ಹುಬ್ಬಳ್ಳಿ ಸೆ 3 : ಒಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗಿ ಜನ ಚಿಂತೆಗೀಡಾಗಿದ್ದರೆ, ಇತ್ತ ಹುಬ್ಬಳ್ಳಿಯಲ್ಲಿ ಸಾಮಾನ್ಯ ಜನರಿಗೆ ಕೈಗಟುವ ದರದಲ್ಲಿ ಬಟ್ಟೆ ಸಿಗುತ್ತಿದ್ದು, ಇದನ್ನು ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ.
ಶನಿವಾರ ಬಂತೆಂದರೆ ಸಾಕು ಹುಬ್ಬಳಿ ನಗರದ ಹೃದಯ ಭಾಗವಾಗಿರುವ ದುರ್ಗದ ಬಯಲು ಮರಾಠ ಗಲ್ಲಿಯ ಬಳಿ ಸಾಕಷ್ಟು ಜನಜಂಗುಳಿ ಇರುತ್ತದೆ ಇದಕ್ಕೆ ಕಾರಣವೇ ಇಲ್ಲಿ ಕಡಿಮೆ ಬೆಲೆಗೆ ಸಿಗುವ ಬಟ್ಟೆಗಳು. ಈ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ 5 ರೂ ಗಳಿಗೆ ಪ್ಯಾಂಟ್ 10ರೂಗೆ ಚೂಡಿದಾರ ಹಾಗೂ 50ರೂಗೆ ಸೀರೆ ಸಿಗುತ್ತದೆ.
ಇಷ್ಟು ಕಡಿಮೆ ಬೆಲೆಗೆ ಹೇಗೆ ಮಾರಾಟ ?
ಬಡವರಿಗೆ ಅನೂಕೂಲವಾಗುವ ದೃಷ್ಟಿಯಿಂದ ಮಾರಟಗಾರರು ನಗರದಾದ್ಯಂತ ಸುತ್ತಿ ಪಾತ್ರೆಗಳನ್ನು ನೀಡಿ, ಪಾತ್ರೆ ಖರೀದಿಸುವ ಗ್ರಾಹಕರಿಂದ ಉತ್ತಮವಾದ ಹಳೆಯ ಬಟ್ಟೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಟ್ಟೆಗಳನ್ನು ಶನಿವಾರ ಮಾರುಕಟ್ಟೆಯಲ್ಲಿಟ್ಟು ಮಾರಟ ಮಾಡುತ್ತಾರೆ.
ಈ ಬಟ್ಟೆಗಳನ್ನು ಸಾಕಷ್ಟು ಮಂದಿ ಖರೀದಿಸಿ ದಿನ ಬಳಕೆಗಾಗಿ ಉಪಯೋಗಿಸುತ್ತಾರೆ ಎಂದು ವ್ಯಾಪರಸ್ಥರು ತಿಳಿಸಿದ್ದಾರೆ.