Cricket : ಟಿ-20 ವಿಶ್ವಕಪ್‌ನಲ್ಲಿ(T20 World Cup) ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ ಸೋತು ಟೂರ್ನಿಯಿಂದ ಹೊರಬಿದ್ದ ನಂತರ ಇದೀಗ ಪಾಕಿಸ್ತಾನ(Pak PM Replies) ತಂಡವನ್ನು ಎಲ್ಲೆಡೆ ಟ್ರೋಲ್(Troll) ಮಾಡಲಾಗುತ್ತಿದೆ.

ಜಿಂಬಾಬ್ವೆ ತಂಡದ ಗೆಲುವನ್ನು ಸಂಭ್ರಮಿಸಿರುವ ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಟ್ವೀಟರ್‌ನಲ್ಲಿ ಪಾಕಿಸ್ತಾನ ತಂಡವನ್ನು(Pak PM Replies) ಲೇವಡಿ ಮಾಡಿದ್ದಾರೆ.
ಜಿಂಬಾಬ್ವೆ ಅಧ್ಯಕ್ಷ ಎಮ್ಮರ್ಸನ್ ದಂಬುಡ್ಜೊ ಮ್ನಂಗಾಗ್ವಾ ಅವರು,
“ಮುಂದಿನ ಬಾರಿ ನಿಜವಾದ ಮಿಸ್ಟರ್ ಬೀನ್ ಅನ್ನು ಕಳುಹಿಸಿ” ಎಂದು ಹೇಳುವ ಮೂಲಕ ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ.
ಜಿಂಬಾಬ್ವೆ ಅಧ್ಯಕ್ಷರ ಈ ಲೇವಡಿ ವಿಶ್ವದಾದ್ಯಂತ ಬಾರೀ ವೈರಲ್ ಆಗಿದೆ.
ಇದೀಗ ಪಾಕಿಸ್ತಾನದ ಪ್ರಧಾನಿ ತಮ್ಮ ತಂಡದ ಬೆಂಬಲಕ್ಕೆ ನಿಂತಿದ್ದು, ಜಿಂಬಾಬ್ವೆ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್(Shebaz Shareef) ಈ ಕುರಿತು ಟ್ವೀಟ್ ಮಾಡಿದ್ದು,
ಇದನ್ನೂ ಓದಿ : https://vijayatimes.com/vladimir-putin-likes-pm/
“ನಮ್ಮಲ್ಲಿ ನಿಜವಾದ ಮಿಸ್ಟರ್ ಬೀನ್ ಇಲ್ಲದಿರಬಹುದು, ಆದರೆ ನಮ್ಮಲ್ಲಿ ನಿಜವಾದ ಕ್ರಿಕೆಟ್ ಸ್ಪೂರ್ತಿ ಇದೆ. ನಾವು ಪಾಕಿಸ್ತಾನಿಗಳು ತಮಾಷೆಯ ಅಭ್ಯಾಸವನ್ನು ಹೊಂದಿದ್ದೇವೆ.
ಶ್ರೀ ಅಧ್ಯಕ್ಷ ಅವರಿಗೆ ಅಭಿನಂದನೆಗಳು. ನಿಮ್ಮ ತಂಡ ಇಂದು ಚೆನ್ನಾಗಿ ಆಡಿದೆ” ಎಂದು ಪಾಕಿಸ್ತಾನದ ಪ್ರಧಾನಿ ಬರೆದಿದ್ದಾರೆ.
ಪಾಕಿಸ್ತಾನ-ಜಿಂಬಾಬ್ವೆ ನಡುವಿನ ಪಂದ್ಯಕ್ಕೂ ಮುನ್ನ ಪಾಕ್ ತಂಡದ ಆಟಗಾರರು ಅಭ್ಯಾಸ ನಡೆಸುತ್ತಿರುವ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದು,
ಇದಕ್ಕೆ ಪ್ರತಿಕ್ರಿಯಿಸಿದ ನ್ಗುಗಿ ಚಸುರಾ ಎಂಬ ಟ್ವಿಟ್ಟರ್ ಬಳಕೆದಾರ,

“ಜಿಂಬಾಬ್ವೆಯನ್ನರಾದ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ … ಒಮ್ಮೆ ಮಿಸ್ಟರ್ ಬೀನ್ ರೋವನ್ ಬದಲಿಗೆ ಫ್ರಾಡ್ ಪಾಕ್ ಬೀನ್ ಎಂದು ನಮಗೆ ನೀಡಿದರು.
ನಾವು ನಾಳೆ ಈ ವಿಷಯವನ್ನು ಇತ್ಯರ್ಥಪಡಿಸುತ್ತೇವೆ. ಕೇವಲ ಮಳೆಯು ನಿಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇವೆ.” ಎಂದು ಟ್ವೀಟ್ ಮಾಡಿದ್ದರು.
https://youtu.be/uIK8oV-Tg5k ಯಾವುದೇ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸದೆ ಕೃಷಿ
ಈ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಬಿರುಗಾಳಿಯನ್ನು ಸೃಷ್ಟಿಸಿತು. ಪಾಕಿಸ್ತಾನ-ಜಿಂಬಾಬ್ವೆ ಪಂದ್ಯವನ್ನು ‘ಮಿಸ್ಟರ್ ಬೀನ್ ಡರ್ಬಿ’ ಎಂಬ ಹ್ಯಾಷ್ಟ್ಯಾಗ್ ಟ್ರೇಂಡ್ ಆಗಿತ್ತು.
- ಮಹೇಶ್.ಪಿ.ಎಚ್