ತಲಕಾಡು, ಡಿ. 16: ಐತಿಹಾಸಿಕ ಪಂಚಲಿಂಗ ದರ್ಶನ ಮಹೋತ್ಸವವು ನಡೆಯುತ್ತಿದ್ದು, ತಲಕಾಡಿಗೆ ಇಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದ್ದಾರೆ. ರಾಜ ವಂಶಸ್ಥ ಯದುವೀರ್, ತ್ರಿಷಿಕಾ ಜೋಡಿ, ಇದೇ ಮೊದಲನೇ ಬಾರಿಗೆ ಪಂಚಲಿಂಗ ದರ್ಶನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯನಾಥೇಶ್ವರ ಸನ್ನಿಧಿಯಲ್ಲಿ ಯದುವೀರ್ ಹಾಗೂ ಪತ್ನಿ ತ್ರಿಶಿಕಾಕುಮಾರಿ ಜೋಡಿಗೆ ಪೂರ್ಣಕುಂಭದ ಮೂಲಕ ಸ್ವಾಹತಿಸಿದರು. ನಂತರ ಯದುವೀರ್ ದಂಪತಿ, ಪ್ರಧಾನ ದೇಗುಲ ವೈದ್ಯನಾಥೇಶ್ವರನಿಗೆ ಪೂಜೆ ಸಲ್ಲಿಸಿದರು.
7ವರ್ಷಗಳ ಬಳಿಕ ನಡೆಯುತ್ತಿರುವ ಪಂಚಲಿಂಗ ದರ್ಶನ ಮಹೋತ್ಸವವು ಆರನೇ ದಿನಕ್ಕೆ ಕಾಲಿಟ್ಟಿದೆ. ಮಧ್ಯಾಹ್ನ ಮೂರರ ನಂತರ ಪಂಚಲಿಂಗ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆಯಾದ್ದರಿಂದ ಯದುವೀರ್ ದಂಪತಿ, ಮುಂಜಾನೆಯೇ ಐದು ದೇವರಿಗೂ ಪೂಜೆ ಸಲ್ಲಿಸಿದರು.