ನವದೆಹಲಿ, ಮೇ. 06: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 4,12,262 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದ್ದು 3,980 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ದೇಶದಲ್ಲಿ 2.06 ಕೋಟಿಗಿಂತಲೂ ಹೆಚ್ಚು ಕೊರೋನಾ ಪ್ರಕರಣಗಳಿದ್ದು, 35.66ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 3,29,113 ಚೇತರಿಸಿಕೊಂಡಿದ್ದು, 16,25,13,339 ಮಂದಿ ಕೊರೋನಾ ಲಸಿಕೆ ಪಡೆದಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಕೇರಳದಲ್ಲಿ 376004 ಕೊವಿಡ್ ಪ್ರಕರಣಗಳಿದ್ದು 5565 ಮಂದಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,28311, ಸಾವಿಗೀಡಾದವರ ಸಂಖ್ಯೆ 14779 ಆಗಿದೆ. ತೆಲಂಗಾಣದಲ್ಲಿರುವ ಕೊವಿಡ್ ರೋಗಿಗಳ ಸಂಖ್ಯೆ 77127 ಆಗಿದ್ದು ಈವರೆಗೆ 2579 ಮಂದಿ ಮೃತಪಟ್ಟಿದ್ದಾರೆ. 170588 ಮಂದಿ ಕೊರೊನಾ ರೋಗಿಗಳಿದ್ದು 8374 ಮಂದಿ ಸಾವಿಗೀಡಾಗಿದ್ದಾರೆ.