್ಕರ್ 2022(Oscar 2022) ಪ್ರಾರಂಭವಾಗಿದ್ದು, ಕಳೆದ ವರ್ಷಗಳಿಗಿಂತ ಈ ವರ್ಷ ಭಿನ್ನವಾಗಿದೆ. ಈ ವರ್ಷ ಸಮಾರಂಭ ಎಂದಿನಂತೆ ಇಲ್ಲ, ಕೊಂಚ ಬದಲಾವಣೆಗಳೊಂದಿಗೆ ಪ್ರಾರಂಭವಾಗಿದೆ. ಲಾಸ್ ಏಂಜಲೀಸ್ನ(Los Angeles) ಡಾಲ್ಬಿ ಥಿಯೇಟರ್ನಲ್ಲಿ(Dolby Theatre) 94 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ನಡೆಯುತ್ತಿದ್ದ ಸಮಾರಂಭವು, ಈ ವರ್ಷ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ಕಳೆದ ಮೂರು ವರ್ಷಗಳಿಂದ, ಆಸ್ಕರ್ಗೆ ಯಾವುದೇ ಹೋಸ್ಟ್ ಇರಲಿಲ್ಲ.

ಆದಾಗ್ಯೂ, ಈ ವರ್ಷದ ಆಸ್ಕರ್ಗಳನ್ನು ಹಾಸ್ಯನಟರಾದ ವಂಡಾ ಸೈಕ್ಸ್(Vanda Syks) ಮತ್ತು ಆಮಿ ಶುಮರ್(Ami Shamar) ಮತ್ತು ನಟಿ ರೆಜಿನಾ ಹಾಲ್(Regina Hal) ಆಯೋಜಿಸಿದ್ದಾರೆ. ಆಸ್ಕರ್ 2022 ರ ಸ್ಮಾರಕ ವಿಭಾಗದಲ್ಲಿ ಲತಾ ಮಂಗೇಶ್ಕರ್(Lata Mangeshkar), ದಿಲೀಪ್ ಕುಮಾರ್(Dilip Kumar) ಅವರಿಗೆ ಗೌರವ ಸಲ್ಲಿಸುವುದನ್ನು ಮರೆತಿದ್ದಾರೆ. ಆಸ್ಕರ್ 2022 ರ ಇನ್ ಮೆಮೋರಿಯಮ್ ವಿಭಾಗವು ಕಳೆದ ವರ್ಷ ನಿಧನರಾದ ಜಾಗತಿಕ ಚಲನಚಿತ್ರೋದ್ಯಮದ ಕಲಾವಿದರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಆದಾಗ್ಯೂ, ಈ ವಿಭಾಗವು ಇತ್ತೀಚೆಗೆ ನಿಧನರಾದ ಇಬ್ಬರು ಭಾರತೀಯ ಅಪ್ರತಿಮ ದಂತಕಥೆಗಳ ಸ್ಮರಣೆಯನ್ನು ಗೌರವಿಸಲು ವಿಫಲವಾಗಿದೆ ಎಂಬುದೇ ಅಕ್ಷಮ್ಯ!

ನಟ ದಿಲೀಪ್ ಕುಮಾರ್ ಮತ್ತು ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸದೇ ಕಾರ್ಯಕ್ರಮ ಪ್ರಾರಂಭಿಸಿರುವುದು ಬೇಸರದ ಸಂಗತಿಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಆಸ್ಕರ್ 2022 ರಲ್ಲಿ, ಜೇನ್ ಕ್ಯಾಂಪಿಯನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಬೆನೆಡಿಕ್ಟ್ ಕಂಬರ್ಬ್ಯಾಚ್ ಮಾನಸಿಕ ಥ್ರಿಲ್ಲರ್ ಚಿತ್ರವಾದ ದಿ ಪವರ್ ಆಫ್ ದಿ ಡಾಗ್ಗಾಗಿ ಟ್ರೋಫಿಯನ್ನು ಪಡೆದರು.