Paris Olympics 2024: ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ (Badminton) ಕ್ರೀಡೆಯ ಸಿಂಗಲ್ಸ್ ವಿಭಾಗದ ಗುಂಪು ಹಂತದ ಪಂದ್ಯದಲ್ಲಿ ಭಾರತದ ಯುವಆಟಗಾರ ಲಕ್ಷ್ಯ ಸೇನ್ ಶುಭಾರಂಭ ಮಾಡಿದ್ದರೂ, ಇಡೀಗ ಆ ಗೆಲುವನ್ನು ರದ್ದು ಮಾಡಲಾಗಿದೆ.

ಭಾರತದ ಯುವಆಟಗಾರ ಲಕ್ಷ್ಯ ಸೇನ್ (Lakshya Sen) ಅವರು ತಮ್ಮ ಮೊದಲ ಪಂದ್ಯದಲ್ಲಿ ಗ್ವಾಟೆಮಾಲಾದ ಕಾರ್ಡನ್ ಕೆವಿನ್ ಅವರನ್ನು ಸೋಲಿಸಿದ್ದರು. ಈ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಲಕ್ಷ್ಯ ಸೇನ್ 21-8 ರಿಂದ ಸುಲಭವಾಗಿ ಗೆದ್ದುಕೊಂಡರೂ, ಎರಡನೇಯ ಸೆಟ್ ನಲ್ಲಿ 22-20 ರಿಂದ ಕಠಿಣ ಹೋರಾಟ ನಡೆಸಿ ಗೆದ್ದು ಬೀಗಿದ್ದರು. ಆದರೆ ಈ ಪಂದ್ಯವನ್ನು ಟೂರ್ನಿಯಿಂದ ಡಿಲೀಟ್ ಮಾಡಲಾಗಿದೆ. ಏಕೆಂದರೆ ಗಾಯದಿಂದಾಗಿ ಗ್ವಾಟೆಮಾಲಾದ ಕಾರ್ಡನ್ ಅವರು ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಕ್ರೀಡಾಕೂಟದಿಂದಲೇ ಹಿಂದೆ ಸರಿದಿದ್ದರಿದ್ದಾರೆ.
ಬಿಡಬ್ಲ್ಯೂಎಫ್ (BWF) ನಿಯಮಗಳ ಪ್ರಕಾರ, ಲಕ್ಷ್ಯ ಸೇನ್ ಮತ್ತು ಕಾರ್ಡನ್ ನಡುವಿನ ಪಂದ್ಯವನ್ನು ಡಿಲೀಟ್ ಮಾಡಲಾಗಿದೆ. ಬಿಡಬ್ಲ್ಯೂಎಫ್ ನಿಯಮದ ಪ್ರಕಾರ ಲೀಗ್ನಲ್ಲಿದ್ದ ಆಟಗಾರ ಮಧ್ಯದಲ್ಲೇ ಹಿಂದಕ್ಕೆ ಸರಿದರೆ ಆ ಆಟಗಾರ ಆಡಿದ ಮತ್ತು ಆಡಲಿರುವ ಎಲ್ಲಾ ಪಂದ್ಯಗಳನ್ನು ರದ್ದು ಮಾಡಲಾಗುತ್ತದೆ.

ಗ್ವಾಟೆಮಾಲಾದ ಕಾರ್ಡನ್ ಕೆವಿನ್ ಕ್ರೀಡಾಕೂಟದಿಂದ ಹಿಂದೆ ಸರಿದದ್ದರಿಂದ ಲಕ್ಷ್ಯ ಸೆನ್ ಈಗ ಬೆಲ್ಜಿಯಂನ ಜೋಯಲ್ ಕ್ಯಾರಾಗಿ ಮತ್ತು ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ವಿರುದ್ಧದ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಎಲ್ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಲು 2 ಪಂದ್ಯಗಳನ್ನು ಗೆಲ್ಲಬೇಕು. ಇಂಡೋನೇಷ್ಯಾದ (Indonesia) ಜೊನಾಟನ್ ಕ್ರಿಸ್ಟಿ ಅವರು 3ನೇ ಶ್ರೇಯಾಂಕ ಹೊಂದಿದ್ದು ಕಠಿಣ ಸ್ಪರ್ಧೆ ನೀಡಲಿದ್ದಾರೆ.
ಭಾರತದ ಲಕ್ಷ್ಯ ಸೆನ್ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಕಾಮನ್ವೆಲ್ತ್ ಕ್ರೀಡಾಕೂಟ (Commonwealth Games)ದಲ್ಲಿ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.