Colourful curtain for Paris Olympics: India ends Olympics campaign
Paris Olympics 2024 Closing Ceremony India
The Paris Olympics, which started from July 26, had a colourful opening yesterday (July 11), and more than 10,000 contestants fought for the word in the 32 sports of this Olympics held amidst a lot of controversies.
Paris Olympics 2024: ಜುಲೈ 26 ರಿಂದ ಆರಂಭವಾದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಿನ್ನೆ (ಆ.11) ರಂದು ವರ್ಣರಂಜಿತ ತೆರೆಯೆಳೆಯಲಾಗಿದ್ದು, ಸಾಕಷ್ಟು ವಿವಾದಗಳ ನಡುವೆ ನಡೆದ ಈ ಬಾರಿಯ ಒಲಿಂಪಿಕ್ಸ್ನ 32 ಕ್ರೀಡೆಗಳಲ್ಲಿ 10 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಪದಕ್ಕಾಗಿ ಸೆಣಸಾಟ ನಡೆಸಿದ್ದರು.
ಭಾರತದ ಕಡೆಯಿಂದ, 22 ವರ್ಷದ ಶೂಟರ್ ಮನು ಭಾಕರ್ ಮತ್ತು ಹಾಕಿ ದಂತಕಥೆ ಪಿಆರ್ ಶ್ರೀಜೇಶ್ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಗಳಾಗಿದ್ದರು.
ಭಾರತದಿಂದಲೂ ಒಟ್ಟು 117 ಕ್ರೀಡಾಪಟುಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. ಆದರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. 5ಕಂಚು ಹಾಗೂ 1ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳು ಭಾರತದ ಖಾತೆಗೆ ಬಂದಿವೆ. ಆದರೆ ಈ ಬಾರಿ ಭಾರತಕ್ಕೆ ಚಿನ್ನದ ಪದಕ ಸಿಗಲಿಲ್ಲ.
ಪ್ಯಾರಿಸ್ ಒಲಿಂಪಿಕ್ಸ್ನ ಪದಕ ಪಟ್ಟಿಯಲ್ಲಿ ಭಾರತ 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಒಂದೇ ಒಂದು ಚಿನ್ನದ ಪದಕ ಗೆದ್ದಿರುವ ಪಾಕಿಸ್ತಾನ ಪದಕ ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೇರಿದೆ.
ಇನ್ನು ವಿನೇಶ್ ಫೋಗಟ್ ಅವರು 50 ಕೆ.ಜಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ಗೆ ಪ್ರವೇಶಿಸಿದರೂ ಅಂತಿಮ ಸುತ್ತಿನ ವೇಳೆ ಹೆಚ್ಚುವರಿ ತೂಕದ ಕಾರಣ ಅನರ್ಹಗೊಂಡಿದ್ದಾರೆ. ಇದಾಗ್ಯೂ ಸೆಮಿಫೈನಲ್ವರೆಗೂ ಅರ್ಹತೆಯೊಂದಿಗೆ ಸ್ಪರ್ಧಿಸಿರುವ ಕಾರಣ ಬೆಳ್ಳಿ ಪದಕ ನೀಡಬೇಕೆಂದು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಹೆಚ್ಚು ಪದಕಗಳನ್ನು ಗೆದ್ದಿದ್ದು, 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚು ಸೇರಿದಂತೆ ಒಟ್ಟು 126 ಪದಕಗಳನ್ನು ಗೆದ್ದಿದೆ. ಅದೇ ಪಟ್ಟಿಯಲ್ಲಿ ಚೀನಾ ಎರಡನೇ ಸ್ಥಾನದಲ್ಲಿದ್ದು, 40 ಚಿನ್ನ, 27 ಬೆಳ್ಳಿ ಹಾಗೂ 24 ಕಂಚು ಸೇರಿ ಒಟ್ಟು 91 ಪದಕಗಳು ಚೀನಾ ಖಾತೆಗೆ ಬಂದಿವೆ. ನಂತರದ ಸ್ಥಾನದಲ್ಲಿ ಜಪಾನ್, ಆಸ್ಟ್ರೇಲಿಯಾ ಇದೆ.
ಈ ಬಾರಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ಭಾರತದ ಸರ್ವಶ್ರೇಷ್ಠ ಸಾಧನೆ.
ಭಾರತಕ್ಕೆ ಮೂರನೇ ಪದಕ ಒಲಿದು ಬಂದಿದ್ದು ಕೂಡ ಶೂಟಿಂಗ್ನಲ್ಲೇ ಎಂಬುದು ವಿಶೇಷ. 50 ಮೀ ರೈಫಲ್ ಶೂಟಿಂಗ್ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಸ್ವಪ್ನಿಲ್ ಕುಸಾಲೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಶೂಟಿಂಗ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಒಟ್ಟು 6 ಪದಕಗಳೊಂದಿಗೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದೆ.