Visit Channel

ನೀರಜ್‌ ಚೋಪ್ರಾ ಸೇರಿ 8 ಮಂದಿಗೆ ‘ಪದ್ಮ ಶ್ರೀ’ ಗೌರವ

neeraj chopra

ನವದೆಹಲಿ ಜ 26 :  ಒಲಿಂಪಿಕ್ಸ್ನ ಚಿನ್ನದ ಪದಕ ವಿಜೇತ ಜಾವಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸೇರಿ ಎಂಟು ಮಂದಿ ಪದ್ಮ ಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.
73ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ 9 ಮಂದಿ ಅಥ್ಲಿಟ್‌ಗಳು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸೆಲೆಬ್ರಿಟಿ ಅಥ್ಲಿಟ್‌ಗಳಾದ ನೀರಜ್‌, ಭಗತ್‌, ಸುಮಿತ್‌ ಅಂಟಿಲ್‌, ಅವಾನಿ ಲೆಖಾರ, ಫೈಸಲ್‌ ಅಲಿ ದರ್‌, ಶಂಕರ ನಾರಯಣ ಮೆನನ್‌, ಬ್ರಹ್ಮಾನಂದ ಶಂಕಾವಾಲ್ಕರ್‌, ವಂದನಾ ಕಟಾರಿಯಾ ಅವರು ಪದ್ಮ ಶ್ರೀ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರತಿ ವರ್ಷ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮ ಶ್ರೀ ಸೇರಿದಂತೆ ಮೂರು ವಿಭಾಗಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಅದರಂತೆ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ, ಪ್ರಮೋದ್‌ ಭಗತ್‌  ಹಾಗೂ ವಂದನಾ ಕಟಾರಿಯಾ ಅವರು 2022ರ ಕ್ರೀಡಾ ವಿಭಾಗದಲ್ಲಿ ಪದ್ಮ ಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ನೀರಜ್‌ ಚೋಪ್ರಾಗೆ ದಕ್ಕಿದ ಪರಂ ವಿಶಿಷ್ಟ ಸೇವಾ ಪದಕ

ಇದಕ್ಕೂಮುನ್ನ ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ಹುಡುಗ ನೀರಜ್‌ ಚೋಪ್ರಾ ಅವರಿಗೆ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ಪರಂ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಿದ್ದರು. ಇದರ ಜೊತೆಗೆ 384 ರಕ್ಷಣಾ ಸಿಬ್ಬಂದಿಗೆ ಶೌರ್ಯ ಹಾಗೂ ಇತರೆ ಪ್ರಶಸ್ತಿಗಳನ್ನು ನೀಡುವ ಮೂಲಕ ಗೌರವಿಸಲಾಯಿತು.

ಕ್ರೀಡಾ ವಿಭಾಗದಲ್ಲಿ ಪದ್ಮ ಶ್ರೀ ಪುರಸ್ಕೃತರು

ಅವಾನಿ ಲೇಖರ
ವಂದನಾ ಕಟಾರಿಯಾ

ನೀರಜ್‌ ಚೋಪ್ರಾ
ಸುಮಿತ್‌ ಅಂತಿಲ್‌
ಪ್ರಮೋದ್‌ ಭಗತ್‌
ಫೈಸಲ್‌ ಅಲಿ ದರ್‌
ಶಂಕರ ನಾರಯಣ ಮೆನನ್‌
ಬ್ರಹ್ಮಾನಂದ ಶಂಕಾವಾಲ್ಕರ್‌

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.