ನವದೆಹಲಿ ಜ 26 : ಮೈಕ್ರೋ ಸಾಫ್ಟ್(Microsoft) ಮುಖ್ಯಸ್ಥರಾಗಿರುವ ಸತ್ಯ ನಡೆಲ್ಲಾ ಹಾಗೂ ಗೂಗಲ್ ಸಿ.ಇ.ಒ (Satya Nadella) ಸುಂದರ್ ಪಚೈ (Sundar Pichai ) ಅವರಿಗೆ ಭಾರತ ಸರ್ಕಾರ, ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದಭೂಷಣ ಘೋಷಣೆ ಮಾಡಿದೆ. ಸದ್ಯ ಅಮೆರಿಕದ ಪ್ರಜೆಗಳಾಗಿರುವ ಇವರಿಬ್ಬರೂ ಕೂಡ ಭಾರತೀಯ ಮೂಲದವರು.
ಭಾರತ ರತ್ನ ಪದ್ಮ ವಿಭೂಷಣ ಪ್ರಶಸ್ತಿಗಳ ಬಳಿಕ ನಾಗರಿಕರಿಗೆ ಕೊಡ ಮಾಡುವ ಭಾರತದ ಮೂರನೇ ಸರ್ವೋಚ್ಚ ಪ್ರಶಸ್ತಿಯಾಗಿದೆ. ಪದ್ಮಭೂಷಣ, ಹೈದರಾಬಾದ್ ಮೂಲದವರಾಗಿರುವ 54 ವರ್ಷದ ಸತ್ಯ ನಡೆಲ್ಲಾ 2014 ರಿಂದ ಮೈಕ್ರೋಸಾಫ್ಟ್ನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿದ್ದಾರೆ.

ಜನನವರಿ 25 ರಂದು ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಸತ್ಯ ನಾದಳ ಹಾಗೂ ಸುಂದರ್ ಪಿಚೈ ಅವರ ಹೆಸರೂ ಇದೆ. ಇವರೊಂದಿಗೆ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್, ಭಾರತದ ಪ್ರಮುಖ ಎರಡು ಕೋವಿಡ್ ಲಸಿಕೆಯ ಮುಖ್ಯಸ್ಥರಾದ ಸೀರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಪೂನಾವಾಲ ಹಾಗೂ ಭಾರತ್ ಬಯೋಟೆಕ್ನ ಸುಚಿತ್ರಾ ಎಲ್ಲಾ ಅವರಿಗೂ ಪದ್ಮಭೂಷಣ ಪ್ರಾಪ್ತವಾಗಿದೆ. ಗೂಗಲ್ ಹಾಗೂ ಅಲ್ಪಾಬೆಟ್ನ ಸಿಇಒ ಆಗಿರುವ 49 ವರ್ಷದ ಸುಂದರ್ ಪಿಚ್ ತಮಿಳುನಾಡಿನ ಚೆನ್ನೈ ಮೂಲದವರ. 2019ರಲ್ಲಿ ಗೂಗಲ್ ಹಾಗೂ ಆಲ್ಪಾಬೆಟ್ನ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಪಿಚೈ ಗೂಗಲ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶ್ವದಲ್ಲೇ ಅತೀ ಹೆಚ್ಚು ಮೌಲ್ಯ ಇರುವ ಕಂಪನಿಗಳ ಪೈಕಿ ಅಲ್ಪಾಬೆಟ್ ನಾಲ್ಕನೇ ಸ್ಥಾನದಲ್ಲಿದೆ.

ರಿಲಯನ್ಸ್ ಬಳಿಕ ದೇಶದ ಅತೀ ದೊಡ್ಡ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್ನ) ಅಧ್ಯಕ್ಷರಾಗಿರುವ ಚಂದ್ರಶೇಖರ್ ಅವರಿಗೂ ಪದ್ಮಭೂಷಣ ಪ್ರಾಪ್ತವಾಗಿದೆ. ಅವರ ಅಧ್ಯಕ್ಷತೆಯಲ್ಲೇ ಟಾಟಾ ಸಮೂಹ ಸರ್ಕಾರಿ ಸ್ವಾಮ್ಯದಲ್ಲಿದ್ದ ದೇಶದ ಪ್ರಮುಖ ವಿಮಾನಯಾನ ಕಂಪನಿ ಏರ್ ಇಂಡಿಯಾವನ್ನು ಖರೀದಿ ಮಾಡಿತ್ತು.
ಕೋವ್ಯಾಕ್ಸಿನ್ ತಯಾರಿಸುವ ಭಾರತ್ ಬಯೋಟೆಕ್ನ ಅಧ್ಯಕ್ಷ ಹಾಗೂ ಎಂ.ಡಿ(MD) ಆಗಿರುವ ಕೃಷ್ಣ ಎಲ್ಲಾ ಹಾಗೂ ಜಂಟಿ ಎಂ.ಡಿ ಆಗಿರುವ ಸುಚಿತ್ರಾ ಎಲ್ಲಾರೂ ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಕೋವಿಶೀಲ್ಡ್(Covishield) ಲಸಿಕೆ(Vaccination) ತಯಾರಿಸುವ ಹಾಗೂ ವಿಶ್ವದ ಅತೀ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿರುವ ಪುಣೆಯ ಸೀರಂ ಇನ್ಸ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಹಾಗೂ ಎಂಡಿ ಆಗಿರುವ ಸೈರಸ್ ಪೂನಾವಾಲ(Sirus ponavala) ಅವರಿಗೂ ಉದ್ಯಮ ವಿಭಾಗದಲ್ಲಿ ಪದ್ಮಭೂಷಣ(Padmabhushan) ಘೋಷಣೆಯಾಗಿದೆ.