- ಶ್ರೀಲಂಕಾಕ್ಕೆ ಅವಧಿ ಮೀರಿದ ಆಹಾರ ಪೂರೈಸಿದ ಪಾಕಿಸ್ತಾನ (Pakistan still supplies expired food)
- ಒಗ್ಗಟ್ಟನ್ನು ಪ್ರದರ್ಶಿಸಲು ಪಾಕಿಸ್ತಾನ ಮಾಡಿದ ಪ್ರಯತ್ನ ಮುಜುಗರಕ್ಕೆ ಕಾರಣವಾಗಿದೆ
- ಪಾಕಿಸ್ತಾನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ
ದಿತ್ವಾ ಚಂಡಮಾರುತದ (Ditva cyclone) ಅಬ್ಬರಕ್ಕೆ ಶ್ರೀಲಂಕಾದ ದ್ವೀಪ ರಾಷ್ಟ್ರ ತತ್ತರಿಸಿರುವ ಸಂದರ್ಭದಲ್ಲಿ ನೆರವಿಗಾಗಿ ಅನೇಕ ರಾಷ್ಟ್ರಗಳು ಕೈಜೋಡಿಸಿದ್ದವು. ಭಾರತ ‘ಆಪರೇಷನ್ ಸಾಗರ್ ಬಂಧು’
(Operation Sagar Bandhu) ಮೂಲಕ ಹೆಚ್ಚಿನ ಪ್ರಮಾಣದ ಮಾನವೀಯ ನೆರವನ್ನು ಕಳುಹಿಸಿ ಸಹಾಯ ಮಾಡುತ್ತಿದ್ದರೆ, ಪಾಕಿಸ್ತಾನವೂ ತನ್ನ ಪರಿವೇಯನ್ನು ತೋರಿಸಲು ಪರಿಹಾರ ಸಾಮಗ್ರಿಗಳನ್ನು ಕೊಲಂಬೊಗೆ
ಕಳುಹಿಸಿತು. ಆದರೆ ಈ ನೆರವಿನ ಪ್ಯಾಕೇಜ್‌ಗಳು ಅವಧಿ ಮೀರಿರುವುದು ಬಹಿರಂಗವಾದ ನಂತರ, (Pakistan still supplies expired food) ಪಾಕಿಸ್ತಾನ ತೀವ್ರ ಮಟ್ಟದ ಟೀಕೆ ಹಾಗೂ ಜಾಗತಿಕ ಹಾಸ್ಯಕ್ಕೆ
ಗುರಿಯಾಗಿದೆ. ಪಾಕಿಸ್ತಾನ ಹೈಕಮಿಷನ್ (High Commission) ಸ್ವತಃ ಪ್ರಕಟಿಸಿದ ಈ ಪ್ಯಾಕೇಜ್‌ಗಳ ಫೋಟೋಗಳಲ್ಲಿ “EXP: 10/2024” ಎಂಬ ಗುರುತು ಸ್ಪಷ್ಟವಾಗಿ ಕಾಣಿಸಿತ್ತು. ಪ್ರವಾಹ-ಭೂಕುಸಿತಗಳಿಂದ
ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನತೆಗೆ ಇಂತಹ ಅವಧಿ ಮೀರಿದ ಆಹಾರ-ಔಷಧಿ ಕಳುಹಿಸಿರುವುದು ಮಾನವೀಯತೆಯ ಹೆಸರಿನಲ್ಲಿ ದೊಡ್ಡ ಅವಮಾನವೆಂದು ಸಾಮಾಜಿಕ ಜಾಲತಾಣದಲ್ಲಿ ಜನರು
ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರ X (ಹಳೆಯ ಟ್ವಿಟರ್) ನಲ್ಲಿ “ಶ್ರೀಲಂಕಾದವರ ಜೊತೆ ನಾವು ನಿಂತಿದ್ದೇವೆ” ಎಂದು ಪ್ರಕಟಣೆ ಜೊತೆಗೆ ಪರಿಹಾರ ಸಾಮಗ್ರಿಗಳ ಚಿತ್ರಗಳನ್ನು ಹಂಚಿಕೊಂಡ ಕೆಲವೇ
ಗಂಟೆಗಳಲ್ಲಿ ವಿವಾದ ಮೂಡಿದೆ. ನೆಟ್ಟಿಗರು ಅವಧಿ ಮೀರಿದ ದಿನಾಂಕವನ್ನು ಜೂಮ್ ಮಾಡಿ ವೈರಲ್ ಮಾಡುತ್ತಿದ್ದಂತೆ, ಪಾಕಿಸ್ತಾನದ ಪ್ರದರ್ಶನಾತ್ಮಕ ನೆರವಿನ ಹಿಂದೆ ಇರುವ ನಿರ್ಲಕ್ಷ್ಯ ಮತ್ತು ಮಾನವೀಯತೆ ಬಗ್ಗೆ
ಪ್ರಶ್ನೆಗಳು ಎದ್ದುಕೊಂಡವು. ಅಕ್ಟೋಬರ್ 2024ರಲ್ಲಿ ಬಳಸಬೇಕಾಗಿದ್ದ ಆಹಾರ ಸಾಮಗ್ರಿಗಳನ್ನು 2025ರ ಕೊನೆಯಲ್ಲಿ ಪ್ರವಾಹ ಪೀಡಿತರಿಗೆ ಕಳುಹಿಸಿರುವುದು ಕೇವಲ ಅಜಾಗರೂಕತೆ ಅಲ್ಲ, ಮಾನವೀಯ ನೆರವಿನ
ಘನತೆಯನ್ನು ತುಳಿಯುವ ವರ್ತನೆ ಎಂದು ಅನೇಕರು ಕಿಡೀ ಕಾರಿದ್ದಾರೆ. ಎಂತಹ ದುಸ್ಥಿತಿಯಲ್ಲಿದ್ದರೂ ಕೂಡ ನೆರವಿನಲ್ಲಿ ಪ್ರಾಮಾಣಿಕತೆ ಕಾಪಾಡಬೇಕು ಎಂಬುದು ನಾಗರಿಕರ ನಿಲುವಾಗಿದೆ. “ಪಾಕಿಸ್ತಾನ ಹಳೆಯ ಚಾಳಿ
ಬಿಡುವುದಿಲ್ಲ” ಎಂಬ ಕಾಮೆಂಟ್‌ಗಳು (Comments) ಎಷ್ಟೋ ಸಾವಿರ ಬಾರಿ ಹಂಚಲ್ಪಟ್ಟಿವೆ. ಇದೇ ವೇಳೆ, ಅನೇಕ ಸಾಮಾಜಿಕ ಕಾರ್ಯಕರ್ತರು ಹಾಗೂ ವಿದೇಶಾಂಗ ವಿಶ್ಲೇಷಕರು ಈ ಘಟನೆ ಪಾಕಿಸ್ತಾನದ ನೆರವಿನ
ಗುಣಮಟ್ಟದ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ ಎಂದು ಹೇಳಿದ್ದಾರೆ. ಪ್ರವಾಹ ಪೀಡಿತರಿಗೆ ತುರ್ತು ಅವಶ್ಯಕವಾಗಿರುವ ಔಷಧಿ, ಆಹಾರ ಸಾಮಗ್ರಿಗಳು ಕೇವಲ ಅವಧಿ ಮೀರಿದ ಕಾರಣದಿಂದಲೇ ಅಪಾಯಕ್ಕೆ(Pakistan
continues old practice of supplying expired food) ಕಾರಣವಾಗಬಹುದೆಂಬುದು ವೈದ್ಯಕೀಯ ತಜ್ಞರ ಎಚ್ಚರಿಕೆ. “ಇದು ಮಾನವೀಯ ನೆರವಲ್ಲ, ಇದು ನಿರ್ಲಕ್ಷ್ಯದ ಗೂಡಿನಿಂದ ಬಂದ ವಿಷಪೂರಿತ ಸಹಾಯ” ಎಂದು ಕೆಲವು ಬಳಕೆದಾರರು ಟೀಕಿಸಿದ್ದಾರೆ.
ಇನ್ನು ಕೆಲವರು, “ಸಂಕಷ್ಟದಲ್ಲಿರುವ ರಾಷ್ಟ್ರಕ್ಕೆ ಸಹಾಯ ಮಾಡುವುದು ಸಾಮಾನ್ಯ, ಆದರೆ ಹಾನಿಗೊಳಗಾಗುವಂತಹ ವಸ್ತುಗಳನ್ನು ಕಳುಹಿಸುವುದು ಅಪರಾಧಕ್ಕೆ ಸಮಾನ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಮಾನವೀಯ ನೆರವಿನ ಹೆಸರಿನಲ್ಲಿ ಪಾಕ್ ಕಳುಹಿಸಿರುವ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಯಾವಾಗಲೂ ಅನುಮಾನ ವ್ಯಕ್ತವಾಗುತ್ತಲೇ ಬಂದಿದೆ ಎಂಬ ಹಳೆಯ ಘಟನೆಗಳು ಮತ್ತೆ
ನೆನಪಾಗಿವೆ. ಇನ್ನು ಶ್ರೀಲಂಕಾದ ಅಧಿಕಾರಿಗಳೂ ಪಾಕಿಸ್ತಾನ ಕಳುಹಿಸಿದ ಪ್ಯಾಕೇಜ್‌ಗಳಲ್ಲಿ (package) ಅನೇಕ ವಸ್ತುಗಳು ಬಳಕೆಗೆ ಯೋಗ್ಯವಾಗಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಕೆಲವು ವರದಿಗಳ ಪ್ರಕಾರ, ಕೊಲಂಬೊ (Colombo) ಆಡಳಿತವು ಪಾಕ್ ಸರ್ಕಾರಕ್ಕೆ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದು, ಭವಿಷ್ಯದಲ್ಲಿ ನೆರವಿನ ವಸ್ತುಗಳ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ
ಸೂಚಿಸಿದೆ. ಈಗಾಗಲೇ 300ಕ್ಕಿಂತ ಹೆಚ್ಚು ಜನರು ಜೀವ ಕಳೆದುಕೊಂಡಿದ್ದು, ಸಾವಿರಾರು ಕುಟುಂಬಗಳು ಮನೆ-ಮಠ ಕಳೆದುಕೊಂಡಿದೆ.
ಇಂತಹ ದೊಡ್ಡ ಪ್ರಮಾಣದ ರಾಷ್ಟ್ರೀಯ ದುರಂತದ ಸಂದರ್ಭದಲ್ಲಿ ನೆರವಿನ ಹೆಸರಿನಲ್ಲಿ ಕಳುಹಿಸಲಾಗುವ ವಸ್ತುಗಳ ಗುಣಮಟ್ಟದ ಬಗ್ಗೆ ರಾಷ್ಟ್ರಗಳು ಸಂವೇದನಶೀಲರಾಗಿರಬೇಕು ಎಂಬ ಸಂದೇಶವೂ ಈ ಘಟನೆಯಿಂದ
ಹೊರಬಂದಿದೆ. ಜನಜೀವನ ಅಸ್ಥಿರಗೊಂಡಿರುವ ಪರಿಸ್ಥಿತಿಯಲ್ಲಿ, ತಪ್ಪಾದ ನೆರವು ಸಹಾಯವಾಗುವುದಕ್ಕಿಂತ ಹೆಚ್ಚು ಹಾನಿ ಉಂಟುಮಾಡಬಹುದು ಎಂಬುದು ಸ್ಪಷ್ಟವಾಗಿದೆ.ಪಾಕಿಸ್ತಾನದ ಈ ವರ್ತನೆ ಮೊದಲ ಬಾರಿಗೆ
ಬೆಳಕಿಗೆ ಬರುತ್ತಿಲ್ಲ. 2021ರಲ್ಲಿ, ಭಾರತವು ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ (Afghanistan) ಪಾಕಿಸ್ತಾನದ ಮೂಲಕ ಗೋಧಿ ಹಿಟ್ಟನ್ನು ಕಳುಹಿಸಿದ್ದಾಗ ಅದೂ ಹಾಳಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.
ಅನೇಕ ಘಟನೆಗಳಲ್ಲಿ ಪಾಕಿಸ್ತಾನ ವಿದೇಶಗಳಿಂದ ಪಡೆದ ಹಳೆಯ ಸಾಮಗ್ರಿಗಳನ್ನು ಮತ್ತೆ ಬೇರೊಂದು ದೇಶಕ್ಕೆ ‘ಮಾನವೀಯ ನೆರವಿನ’ ಹೆಸರಿನಲ್ಲಿ ಫಾರ್ವರ್ಡ್ (Forward) ಮಾಡಿರುವ ಆರೋಪಗಳು ಕೇಳಿಬಂದಿವೆ.
ಇಂತಹ ವರ್ತನೆ ರಾಷ್ಟ್ರದ ಗೌರವವನ್ನೇ ಹಾಳು ಮಾಡುತ್ತದೆ ಎಂಬ ಟೀಕೆಗಳು ಜೋರಾಗಿವೆ. ದಿತ್ವಾ ಚಂಡಮಾರುತದಿಂದ ನಲುಗಿರುವ ಶ್ರೀಲಂಕಾದಂತೆ ನೆರವಿನ ಅವಶ್ಯಕತೆಯಲ್ಲಿರುವ ರಾಷ್ಟ್ರಗಳಿಗೆ ಗುಣಮಟ್ಟದ,
ಸುರಕ್ಷಿತ ನೆರವನ್ನು ಕಳುಹಿಸುವುದು ಅಂತಾರಾಷ್ಟ್ರೀಯ ಸಂಬಂಧಗಳ ಮೂಲಭೂತ ಮೌಲ್ಯ ಎಂದೇ ಪರಿಗಣಿಸಲಾಗಿದೆ. ಆದರೆ ಪಾಕಿಸ್ತಾನ ಮತ್ತೆ ಹಳೆಯ ಎಡವಟ್ಟನ್ನು ಮರುಕಳಿಸಿರುವುದು, ಮಾನವೀಯತೆ ಬಗ್ಗೆ ಗಂಭೀರ ಚಿಂತನೆ ಮೂಡಿಸಿದೆ.
ಇದನ್ನು ಓದಿ: ಬೈಕ್ ಟ್ಯಾಕ್ಸಿಗೆ ರೆಡ್ ಸಿಗ್ನಲ್: ಕಾನೂನು ಬಾಹಿರವೆಂದು ಹೈಕೋರ್ಟ್ಗೆ ವರದಿ ನೀಡಿದ ಹೈಪವರ್ ಕಮಿಟಿ
