ಉದಯೋನ್ಮುಖ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi ) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ (IPL) 2025ರ ಮೆಗಾ ಹರಾಜಿನಲ್ಲಿ ಕ್ರಿಕೆಟ್ (Cricket) ಜಗತ್ತಿನ ಗಮನ ಸೆಳೆದಿದ್ದಾನೆ. ಬಿಹಾರದ 13 ವರ್ಷದ ಹುಡುಗ (13 years old boy) ಬ್ಯಾಟರ್ ವೈಭವ್ ಸೂರ್ಯವಂಶಿ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಆದರೆ ಈದೀಗ ಅವರ ಮೇಲೆ ವಿವಾದವೊಂದು ಸುತ್ತಿಕೊಂಡಿದೆ.
ಬಿಹಾರ ಮೂಲದ ಉದಯೋನ್ಮುಖ ಆಟಗಾರ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi )ಖರೀದಿ ಮಾಡಲು ಡೆಲ್ಲಿ ಕ್ಯಾಪಿಟಲ್ಸ್ (Delhi Capital) ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals) ನಡುವೆ ತೀವ್ರ ಪೈಪೋಟಿ ನಡೆಯಿತು, ಅಂತಿಮವಾಗಿ ರಾಜಸ್ಥಾನ ರಾಯಲ್ಸ್ (Rajasthan Royals) 1.10 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು. ಆದರೆ ಈದೀಗ ತನ್ನ ನಿಜ ವಯಸ್ಸನ್ನು ತಿರುಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈಭವ್ ಸೂರ್ಯವಂಶಿ ವಯಸ್ಸಿನ (Vaibhav is of Suryavamshi age) ವಿಚಾರವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ತನ್ನ ಮಗನ ಕ್ರಿಕೆಟ್ ಆಕಾಂಕ್ಷೆಗಳಿಗೆ ಹಣ ನೀಡಲು ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದರು. ಹೀಗೆ ಮಾರಾಟ ಕೃಷಿ ಭೂಮಿ ಮಾರಾಟ ಮಾಡಿದ ಮೂರೇ ವರ್ಷಗಳಲ್ಲಿ ಈ ದುಬಾರಿ ಬೆಲೆಗೆ ಬಿಕರಿಯಾಗುವ ಮೂಲಕ ಇತಿಹಾಸ ಬರೆದಿದ್ದಾನೆ.
ಆದರೆ ಬಿಸಿಸಿಐ (BCCI) ಮೂಲಗಳ ಪ್ರಕಾರ ವೈಭವ್ ಸೂರ್ಯವಂಶಿ (Vaibhav Suryavanshi) ವಯಸ್ಸು 13 ವರ್ಷ ಎಂದು ಹೇಳಲಾಗುತ್ತಿದೆ. ಆದರೆ ಆತನ ನೈಜ ವಯಸ್ಸು 15 ವರ್ಷಗಳು ಎಂಬ ಆರೋಪ ಕೇಳಿಬಂದಿದೆ. ತಮ್ಮ ವಯಸ್ಸು ತಿರುಚಿ ಬಿಸಿಸಿಐಗೆ ದಾಖಲೆ ನೀಡಿದ್ದಾರೆ ಎಂಬ ಆರೋಪ ವೈಭವ್ ಸೂರ್ಯವಂಶಿ ಕುಟುಂಬಸ್ಥರ ವಿರುದ್ಧ ಕೇಳಿಬಂದಿದೆ.ಇನ್ನು ವಯಸ್ಸಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವೈಭವ್ ಸೂರ್ಯವಂಶಿ ತಂದೆ ಸಂಜೀವ್ ಸೂರ್ಯವಂಶಿ, ‘ಇದರಲ್ಲಿ ಮುಚ್ಚಿಡುವುದೇನೂ ಇಲ್ಲ. ಎಲ್ಲ ದಾಖಲೆಗಳನ್ನೂ ನಾವು ಬಿಸಿಸಿಐಗೆ (BCCI) ನೀಡಿದ್ದಾವೆ. ವೈಭವ್ ಸೂರ್ಯವಂಶಿ ಈಗ ನಮ್ಮ ಮಗ ಮಾತ್ರ ಅಲ್ಲ.. ಆತ ಇಡೀ ಬಿಹಾರದ ಮಗನಾಗಿದ್ದಾನೆ. ಆತ ಪ್ರಸ್ತುತ U-19 ಏಷ್ಯಾ ಕಪ್ಗಾಗಿ ದುಬೈನಲ್ಲಿದ್ದಾನೆ. ನನ್ನ ಮಗ ಕಷ್ಟಪಟ್ಟು ಕೆಲಸ ಮಾಡಿದ್ದಾನೆ, 8 ವರ್ಷ ವಯಸ್ಸಿನಲ್ಲಿ, ಆತ 16 ವರ್ಷದೊಳಗಿನವರ ಜಿಲ್ಲಾ ಟ್ರಯಲ್ಸ್ನಲ್ಲಿ ಮಿಂಚಿದ್ದ ಎಂದು ಹೇಳಿದ್ದಾರೆ.ವಯಸ್ಸಿನ ವಿವಾದದ ಕುರಿತು ಮಾತನಾಡಿದ ಅವರು, ವೈಭವ್ ಗೆ ಎಂಟೂವರೆ ವರ್ಷವಿದ್ದಾಗ BCCI ಆತನ ಮೂಳೆ ಪರೀಕ್ಷೆ ಮಾಡಿತ್ತು. ವೈಭವ್ ಈಗ U-19 ಅನ್ನು ಆಡಿದ್ದಾರೆ. ವಯಸ್ಸಿನ ಅನುಮಾನವಿದ್ದವರೂ ಯಾರು ಬೇಕಾದರೂ ಆತನನ್ನು ಮತ್ತೆ ಪರೀಕ್ಷೆಗೊಳಪಡಿಸಬಹುದು. ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ತಿವಾರಿ ಅವರ ಆಶೀರ್ವಾದ ವೈಭವ್ ಅವರ ಕ್ರಿಕೆಟ್ ಪ್ರಯಾಣದಲ್ಲಿ (Cricket journey) ಯಾವಾಗಲೂ ಸಹಾಯ ಮಾಡಿದೆ ಎಂದು ಸಂಜೀವ್ ಸೂರ್ಯವಂಶಿ ತಿಳಿಸಿದ್ದಾರೆ.