Visit Channel

ಪಾರ್ಥ ಚಟರ್ಜಿಯ ಅಕ್ರಮ ಆಸ್ತಿನ್ನೇ ಒಂದು ಜಿಲ್ಲೆ ಅಂತ ಘೋಷಣೆ ಮಾಡಬಹುದು! ; ಎಲ್ಲೆಲ್ಲಿ, ಎಷ್ಟು ಅಕ್ರಮ ಅಸ್ತಿ? ಇಲ್ಲಿದೆ ವಿವರ

Partha

ಕೋಲ್ಕತ್ತಾ : ಪಶ್ಚಿಮ ಬಂಗಾಳ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಆಪ್ತ ಮತ್ತು ಶಿಕ್ಷಣ ಸಚಿವ(Education Minister) ಪಾರ್ಥ ಚಟರ್ಜಿ(Partha Chatterjee) ನಡೆಸಿರುವ ಅಕ್ರಮಗಳ(Illegal) ಕುರಿತು ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ. ಜಾರಿ ನಿರ್ದೇಶನಾಲಯ(ED) ನಡೆಸುತ್ತಿರುವ ತನಿಖೆಯಲ್ಲಿ ಪಾರ್ಥ ಚಟರ್ಜಿಯ ಅಕ್ರಮಗಳು ಬಗೆದಷ್ಟು ಹೊರಬರುತ್ತಲೇ ಇವೆ.

Arpitha Mukharjee


ಪಾರ್ಥ ಚಟರ್ಜಿಯ ಆಪ್ತ ಸಹಾಯಕರಲ್ಲಿ ಒಬ್ಬರಾದ ಅರ್ಪಿತಾ ಮುಖರ್ಜಿಗೆ(Arpitha Mukharjee) ಸೇರಿದ ನಿವಾಸಗಳಿಂದ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡ ನಂತರ ಇಡಿ ಅವರನ್ನು ಬಂಧಿಸಿದೆ. ಇದಕ್ಕೂ ಮುನ್ನ ಮುಖರ್ಜಿ ಅವರ ಬೆಲ್‌ಘೋರಿಯಾ(Belghoria) ಪ್ರದೇಶದ ಫ್ಲ್ಯಾಟ್‌(Flat) ಮೇಲೆ ದಾಳಿ ನಡೆಸಲಾಗಿದ್ದು, ಸುಮಾರು 28 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ಬೆಳ್ಳಿ ಪತ್ತೆಯಾಗಿದೆ. ಅದೇ ರೀತಿ ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರಿಗೆ ಸೇರಿದ ಮತ್ತೊಂದು ಫ್ಲ್ಯಾಟ್‌ನಿಂದ 21 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇಂದ್ರ ಸಂಸ್ಥೆ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.

ಇಡಿ ಪರಿಶೀಲಿಸುತ್ತಿರುವ ಪಾರ್ಥ ಚಟರ್ಜಿ, ಅರ್ಪಿತಾ ಮತ್ತು ಬೇನಾಮಿಗಳ ಹೆಸರಿನಲ್ಲಿ ನೋಂದಾಯಿಸಲಾದ ಆಸ್ತಿಗಳ ಪಟ್ಟಿ ಇಲ್ಲಿದೆ ನೋಡಿ. ಬೋಲ್ಪುರದಲ್ಲಿ 7 ಮನೆಗಳು. ಶಾಂತಿನಿಕೇತನದಲ್ಲಿ 4,000 ಚದರ ಅಡಿಯ ಸಂಪೂರ್ಣ ಮಹಡಿ. ಡೈಮಂಡ್ ಸಿಟಿಯಲ್ಲಿ 4 ಫ್ಲ್ಯಾಟ್‌ಗಳು. ಬೆಲ್ಘಾರಿಯಾ ಕ್ಲಬ್ ಟೌನ್‌ನಲ್ಲಿ 2 ಫ್ಲ್ಯಾಟ್‌ಗಳು. ಬಾರಾನಗರದಲ್ಲಿ 1 ಫ್ಲ್ಯಾಟ್‌. ನ್ಯೂಟೌನ್‌ನಲ್ಲಿ 2 ಫ್ಲ್ಯಾಟ್‌ಗಳು. ಸೋನಾರ್‌ಪುರದಲ್ಲಿ 1 ಮನೆ. ಹೂಗ್ಲಿಯ ಜಂಗಿಪಾರಾದಲ್ಲಿ ಅರಮನೆಯ ಮನೆ. 45 ಕೋಟಿ ಮೌಲ್ಯದ ಜಮೀನಿನಲ್ಲಿ ಶಾಲೆ ನಿರ್ಮಾಣಕ್ಕೆ 50 ಕೋಟಿ ರೂ.

SSC Scam case

ಕೋಲ್ಕತ್ತಾದ ಬಾಘಾ ಜತಿನ್ ರೈಲು ನಿಲ್ದಾಣದ ಬಳಿ 12,240 ಚದರ ಅಡಿ ವಿಸ್ತೀರ್ಣದ ಪಿಇಟಿ ಆಸ್ಪತ್ರೆಗಾಗಿ ಭೂಮಿ. ಬರುಯಿಪುರದಲ್ಲಿ 25 ಎಕರೆ ಭೂಮಿ. ಹೂಗ್ಲಿಯ ಸಿಂಗೂರಿನಲ್ಲಿರುವ ತೋಟದ ಮನೆ. ಸುಂದರ್‌ಬನ್ಸ್‌ನಲ್ಲಿರುವ ಅತಿಥಿ ಗೃಹ. ಸಜ್ನೆಖಾಲಿ ಪಕ್ಷಿಧಾಮದ ಬಳಿಯ ರೆಸಾರ್ಟ್. ಸುಂದರಬನ್ಸ್ ದ್ವೀಪದಲ್ಲಿ ರೆಸಾರ್ಟ್. ಜಾರ್‌ಗ್ರಾಮ್‌ನಲ್ಲಿರುವ ಫಾರ್ಮ್‌ಹೌಸ್. ದಕ್ಷಿಣ 24 ಪರಗಣಗಳ ಬರುಯಿಪುರದಲ್ಲಿರುವ ಫಾರ್ಮ್‌ಹೌಸ್. ಬಂಟಲ ಲೆದರ್ ಕಾಂಪ್ಲೆಕ್ಸ್‌ನಲ್ಲಿ 10 ಅಂತಸ್ತಿನ ಕಟ್ಟಡ, ಜಾರ್ಖಂಡ್‌ನಲ್ಲಿ 24 ಎಕರೆ ಭೂಮಿ.

ಮರಳು ಗಣಿಗಾರಿಕೆಗಾಗಿ ಬುರ್ದ್ವಾನ್‌ನಲ್ಲಿ ನಡೆಯುತ್ತಿರುವ ಡಂಪರ್‌ಗಳು. ಪಾರ್ಲರ್ ಮತ್ತು ಗಾರ್ಮೆಂಟ್ ಸರಣಿಯಲ್ಲಿ ಹೂಡಿಕೆ. ಮನರಂಜನಾ ಕಂಪನಿಯ ಕಟ್ಟಡ. ಹೀಗೆ ಅಕ್ರಮಗಳ ಮೂಲಕ ಸಾಕಷ್ಟು ಆಸ್ತಿ ಮಾಡಿರುವ ಪಾರ್ಥ ಚಟರ್ಜಿಯ ಆಸ್ತಿಯನ್ನೇ ಒಂದು ಜಿಲ್ಲೆ ಮಾಡಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ವ್ಯಂಗ್ಯ ಮಾಡುತ್ತಿದ್ದಾರೆ.

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.