- ಟಿ20 ವಿಶ್ವಕಪ್‌ನಲ್ಲಿ ಭಾರತ ಎದುರಿಸಲು (pakistan refuses to play with india ) ನಿರಾಕರಿಸಿದ ಪಾಕಿಸ್ತಾನ
- ಭಾರತದ ವಿರುದ್ಧ ಕ್ರಿಕೆಟ್ ಆಡಲ್ಲ ಎಂದು ಪಾಕಿಸ್ತಾನದ ಸ್ಪಷ್ಟ ಘೋಷಣೆ
- ಕ್ರಿಕೆಟ್‌ನಲ್ಲಿ ರಾಜಕೀಯ ಬೇಡ ಎಂದು ಸ್ಪಷ್ಟ ಸಂದೇಶ
2026ರ ಐಸಿಸಿ ಪುರುಷರ ಟಿ20 (T20) ವಿಶ್ವಕಪ್‌ಗೆ ಸಂಬಂಧಿಸಿದಂತೆ (pakistan refuses to play with india) ಭಾರತ–ಪಾಕಿಸ್ತಾನ ಪಂದ್ಯ ಕುರಿತು ದೊಡ್ಡ ಬೆಳವಣಿಗೆ ನಡೆದಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಝ್ ಷರೀಫ್ (Shahbaz Sharif) ಅವರು, ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಫೆಬ್ರವರಿ 7ರಿಂದ ಆರಂಭವಾಗಲಿರುವ ಈ ಬಹುನಿರೀಕ್ಷಿತ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ (pakistan refuses to play with india) ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದರೂ, ಫೆಬ್ರವರಿ 15ರಂದು ನಡೆಯಬೇಕಿದ್ದ ಈ ಹೈವೋಲ್ಟೇಜ್ ಪಂದ್ಯ ಇದೀಗ ನಡೆಯದಿರುವುದು ಬಹುತೇಕ ಖಚಿತವಾಗಿದೆ.
ಈ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ ವ್ಯಕ್ತವಾಗಿದ್ದು, ಟೂರ್ನಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಫೆಬ್ರವರಿ 4, 2026ರಂದು ಪಾಕಿಸ್ತಾನದಲ್ಲಿ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಕಾರಣಗಳನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
“ನಮ್ಮ ನಿಲುವು ಸ್ಪಷ್ಟವಾಗಿದೆ. ನಾವು ಭಾರತದ ವಿರುದ್ಧ ಆಡುವುದಿಲ್ಲ” ಎಂದು ಅವರು ಹೇಳಿದ್ದಾರೆ. ಕ್ರೀಡೆ ರಾಜಕೀಯದಿಂದ ದೂರ ಇರಬೇಕು ಎಂಬುದು ಪಾಕಿಸ್ತಾನದ ಮೂಲ ತತ್ವವಾಗಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಟಿ20 ವಿಶ್ವಕಪ್ ಕ್ರೀಡಾ ವೇದಿಕೆ ಆಗಿದ್ದು, ರಾಜಕೀಯ ವಿಚಾರಗಳಿಗೆ ಸ್ಥಳವಿಲ್ಲ ಎಂಬುದನ್ನು ಅವರು ಪುನರುಚ್ಚರಿಸಿದರು.
ಈ ಬಹಿಷ್ಕಾರದ ಹಿಂದೆ ಬಾಂಗ್ಲಾದೇಶ್‌ಗೆ ಬೆಂಬಲವೇ ಪ್ರಮುಖ ಕಾರಣ ಎಂದು ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ್ (Bangaldesh) ತಂಡವನ್ನು ಹೊರಗಿಟ್ಟಿರುವ ಕ್ರಮವನ್ನು ಪಾಕಿಸ್ತಾನ ಖಂಡಿಸಿದೆ. ಬಾಂಗ್ಲಾದೇಶ್ ತಂಡಕ್ಕೆ ತಟಸ್ಥ ಸ್ಥಳದಲ್ಲಿ ಆಡಲು ಅವಕಾಶ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಗ್ರಹಿಸಿದ್ದರೂ, ಐಸಿಸಿ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶ್ ನಿಲುವಿಗೆ ಬೆಂಬಲ ಸೂಚಿಸುವ ಸಲುವಾಗಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕಿಸ್ತಾನ ತೆಗೆದುಕೊಂಡಿದೆ ಎಂದು ತಿಳಿಸಿದೆ.
ಪ್ರಧಾನಿ ಶೆಹಬಾಝ್ ಷರೀಫ್ ಅವರು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುತ್ತಾ, “ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು ಎಂಬುದು ನಮ್ಮ ನಂಬಿಕೆ. ನಾವು ತೆಗೆದುಕೊಂಡಿರುವ ಈ ನಿರ್ಧಾರವು ಪರಿಗಣಿತ ಹಾಗೂ ಸೂಕ್ತವಾಗಿದೆ. ಬಾಂಗ್ಲಾದೇಶ್ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದಾರೆ.
ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಭಾರತ ವಿರುದ್ಧ ಪಂದ್ಯ ಬಹಿಷ್ಕಾರ ಕುರಿತು ಐಸಿಸಿಗೆ ಯಾವುದೇ ಅಧಿಕೃತ ಪತ್ರವನ್ನು ಕಳುಹಿಸಿಲ್ಲ.
ಆದರೂ, ಪ್ರಧಾನಿಯ ಘೋಷಣೆಯ ನಂತರ ಭಾರತ–ಪಾಕಿಸ್ತಾನ ಪಂದ್ಯ ನಡೆಯುವುದಿಲ್ಲ ಎಂಬುದು ದೃಢಪಟ್ಟಂತೆ ಕಾಣುತ್ತಿದೆ.
ಪಾಕಿಸ್ತಾನ ಪಂದ್ಯಕ್ಕೆ ಹಾಜರಾಗದಿದ್ದರೆ, ಅದರ ಪರಿಣಾಮಗಳು ಗಂಭೀರವಾಗಿರಲಿವೆ. ಐಸಿಸಿ ನಿಯಮಾವಳಿ ಪ್ರಕಾರ, ಪಾಕಿಸ್ತಾನ ತಂಡ ಪಂದ್ಯವನ್ನು ಬಹಿಷ್ಕರಿಸಿದರೆ ಭಾರತಕ್ಕೆ ವಾಕ್‌ಓವರ್ ಮೂಲಕ 2 ಅಂಕಗಳನ್ನು ನೀಡಲಾಗುತ್ತದೆ.
ಇದರಿಂದ ಗ್ರೂಪ್ ಹಂತದ ಲೆಕ್ಕಾಚಾರವೇ ಬದಲಾಗುವ ಸಾಧ್ಯತೆ ಇದೆ. ಜೊತೆಗೆ, “ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವಿಕೆ” ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ. ಇದರ ಪರಿಣಾಮವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯೂ ಇದೆ.
ಒಟ್ಟಾರೆ, ಈ ನಿರ್ಧಾರವು ಟಿ20 ವಿಶ್ವಕಪ್ 2026ರ ರಾಜಕೀಯ ಹಾಗೂ ಕ್ರೀಡಾ ಚರ್ಚೆಗೆ ಹೊಸ ತಿರುವು ನೀಡಿದೆ.
ಇದನ್ನು ಓದಿ : https://vijayatimes.com/hike-in-metro-ticket-price/