MLA Sunil Kumar should apologize to the people of the country regarding the statue of Parashurama: Congress demands
Karkala: ಮಹಾರಾಷ್ಟ್ರದಲ್ಲಿ (Maharashtra) ಶಿವಾಜಿ ಪ್ರತಿಮೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅಲ್ಲಿಯ ಜನತೆಯ ಕ್ಷಮೆ ಕೋರಿದಂತೆ ಪರಶುರಾಮನ ಪ್ರತಿಮೆ ವಿಚಾರವಾಗಿ ಶಾಸಕ ಸುನಿಲ್ ಕುಮಾರ (Sunil Kumar) ನಾಡಿನ ಜನತೆಯ ಕ್ಷಮೆಯಾಚಿಸಲಿ ಎಂದು ಕಾರ್ಕಳ ಕಾಂಗ್ರೆಸ್ (Congress) ಆಗ್ರಹಿಸಿದೆ.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣಾ ಪೂರ್ವದಲ್ಲಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ತುಂಡಾಗಿ ಬಿದ್ದ ಪ್ರಕರಣವು (Maharashtra Shivaji Statue Collapse) ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣವನ್ನೇ ಹೋಲುತ್ತದೆ. ಇಲ್ಲಿಯೂ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಕಾಮಗಾರಿ ಪೂರ್ಣವಾಗುವ ಮೊದಲೇ ತುರಾತುರಿಯಲ್ಲಿ ಉದ್ಘಾನೆಗೊಂಡಿದೆ.
ಅಲ್ಲಿ ಪ್ರಕರಣವನ್ನು ತನಿಖೆಗೆ ಒಪ್ಪಿಸಿ ಒಬ್ಬನ ಬಂಧನವಾಗಿದ್ದರೆ ಇಲ್ಲಿಯೂ ಸಿಐಡಿ (CID) ತನಿಖೆಗೆ ಆದೇಶ ನೀಡಲಾಗಿದ್ದು ಒಬ್ಬ ಅಧಿಕಾರಿಯ ಅಮಾನತು ಆಗಿದೆ. ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರಧಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ. ಆದರೆ ವಿಪರ್ಯಾಸವೆಂದರೆ ಇಲ್ಲಿ ಶಾಸಕ ಸುನಿಲ್ ಕುಮಾರ್ ನಾನು ಮಾಡಿದ್ದೇ ಸರಿ ಎಂದು ಸಮರ್ಥನೆ ನೀಡುತ್ತಾ ಪ್ರಶ್ನಿಸಿದವರನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ.
ಶಾಸಕರಿಗೆ ಪ್ರಧಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೆಸ್ (Congress) ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ. ಶಾಸಕರ ಒಂದು ತಪ್ಪಿನಿಂದ ಕ್ಷೇತ್ರದ ಬಹಳಷ್ಟು ಜನ ಅನುಭನಿಸುವಂತಾಯಿತು. ಪಕ್ಷದ ಪದಾಧಿಕಾರಿಗಳಿಗೆ ಇಷ್ಟವಿಲ್ಲದಿದ್ದರೂ ಸಮರ್ಥಿಸುವುದು ಅನಿವಾರ್ಯವಾಯಿತು. ಪ್ರತಿಭಟನೆ, ಸತ್ಯಾಗ್ರಹಗಳು ನಡೆದು ಅಮಾಯಕರ ಮೇಲೆ ಅನಾವಶ್ಯಕ ಪೋಲೀಸ್ ಕೇಸುಗಳು ದಾಖಲಾದವು.
ಅಧಿಕಾರಿಗಳಿಗೂ ತನಿಖೆಯ ಕಾರಣಗಳಿಂದ ಒತ್ತಡಗಳಾದವು. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅರೋಪ ಪ್ರತ್ಯಾರೋಪಗಳು ನಡೆದು ದೈಹಿಕ ಹಲ್ಲೆಗೂ ಕಾರಣವಾಯಿತು. ಅಂದೇ ಈ ಬಗ್ಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದರೆ ಎಲ್ಲಾ ರಾದ್ದಾಂತಗಳನ್ನು ತಡೆಯಬಹುದಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇನ್ನೂ ಕಾಲ ಮಿಂಚಿಲ್ಲ ಪ್ರಧಾನಿ ಮೋದಿ (Narendra Modi) ಯವರನ್ನು ಮಾದರಿಯಾಗಿಸಿ ಇವರೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸುವಂತೆ ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Parashurama Theme Park Controversy Kannada News
Karkala: Just as Prime Minister Modi has apologized to the people of Maharashtra regarding the Shivaji statue collapse case, Karkala Congress has demanded that MLA Sunil Kumar should apologize to the people of the state regarding the statue of Parasurama.
The Maharashtra Shivaji Statue Collapse, which was inaugurated before the Lok Sabha elections in Maharashtra, is similar to the case of the bronze statue of Parashurama in Karkala. Here too, for the purpose of assembly elections, it was inaugurated in haste before the work was completed.
There the case has been handed over for investigation and one has been arrested, here also CID investigation has been ordered and one officer has been suspended. The Prime Minister has confessed and apologized to Marathas for inaugurating the statue of Shivaji. But the irony is that MLA Sunil Kumar is targeting the questioners by asserting that what I have done is right.
Block Congress (Congress) spokesperson Shubh Darao has demanded that if the MLAs have little respect for the Prime Minister, they should also apologize. A lot of people in the constituency were made to feel because of one mistake of MLA. Even though the party office-bearers did not like it, it became necessary to justify it. Protests, satyagrahas took place and unnecessary police cases were registered against innocent people.
The officers also came under pressure due to the investigation. Accusations and recriminations took place on social media and led to physical assault. He expressed his displeasure that if Ande had clarified this and accepted all the incidents could have been prevented, he said in a press release that he would like Prime Minister Narendra Modi to make an example and apologize to the people of the country.