Pakistan : ಈಗಾಗಲೇ ಭಾರತವನ್ನು (India) ಕಂಡರೆ ಕೆಂಡಕಾರುತ್ತಿರುವ ಪಾಕಿಸ್ತಾನವು (Pakistan) ತನ್ನ ನೆರೆಯ ರಾಷ್ಟ್ರವಾದ ಅಫ್ಘಾನಿಸ್ತಾನ (Afghanistan) ದ ಮೇಲೆ ಮಂಗಳವಾರ ರಾತ್ರಿ ವೈಮಾನಿಕ ದಾಳಿ (Air raid) ನಡೆದಿದೆ. ಇದರ ಪರಿಣಾಮ 15 ಮಂದಿ ಸಾ*ನ್ನಪ್ಪಿದ್ದಾರೆ. ಸಾ*ನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಭಾವಿಸಲಾಗಿದೆ. ಡಿಸೆಂಬರ್ 24 ರ ರಾತ್ರಿ ನಡೆದ ಈ ವೈಮಾನಿಕ ದಾಳಿಯಲ್ಲಿ ಲಾಮನ್ ಸೇರಿದಂತೆ ಏಳು ಗ್ರಾಮಗಳ (Seven villages including Laman) ಮೇಲೆ ದಾಳಿ ನಡೆದಿದೆ.

ಈ ದಾಳಿಯಲ್ಲಿ ಒಂದೇ ಕುಟುಂಬದ ಐವರು ಸಾ*ನ್ನಪ್ಪಿದ್ದಾರೆ. ವರದಿಯ ಪ್ರಕಾರ, ಪಾಕಿಸ್ತಾನದ ಫೈಟರ್ (Pakistani fighter) ಜೆಟ್‌ಗಳು ಈ ಬಾಂಬ್ ದಾಳಿ ನಡೆಸಿವೆ.ತಾಲಿಬಾನ್ ತರಬೇತಿ (Training the Taliban) ಶಿಬಿರವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅನೇಕ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಬರ್ಮಾಲ್‌ನ ಮುರ್ಗ್ ಬಜಾರ್ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ (Many were injured) ಎಂದೂ ಕೂಡ ಹೇಳಲಾಗುತ್ತಿದೆ.
ಅಫ್ಘಾನ್ ಮಾಧ್ಯಮಗಳ ಪ್ರಕಾರ (According to Afghan media) , ಈ ವೈಮಾನಿಕ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರಿ ವಿನಾಶ ಸಂಭವಿಸಿದೆ. ಪಾಕಿಸ್ತಾನದ ವೈಮಾನಿಕ (Aviation of Pakistan) ದಾಳಿಯ ನಂತರ ಈ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಖಾಮಾ ಪ್ರೆಸ್ (Khama Press) ವರದಿ ಮಾಡಿದೆ.ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಅಫ್ಘಾನ್ ರಕ್ಷಣಾ (Afghan Defence) ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಮಾರ್ಚ್ ನಂತರ ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನದ ಎರಡನೇ ದಾಳಿ ಇದಾಗಿದೆ. ಅಂತಾರಾಷ್ಟ್ರೀಯ (International) ಕಾನೂನುಗಳ ಉಲ್ಲಂಘನೆ ಮತ್ತು ಕ್ರೂರ ಕೃತ್ಯ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.