Mumbai : ಎಂ.ಎಸ್ ಧೋನಿ (MS Dhoni) ಆರ್ಸಿಬಿ (RCB) ಕ್ಯಾಪ್ಟನ್ ಆಗಿದ್ದಿದ್ದರೆ ಆರ್ಸಿಬಿ ತಂಡ ಮೂರು ಬಾರಿ ಐಪಿಎಲ್ ಕಪ್ (Indian Premier League Title) ಗೆಲ್ಲುತ್ತಿತ್ತು ಎಂದು ವಾಸಿಂ (Pakistani cricketer WasimAkram Statement) ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ (Pakistan Cricket Team Captain Wasim Akram) ಪ್ರಕಾರ, ಎಂಎಸ್ ಧೋನಿ ಆರ್ಸಿಬಿ ನಾಯಕನಾಗಿದ್ದರೆ (RCB captain MS Dhoni),
ಅವರು ಮೂರು ಬಾರಿ ಐಪಿಎಲ್ ಕಪ್ (IPL) ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರು. ಧೋನಿ ನಾಯಕತ್ವವು ತಂಡಕ್ಕೆ ಬದಲಾವಣೆ ತರುತ್ತಿತ್ತು ಎಂಬುದು ಹೇಳಿದ್ದಾರೆ.
ಐಪಿಎಲ್ ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂದ್ರೆ ಅದು ಆರ್ಸಿಬಿ. ಆರ್ಸಿಬಿ ಅಭಿಮಾನಿಗಳು ಪ್ರತಿ ಬಾರಿಯೂ ಕಪ್
ನಮ್ದೆ ಅನ್ನೋ ಟ್ಯಾಗ್ ಲೈನ್ ಮೂಲಕ ಅಭಿಯಾನ ಮಾಡ್ತಾ ಆರ್ಸಿಬಿ ತಂಡದ ಗೆಲುವಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಬಹುಷಃ ಆರ್ಸಿಬಿ ತಂಡಕ್ಕೆ ಇರುವಷ್ಟು ಅಭಿಮಾನಿಗಳು ಯಾವ ತಂಡಕ್ಕು ಇಲ್ಲ, ಆರ್ಸಿಬಿಯ ಗೆಲುವಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/private-airlines-are-closing/
RCB ಗೆ ಅಷ್ಟೊಂದು ಸಪೋರ್ಟ್ ಇದೆ. ಅಷ್ಟೇ ಅಲ್ಲದೆ ವಿಶ್ವದ ಅಗ್ರ ಬ್ಯಾಟ್ಸ್ಮ್ಯಾನ್ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ RCB ಟೀಂ ನಲ್ಲಿ ಇದ್ದಾರೆ.
ಆದರೂ ಇಲ್ಲಿಯವರೆಗೂ ಕಪ್ ಗೆಲ್ಲೂಕೆ ಸಾಧ್ಯವಾಗಿಲ್ಲದೇ ಇರೋದು ದುರದೃಷ್ಟಕರ ಎಂದಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಆರ್ಸಿಬಿ 2008 ರಿಂದ ಐಪಿಎಲ್ನ ಭಾಗವಾಗಿದ್ದರೂ, ಚಾಂಪಿಯನ್ಶಿಪ್ (Championship) ಪಡೆಯಲು ವಿಫಲವಾಗಿದೆ ಎಂದು ಅವರು ಗಮನಸೆಳೆದಿದ್ದಾರೆ.
RCB ತಂಡವು 2009 ರಲ್ಲಿ ಡೆಕ್ಕನ್ ಚಾರ್ಜಸ್, 2011 ರಲ್ಲಿ CSK ಮತ್ತು 2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ನಿಂದ (Sunrisers Hyderabad) ಸೋಲಿಸಲ್ಪಟ್ಟು ಕಪ್
ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು. ಒಂದು ವೇಳೆ ಆರ್ಸಿಬಿಗೆ ಧೋನಿ ನಾಯಕನಾಗಿದ್ದರೆ, ಅವರು ಮೂರು ಬಾರಿ ಕಪ್ ಗೆಲ್ಲುವಲ್ಲಿ ವಿಜಯಶಾಲಿಯಾಗುತ್ತಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಸ್ತುತನಡೆಯುತ್ತಿರುವ 2023 ಐಪಿಎಲ್ ಟೂರ್ನಿಯಲ್ಲಿ ಇವರೆಗಿನ 10 ಪಂದ್ಯಗಳಲ್ಲಿಒಟ್ಟು 5ರಲ್ಲಿ ಮಾತ್ರಆರ್ಸಿಬಿ ತಂಡವು ಗೆಲುವು ಸಾಧಿಸಿ,
10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಮುಂಬೈ ತಂಡವು 6ನೇ ಸ್ಥಾನದಲ್ಲಿದ್ದರೆ ಪಂಬಾಜ್ ಕಿಂಗ್ಸ್ ತಂಡ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.
ಪ್ಲೇ ಆಫ್ ಪ್ರವೇಶಿಸಬೇಕಾದರೆ ಆರ್ಸಿಬಿ. ಕನಿಷ್ಠ 4ರಲ್ಲಿ 3 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ. ಆದರೆ rcb ತಂಡವು ಬ್ಯಾಟಿಂಗ್ ಪಡೆಯ ಸಮಸ್ಯೆಯನ್ನು ಎದುರಿಸುತ್ತಿದೆ.
ಗುಜರಾತ್ ಟೈಟಾನ್ಸ್ (Gujarat Titans) ತಂಡವು ಈಗಾಗಲೇ ಆಡಿರುವ 11ಪಂದ್ಯಗಳಲ್ಲಿ 8 ಪಂದ್ಯ ಗೆದ್ದು ಬಹುತೇಕ ಪ್ಲೆ ಆಫ್ ಸ್ಥಾನ ವನ್ನು ಖಚಿತಪಡಿಸಿಕೊಂಡಿದೆ.
ಮತ್ತು MS ಧೋನಿ ನಾಯಕತ್ವದ ಸಿಎಸ್ಕೆ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ.
ಇದನ್ನೂ ಓದಿ : https://vijayatimes.com/2023-sslc-exam-result-declared/
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್ನಿಂದ ಕೂಡಿರುತ್ತದೆ.
ಏಕೆಂದರೆ ms ಧೋನಿ ಮತ್ತು ವಿರಾಟ್ ಕೊಹ್ಲಿಗೆ ಅನೇಕ ಜನ ಅಭಿಮಾನಿಗಳು ಇದ್ದಾರೆ.ವಿರಾಟ್ ಕೊಹ್ಲಿ ಅಭಿಮಾನಿಗಳು ಆರ್ಸಿಬಿಗೆ ಹಾಗೂ ಎಂ.ಎಸ್. ಧೋನಿ ಅಭಿಮಾನಿಗಳು ಸಿಎಸ್ಕೆಗೆ ಬೆಂಬಲ ಸೂಚಿಸುತ್ತಾರೆ.
ವಾಸಿಂ ಅಕ್ರಮ್ ಪ್ರಕಾರ, ಎಂಎಸ್ ಧೋನಿ ಆರ್ಸಿಬಿ ನಾಯಕನಾಗಿದ್ದರೆ, ಅವರು ಮೂರು ಬಾರಿ ಐಪಿಎಲ್ ಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರು. ಧೋನಿ ನಾಯಕತ್ವವು ತಂಡಕ್ಕೆ ಬದಲಾವಣೆ ತರುತ್ತಿತ್ತು ಎಂಬುದು ಅವರ ನಂಬಿಕೆ.
- ರಶ್ಮಿತಾ ಅನೀಶ್