Buffalo gift: Pakistan bowler Arshad Nadeem gifted with buffalo
Pak Gold Medallist Arshad Nadeem Viral News
Paris Olympics 2024: ಪ್ಯಾರಿಸ್ನಲ್ಲಿ (Paris) ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ (Arshad Nadeem) ಅವರು ಒಲಿಂಪಿಕ್ಸ್ ಇತಿಹಾಸದಲ್ಲೇ ಪಾಕ್ ಪರ ಪದಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದೀಗ ಚಿನ್ನದ ಪದಕದೊಂದಿಗೆ ತವರಿಗೆ ಹಿಂತಿರುಗಿರುವ ನದೀಮ್ಗೆ ಅದ್ದೂರಿ ಸ್ವಾಗತ ಕೋರಲಾಗಿದ್ದು, ಈ ಸ್ವಾಗತದೊಂದಿಗೆ ಪಾಕ್ನ ಚಿನ್ನದ ಹುಡುಗನಿಗೆ ಉಡುಗೊರೆಯ ಮಹಾಪೂರವೇ ಹರಿದು ಬರುತ್ತಿದೆ. ಈ ಉಡುಗೊರೆಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಎಮ್ಮೆಯ ಗಿಫ್ಟ್.
ಅರ್ಷದ್ ನದೀಮ್ಗೆ ಅವರ ಮಾವ ಮೊಹಮ್ಮದ್ ನವಾಝ್ (Mohammed Nawaz) ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅತ್ತ ಮಾವ ನೀಡಿದ ಉಡುಗೊರೆಯನ್ನು ಅರ್ಷದ್ ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಇದೀಗ ಈ ಗಿಫ್ಟ್ ಸುದ್ದಿಯು ಸಿಕ್ಕಾಪಟ್ಟೆ ವೈರಲ್ ಆಗಿದೆ.
Arshad Nadeem was gifted a buffalo by his father-in-law Mohammed Nawaz. Arshad accepted the gift given by mother-in-law with full heart. Now this gift news has gone viral.
ಅಲ್ಲಿನ ಸಂಪ್ರದಾಯವೇ ಎಮ್ಮೆಯನ್ನು ಉಡುಗೊರೆಯಾಗಿ ನೀಡಲು ಮುಖ್ಯ ಕಾರಣ. ಅವರ ಗ್ರಾಮದಲ್ಲಿ ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಮೌಲ್ಯಯುತ ಮತ್ತು ಗೌರವದ ಸೂಚಕ.
The tradition there is the main reason for giving a buffalo as a gift. A gift of a buffalo is highly valued and a sign of respect in their village.
ಅರ್ಷದ್ ನದೀಮ್ ಯಾವಾಗಲೂ ತಮ್ಮ ಪರಂಪರೆಯನ್ನು ಗೌರವಿಸುವ ವ್ಯಕ್ತಿ. ಅಷ್ಟೇ ಅಲ್ಲದೆ ಈ ಹಿಂದೆಯೇ ಯಶಸ್ಸಿನ ಉತ್ತುಂಗಕ್ಕೇರಿದರೂ ಅವರು ಯಾವತ್ತೂ ತಮ್ಮ ಹಳ್ಳಿಯನ್ನು ತೊರೆದಿಲ್ಲ. ಈಗಲೂ ತನ್ನ (Buffalo Gift) ಹೆತ್ತವರು ಮತ್ತು ಸಹೋದರರೊಂದಿಗೆ ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿಯೇ ಅವರಿಗೆ ಗೌರವ ಸೂಚಿಸಲು ಎಮ್ಮೆಯನ್ನು ಉಡುಗೊರೆಯಾಗಿ ನೀಡಿದ್ದೇವೆ ಎಂದು ಮಾವ ಮೊಹಮ್ಮದ್ ನವಾಝ್ ತಿಳಿಸಿದ್ದಾರೆ.
ಮೊಹಮ್ಮದ್ ನವಾಝ್ ಅವರಿಗೆ 4 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದು, ಅದರಲ್ಲಿ ಕಿರಿಯ ಮಗಳು ಆಯೇಷಾಳನ್ನು ಅರ್ಷದ್ ನದೀಮ್ ಮದುವೆಯಾಗಿದ್ದಾರೆ. ತನ್ನ ಕಿರಿಯ ಮಗಳನ್ನು ನದೀಮ್ಗೆ ಮದುವೆ ಮಾಡಲು ನಿರ್ಧರಿಸಿದಾಗ, ಅವರು ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಇದಾಗ್ಯೂ ನದೀಮ್ ಮೊದಲಿನಿಂದಲೂ ಜಾವೆಲಿನ್ ಕ್ರೀಡೆಯ ಬಗ್ಗೆ ತುಂಬಾ ಒಲವು ಹೊಂದಿದ್ದರು. ಅಲ್ಲದೆ ಗದ್ದೆಗಳಲ್ಲಿ ಜಾವೆಲಿನ್ (Javelin Throw) ಎಸೆಯುವುದನ್ನು ಅಭ್ಯಾಸ ಮಾಡುತ್ತಿದ್ದರು.
ಇದೀಗ ಕಠಿಣ ಪರಿಶ್ರಮದ ಫಲವಾಗಿ ಅರ್ಷದ್ ನದೀಮ್ ಒಲಿಂಪಿಕ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನ ಜಾವೆಲಿನ್ ಥ್ರೋನಲ್ಲಿ 92.97 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲೇ ಅತೀ ದೂರ ಭರ್ಜಿ ಎಸೆದು ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
Paris Olympics 2024: In the javelin throw competition held in Paris, Pakistani athlete Arshad Nadeem has won the gold medal for Pakistan in the history of Olympics. Nadeem, who has now returned home with a gold medal, has been given a grand welcome, and with this welcome, the golden boy of Pakistan is showered with gifts. Among these gifts, the one that caught everyone's attention was the buffalo gift.
Arshad Nadeem has always been a man who respects his heritage. Also, despite reaching the peak of success earlier, he never left his village. Still lives in the village with his (Buffalo Gift) parents and brothers. Father-in-law Mohammad Nawaz said that he was given a buffalo as a gift to show his respect.