• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನದ ಮೂರು ಷರತ್ತುಗಳು :ಐಸಿಸಿ ಮುಂದೆ ಪಿಸಿಬಿಯ ಹೊಸ ಬೇಡಿಕೆಗಳು

Teju Srinivas by Teju Srinivas
in Sports, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನದ ಮೂರು ಷರತ್ತುಗಳು :ಐಸಿಸಿ ಮುಂದೆ ಪಿಸಿಬಿಯ ಹೊಸ ಬೇಡಿಕೆಗಳು
0
SHARES
17
VIEWS
Share on FacebookShare on Twitter
  • ಐಸಿಸಿ ಸಭೆ ಬಳಿಕ ಬದಲಾಗಿದ ಪಾಕ್‌ (Pakistan’s conditions to play against India) ನಿಲುವು: ಭಾರತ ವಿರುದ್ಧ ಪಂದ್ಯಕ್ಕೆ ಷರತ್ತುಗಳು
  • ಬಾಂಗ್ಲಾದೇಶ ಪರಿಹಾರ, ಆತಿಥ್ಯ ಹಕ್ಕು ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳು ಮುಂದಿಟ್ಟು ಪಿಸಿಬಿ
  • ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಆಡಲು ಪಾಕಿಸ್ತಾನ ಮುಂದಿಟ್ಟ ಷರತ್ತುಗಳ ಕೇಳಿ ಕ್ರಿಕೆಟ್‌ ವಲಯದಲ್ಲಿ ಸಂಚಲನ

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಪಂದ್ಯವಾಡುವ (Pakistan’s conditions to play against India) ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಭಾರೀ ಗೊಂದಲ ಮತ್ತು ರಾಜಕೀಯ ಒತ್ತಡದ ನಡುವೆ ಸಿಲುಕಿದೆ.

ಭಾರತ–ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವ ಮೂಲಕ ಸುದ್ದಿಯಾಗಿದ್ದ ಪಾಕಿಸ್ತಾನ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ಮುಂದೆ ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಬೆಳವಣಿಗೆ ಟಿ20 ವಿಶ್ವಕಪ್‌ ಟೂರ್ನಿಯ ಭವಿಷ್ಯ ಮತ್ತು ಕ್ರಿಕೆಟ್‌ (Pakistan’s conditions to play against India) ರಾಜಕೀಯದ ಮೇಲೆ ದೊಡ್ಡ ಪ್ರಭಾವ ಬೀರುವ ಸಾಧ್ಯತೆ ಇದೆ.

ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೋದಲ್ಲಿ ಭಾರತ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದ್ದ ಹಿನ್ನೆಲೆಯಲ್ಲಿ ಐಸಿಸಿ ಪಿಸಿಬಿಗೆ ಕಠಿಣ ಎಚ್ಚರಿಕೆ ನೀಡಿತ್ತು.

ಪಂದ್ಯವನ್ನು ಆಡದಿದ್ದರೆ ಸಂಭಾವ್ಯ ಶಿಸ್ತು ಕ್ರಮ, ಹಣಕಾಸಿನ ದಂಡ ಮತ್ತು ಭವಿಷ್ಯದ ಟೂರ್ನಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಐಸಿಸಿ ಸ್ಪಷ್ಟಪಡಿಸಿತ್ತು.

ಈ ಎಚ್ಚರಿಕೆಯ ನಂತರ ಪಾಕಿಸ್ತಾನ ಪಂದ್ಯವಾಡಲು ತಾತ್ವಿಕ ಒಪ್ಪಿಗೆ ಸೂಚಿಸಿದರೂ, ಕೆಲವು ಷರತ್ತುಗಳನ್ನು ಪೂರೈಸಬೇಕು ಎಂಬ ನಿಲುವು ತೆಗೆದುಕೊಂಡಿದೆ.

ಈ ನಡುವೆ ಭಾನುವಾರ ಐಸಿಸಿಯ ಉಪಾಧ್ಯಕ್ಷ ಇಮ್ರಾನ್ ಖವಾಜಾ ಲಾಹೋರ್‌ಗೆ ಭೇಟಿ ನೀಡಿದ್ದು ಮಹತ್ವ ಪಡೆದುಕೊಂಡಿದೆ.

ಈ ಭೇಟಿಯ ವೇಳೆ ಪಿಸಿಬಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ (BCB) ಮುಖ್ಯಸ್ಥ ಅಮಿನುಲ್ ಇಸ್ಲಾಂ (Aminul Islam) ಅವರನ್ನು ಸಹ ಸಭೆಗೆ ಆಹ್ವಾನಿಸಿತ್ತು. ಈ ಸಭೆಯಲ್ಲಿ ಪಾಕಿಸ್ತಾನ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.

ಮೊದಲನೆಯದಾಗಿ, ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟರೂ ಅವರಿಗೆ ಭಾಗವಹಿಸುವಿಕೆಯ ಶುಲ್ಕವನ್ನು ನೀಡಬೇಕು ಎಂಬುದು.

ಎರಡನೆಯದಾಗಿ, ಬಾಂಗ್ಲಾದೇಶಕ್ಕೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಪಿಸಿಬಿ ಒತ್ತಾಯಿಸಿದೆ. ಮೂರನೆಯದಾಗಿ, ಭವಿಷ್ಯದ ಐಸಿಸಿ ಟೂರ್ನಿಗಳಲ್ಲಿ ಬಾಂಗ್ಲಾದೇಶಕ್ಕೆ ಆತಿಥ್ಯ ವಹಿಸುವ ಅವಕಾಶವನ್ನು ಒದಗಿಸಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ ಮುಂದಿಟ್ಟಿದೆ.

ಭಾರತದ ವಿರುದ್ಧ ಪಂದ್ಯವಾಡುವ ವಿಚಾರದಲ್ಲಿ ಪಿಸಿಬಿಯೊಳಗೇ ಭಿನ್ನಾಭಿಪ್ರಾಯಗಳು ಕಂಡುಬರುತ್ತಿವೆ. ಕೆಲ ಪಿಸಿಬಿ ಅಧಿಕಾರಿಗಳು ಪಂದ್ಯವಾಡಲು ಸಮ್ಮತ ವ್ಯಕ್ತಪಡಿಸಿದ್ದರೂ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾರೆ ಎನ್ನಲಾಗಿದೆ.

ಅಧಿಕೃತವಾಗಿ ಪಿಸಿಬಿ ಇನ್ನೂ ಭಾರತದ ವಿರುದ್ಧ ಪಂದ್ಯವಾಡಲು ಒಪ್ಪಿಗೆ ನೀಡಿಲ್ಲ. ಈ ಮಹತ್ವದ ನಿರ್ಧಾರಕ್ಕೆ ಮುನ್ನ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲು ನಖ್ವಿ ನಿರ್ಧರಿಸಿದ್ದಾರೆ.

ಸೋಮವಾರ ಅವರು ಪ್ರಧಾನಿ ಅವರನ್ನು ಭೇಟಿ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನೊಂದು ಗಮನಾರ್ಹ ವಿಷಯವೆಂದರೆ, ಈ ಹಿಂದೆ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತ ವಿರುದ್ಧ ಪಾಕಿಸ್ತಾನ ತಂಡ ಪಂದ್ಯವಾಡುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಪಿಸಿಬಿಯಿಂದ ಐಸಿಸಿಗೆ ಪಂದ್ಯ ಬಹಿಷ್ಕಾರದ ಕುರಿತು ಯಾವುದೇ ಅಧಿಕೃತ ಪತ್ರ ಸಲ್ಲಿಕೆಯಾಗಿರಲಿಲ್ಲ.

ಇದರಿಂದಾಗಿ ಐಸಿಸಿ ಮಟ್ಟದಲ್ಲಿ ಗೊಂದಲ ಉಂಟಾಗಿದೆ. ಕ್ರಿಕೆಟ್‌ ಮಾತ್ರವಲ್ಲದೆ ರಾಜಕೀಯ, ರಾಜತಾಂತ್ರಿಕ ಒತ್ತಡಗಳು ಈ ನಿರ್ಧಾರದ ಹಿಂದೆ ಕೆಲಸ ಮಾಡುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಭಾರತ–ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಸಾವಿರಾರು ಕೋಟಿ ರೂಪಾಯಿ ಆದಾಯ ನಷ್ಟವಾಗುವ ಸಾಧ್ಯತೆ ಇದೆ ಎಂಬ ಅಂದಾಜುಗಳು ಕೂಡ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಲ್ಲಿವೆ.

ಇದನ್ನು ಓದಿ : https://vijayatimes.com/hotel-owners-new-rules/

Tags: CricketICCindaPakistanworldcup

Related News

CRZ ನಿಯಮ ಉಲ್ಲಂಘನೆ: ಗೋಕರ್ಣದಲ್ಲಿ ಅನಧಿಕೃತ ರೆಸಾರ್ಟ್ ತೆರವು ಪ್ರಕ್ರಿಯೆ ಆರಂಭ
ಪ್ರಮುಖ ಸುದ್ದಿ

CRZ ನಿಯಮ ಉಲ್ಲಂಘನೆ: ಗೋಕರ್ಣದಲ್ಲಿ ಅನಧಿಕೃತ ರೆಸಾರ್ಟ್ ತೆರವು ಪ್ರಕ್ರಿಯೆ ಆರಂಭ

March 9, 2026
ಈಗ ಖರೀದಿ–ನಂತರ ಪಾವತಿ: ಯುವಜನರಲ್ಲಿ ಹೆಚ್ಚುತ್ತಿರುವ BNPL ಕ್ರೇಜ್
ದೇಶ-ವಿದೇಶ

ಈಗ ಖರೀದಿ–ನಂತರ ಪಾವತಿ: ಯುವಜನರಲ್ಲಿ ಹೆಚ್ಚುತ್ತಿರುವ BNPL ಕ್ರೇಜ್

March 9, 2026
ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಲಿ ಮೊಜ್ತಬಾ ಆಯ್ಕೆ: “ಅನುಮೋದನೆ ಇಲ್ಲದ ನಾಯಕ ಉಳಿಯಲ್ಲ” ಎಂದು ಟ್ರಂಪ್ ಎಚ್ಚರಿಕೆ
ದೇಶ-ವಿದೇಶ

ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಲಿ ಮೊಜ್ತಬಾ ಆಯ್ಕೆ: “ಅನುಮೋದನೆ ಇಲ್ಲದ ನಾಯಕ ಉಳಿಯಲ್ಲ” ಎಂದು ಟ್ರಂಪ್ ಎಚ್ಚರಿಕೆ

March 9, 2026
ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ
ಪ್ರಮುಖ ಸುದ್ದಿ

ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ

March 9, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.