A new milestone in Paralympics: Two more Gold, Silver for India!
Paris: ಪ್ಯಾರಾಲಿಂಪಿಕ್ಸ್ (Paralympics) ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು ಭಾರತ ಸದ್ಯ 24 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 13ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಆರ್ಚರಿಯಲ್ಲಿ ಭಾರತೀಯರು ನಿರಾಸೆ ಅನುಭವಿಸಿದ್ದರು. ಆದರೆ, ಪ್ಯಾರಾಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹರ್ವಿಂದರ್ ಸಿಂಗ್ (Haravindar Singh) ಭಾರತೀಯರು ಸಂಭ್ರಮಿಸುವಂತೆ ಮಾಡಿದ್ದಾರೆ.
ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಎರಡೂ ಕ್ರೀಡಾಕೂಟಗಳ ಆರ್ಚರಿಯಲ್ಲಿ ಭಾರತಕ್ಕೆ ಇದು ಚೊಚ್ಚಲ ಚಿನ್ನದ ಪದಕವೆನಿಸಿದೆ. ಬುಧವಾರ ನಡೆದ ಪುರುಷರ ರೀಕರ್ವ್ ವೈಯಕ್ತಿಕ ಓಪನ್ ವಿಭಾಗದಲ್ಲಿ ಹರ್ವಿಂದರ್ ಸತತ 5 ಪಂದ್ಯಗಳನ್ನು ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಈ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 4ನೇ ಚಿನ್ನ. ಫೈನಲ್‌ನಲ್ಲಿ 33 ವರ್ಷದ ಹರ್ವಿಂದರ್ ಫೈನಲ್ ನಲ್ಲಿ ಪೋಲೆಂಡ್ ಲುಕಾಸ್ ಸಿಜೆಕ್ (Poland Lukasz Czek) ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಪದಕದ ಹಾದಿಯುದ್ದಕ್ಕೂ ಅಮೋಘ ಪ್ರದರ್ಶನ ತೋರಿದ ಹರ್ವಿಂದರ್, ನಿರಾಯಾಸವಾಗಿ ಚಿನ್ನ ಗೆದ್ದಿದ್ದಾರೆ.
ಪ್ಯಾರಿಸ್ 2024 ಭಾರತೀಯ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಇದುವರೆಗಿನ ಅತ್ಯಂತ ಯಶಸ್ವಿ ಕ್ರೀಡಾಕೂಟವಾಗಲಿದೆ ಎಂಬುದು ಈಗ ಖಚಿತವಾಗಿದೆ. ವಿಶೇಷವಾಗಿ ಪ್ಯಾರಾ ಅಥ್ಲೆಟಿಕ್ಸ್ ತಂಡವು ಈ ಬಾರಿ ಅದ್ಭುತ ಪ್ರದರ್ಶನ ನೀಡಿತು, ಮಧ್ಯರಾತ್ರಿಯ ನಂತರ ಕೇವಲ ಅರ್ಧ ಗಂಟೆಯ ಅಂತರದಲ್ಲಿ 4 ಪದಕಗಳನ್ನು ಗೆದ್ದುಕೊಂಡಿತು.
ಟೋಕಿಯೊ (Tokyo) 2020 ರಲ್ಲಿ ಭಾರತ 19 ಪದಕಗಳನ್ನು ಗೆದ್ದಿತ್ತು, ಅದರಲ್ಲಿ 8 ಅಥ್ಲೆಟಿಕ್ಸ್‌ನಿಂದ, 5 ಶೂಟಿಂಗ್‌ನಿಂದ (Shooting), 4 ಬ್ಯಾಡ್ಮಿಂಟನ್‌ನಿಂದ ಮತ್ತು 1-1 ಟೇಬಲ್ ಟೆನಿಸ್ ಮತ್ತು ಅರ್ಚರಿಯಿಂದ ಬಂದವು. ಈ ಬಾರಿ, ಭಾರತದ ಪದಕ ಪಟ್ಟಿಯು ಟೋಕಿಯೊದ ಅಥ್ಲೆಟಿಕ್ಸ್ ಪದಕಗಳನ್ನು ಮೀರಿಸಿದೆ ಮತ್ತು ಅತಿ ಹೆಚ್ಚಿನ ಅಥ್ಲೆಟಿಕ್ಸ್ ಪದಕಗಳನ್ನು ಗೆದ್ದಿದೆ. ಬ್ಯಾಡ್ಮಿಂಟನ್‌ನಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿ 13 ನೆಯ ಸ್ಥಾನದಲ್ಲಿದೆ.
Paris Paralympics-India Hit 24 Medal Milestone
Paris: India’s medal hunt continues at the Paralympics and India has now climbed to the 13th position in the medal table with 24 medals. Indians were disappointed in archery at the recently held Paris Olympics. However, Harvinder Singh has made Indians celebrate by winning the gold medal in the archery competition of the Paralympics.
This is India’s first gold medal in archery at both Olympics and Paralympics. In the men’s recurve individual open category held on Wednesday, Harvinder won 5 consecutive matches to kiss the gold. This is the 4th gold for India in this Games. In the final, 33-year-old Harvinder won 6-0 against Poland’s Lukasz Czek in the final. Harvinder, who showed excellent performance all the way to the medal, effortlessly won the gold.
It is now certain that Paris 2024 will be the most successful Games in Indian Paralympic history so far. The Para Athletics team in particular put up a spectacular performance this time, winning 4 medals in just half an hour after midnight.
India won 19 medals at Tokyo 2020, out of which 8 came from Athletics, 5 from Shooting, 4 from Badminton and 1 each from Table Tennis and Archery. This time, India’s medal tally surpassed Tokyo’s athletics medals tally and won the highest number of athletics medals. In Badminton too, India has performed well and is ranked 13th.