Mumbai : ಮೋದಿಜೀ ಅವರು ವಂಶಾಡಳಿತವನ್ನು(Pankaja Munde statement goes viral) ಕೊನೆಗೊಳಿಸಬೇಕೆಂದು ಬಯಸುತ್ತಿದ್ದಾರೆ.
ಆದರೆ ನಾನು ವಂಶ ಪಾರಂಪರ್ಯ ರಾಜಕೀಯದ ಪ್ರತೀಕ, ಪ್ರಧಾನಿ ಮೋದಿಯವರಿಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಸಚಿವೆ ಪಂಕಜಾ ಮುಂಡೆಯವರು(Pankaja Munde statement goes viral) ಮುಂಬೈಯಲ್ಲಿ ನಡೆದ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

ಆದರೆ ಅವರು ನೀಡಿರುವ ಹೇಳಿಕೆ ಈಗ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ಭಾಷಣದ ವೀಡಿಯೋ ವೈರಲ್(Viral) ಆಗುತ್ತಿದ್ದಂತೆ ಪಂಕಜಾ ಮುಂಡೆ ಮತ್ತು ಹಲವು ಬಿಜೆಪಿ ನಾಯಕರು(BJP Leaders) ಮಾಧ್ಯಮಗಳ ವಿರುದ್ದವೇ ಆರೋಪಿಸುತ್ತಿದ್ದಾರೆ. ಈ ಬಗ್ಗೆ ಟ್ವೀಟ್(Tweet) ಮಾಡಿರುವ ಪಂಕಜಾ ಮುಂಡೆ,
ಇದನ್ನೂ ಓದಿ : https://vijayatimes.com/indian-rupee-rises-against-dollar/
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಕಾರ್ಯಕ್ರಮದಂದು ನಾನು ಮಾಡಿರುವ ಭಾಷಣದಲ್ಲಿ ನಾನು ಯಾವುದೇ ಸಮಯದಲ್ಲಿ ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ ಹಾಗೂ ಇದಕ್ಕೆ ಮೋದಿಯವರ ಬಾಲ್ಯದ ದಿನಗಳನ್ನು ಉದಾರಹಣೆಯಾಗಿ ಮಕ್ಕಳಿಗೆ ಹೇಳಿದ್ದೇನೆ.

ಜಾತಿ ಹಾಗೂ ಹಣಬಲವನ್ನು ಬಳಸದೆ ಉತ್ತಮ ರೀತಿಯಿಂದಾಗಿ ರಾಜಕೀಯ ಸ್ಥಾನವನ್ನು ಪಡೆಯಿರಿ ಹಾಗೂ ಜನರಿಗೆ ಉತ್ತಮ ಸೌಲಭ್ಯಗಳನ್ನು ದೊರಕಿಸಿ ಕೊಡಿ ಎಂದು ಮನವಿ ಕೂಡ ಮಾಡಿದ್ದೇನೆ.
ಆ ಸಂದರ್ಭದಲ್ಲಿ ಮೋದಿಜೀಯವರು ವಂಶಾಡಳಿತವನ್ನು ಕೊನೆಗಾಣಿಸಬೇಕೆಂದು ಬಯಸುತ್ತಿದ್ದಾರೆ. ಆದರೆ ನಾನು ವಂಶಾಡಳಿತ ರಾಜಕೀಯದ ಪ್ರತೀಕ.
ಇದನ್ನೂ ಓದಿ : https://vijayatimes.com/rice-salt-mixed-food-for-students/
ಆದರೆ ನಿಮ್ಮ (ಜನರ) ಮನಸ್ಸಲ್ಲಿ ನಾನಿರುವವರೆಗೆ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಗೂ ಕೂಡ ಹೇಳಿದ್ದಾರೆ.
ಆದರೆ ಆ ಭಾಷಣದ ಆ ಒಂದು ಹೇಳಿಕೆಯ ತುಣುಕು ಮಾತ್ರ ವೈರಲ್ ಆಗುತ್ತಿದೆ, ಜನರು ಭಾಷಣದ ಸಂಪೂರ್ಣ ವೀಡಿಯೋವನ್ನು ವೀಕ್ಷಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
- ರಶ್ಮಿತಾ ಅನೀಶ್