ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ದೃಢಪಟ್ಟ ಬೆನ್ನಲ್ಲೇ, ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಹಾಗೂ ರಕ್ಷಣಾ ಸಚಿವ ಪರ್ವೆಜ್ ಖಟ್ಟಕ್ ಅವರಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ.
ನನಗೆ ಕೋವಿಡ್-19 ದೃಢಪಟ್ಟಿದೆ. ಎಲ್ಲಾ ಕೋವಿಡ್ ಸೋಂಕಿತರಿಗೆ ಅಲ್ಲಾ ಕರುಣೆ ತೋರಲಿ. ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದು ವಾರದ ನಂತರ ಎರಡನೇ ಡೋಸ್ ಪಡೆದಾಗ ಪ್ರತಿಕಾಯಗಳು ಬೆಳವಣಿಗೆ ಹೊಂದಲು ಶುರುವಾಯಿತು. ಎಲ್ಲರೂ ಎಚ್ಚರದಿಂದಿರಿʼ ಎಂದು ಪಾಕಿಸ್ತಾನ ಅಧ್ಯಕ್ಷ ಆರಿಫ್ (71) ಟ್ವೀಟ್ ಮಾಡಿದ್ದಾರೆ.
ಆದರೆ ಪಾಕಿಸ್ತಾನದ ಪ್ರಥಮ ಮಹಿಳೆ ಸಮೀನಾ ಅಲ್ವಿ ಅವರಿಗೆ ಕೋವಿಡ್ ನೆಗೆಟಿವ್ ಬಂದಿದ್ದು, ಕ್ವಾರಂಟೈನ್ ಆಗಿದ್ದಾರೆ. ಅಧ್ಯಕ್ಷರಿಗೆ ಶೀತ ಕಾಣಿಸಿಕೊಂಡಿದ್ದರೂ, ಆರೋಗ್ಯವಾಗಿದ್ದಾರೆʼ ಎಂದು ಸಮೀನಾ ತಿಳಿಸಿದ್ದಾರೆ.
ಸಿಂಧ್ ಗವರ್ನರ್ ಇರ್ಮಾನ್ ಇಸ್ಮಾಯಿಲ್ ಟ್ವೀಟ್ ಮಾಡಿ, ರಕ್ಷಣಾ ಸಚಿವ ಪರ್ವೆಜ್ ಖಟ್ಟರ್ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಶೀಘ್ರವೇ ಗುಣಮುಖರಾಗಲಿʼ ಎಂದು ಹೇಳಿದ್ದಾರೆ. ಇತ್ತೀಚೆಗೆ ಕೋವಿಡ್ ಲಸಿಕೆ ಪಡೆದಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ದೃಢಪಟ್ಟಿತ್ತು.