Thiruvanthapuram: ಕೇರಳದ ಕೋಝಿಕ್ಕೋಡ್ನಲ್ಲಿ(Parvathy Reads Quran) 4ನೇ ತರಗತಿಯ ಹಿಂದೂ ಹುಡುಗಿ ಕುರಾನ್(Quran) ಪಠಣಕ್ಕಾಗಿ ಪ್ರಥಮ ಬಹುಮಾನವನ್ನು ಗೆದ್ದಿದ್ದಾಳೆ.
ಹಿಂದೂ ಬಾಲಕಿ ಕುರಾನ್ ಪಠಣ ಮಾಡುತ್ತಿರುವ ವಿಡಿಯೋ(Video) ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral) ಆಗಿದೆ.
ಕೇರಳದ ಕೋಝಿಕ್ಕೋಡ್ನಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಪಾರ್ವತಿ ಹಿಂದೂ ಕುಟುಂಬದವರಾಗಿದ್ದರೂ,
ಕುರಾನ್ ಪಠಣ ಸ್ಪರ್ಧೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಬಹುಮಾನವನ್ನು ಗೆಲ್ಲುವ ಮೂಲಕ ಅರೇಬಿಕ್ ಭಾಷೆಯಲ್ಲಿ(Parvathy Reads Quran) ನಿರರ್ಗಳವಾಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾಳೆ.
ಕೋಝಿಕ್ಕೋಡ್ ನಲ್ಲಿ ನಡೆದ ತೊಡನ್ನೂರು ಉಪಜಿಲ್ಲಾ ಕಲಾಮೇಳದಲ್ಲಿ ಈ ಸಾಧನೆ ಮಾಡಿದ್ದಾಳೆ. ಪಾರ್ವತಿ ಚೆಮ್ಮರತೂರ್ ಎಲ್ಪಿ ಶಾಲೆಯಲ್ಲಿ ಓದುತ್ತಿದ್ದು,
ಅವಳ ಸಹೋದರಿ ಪಾರ್ವನಾ ಕೂಡಾ ಅರೇಬಿಕ್ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದಾಳೆ. ಅವಳಿ ಸಹೋದರಿಯರೂ ಅರೇಬಿಕ್ ಭಾಷೆಯಲ್ಲಿ ಪ್ರಾವಿಣ್ಯತೆ ಸಾಧಿಸಿದ್ದಾರೆ.
ಇದನ್ನೂ ಓದಿ : https://vijayatimes.com/haunted-place-of-india/
ಪಾರ್ವತಿ ಚೆಮ್ಮರತೂರ್ ಮತ್ತು ಪಾರ್ವನಾ ಚೆಮ್ಮರತೂರ್ ಇಬ್ಬರು ತಮ್ಮ ಶಾಲೆಯ ಶಿಕ್ಷಕಿಯಾದ ರುಖೈಯಾ ಅವರಿಂದ ಅರೇಬಿಕ್ ಕಲಿತಿದ್ದಾರೆ.
ಪಾರ್ವತಿಯ ತಂದೆ ನಲಿಶ್ ಬಾಬಿ ಕೋಝಿಕ್ಕೋಡ್ನಲ್ಲಿ ಐಟಿ ವೃತ್ತಿಪರರಾಗಿದ್ದರೆ, ತಾಯಿ ದಿನಾ ಪ್ರಭಾ ಇಂಗ್ಲಿಷ್ ಶಿಕ್ಷಕಿ. ಹೊಸ ಭಾಷೆ ಕಲಿಯುವುದು ಮುಖ್ಯ ಎಂದು ಅವಳ ಹೆತ್ತವರು ಭಾವಿಸಿದ್ದರು.

ಹೀಗಾಗಿ ಅರೇಬಿಕ್ ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಿದರು ಎನ್ನಲಾಗಿದೆ. ಇನ್ನು ಭಾಷೆಗೆ ಧರ್ಮವಿಲ್ಲ ಎನ್ನುವುದನ್ನು ಪಾರ್ವತಿ ಸಾಬೀತು ಮಾಡಿದ್ದಾಳೆ ಎಂದು ಶಾಲೆಯ ಮುಖ್ಯ ಶಿಕ್ಷಕರು ಹೇಳಿದ್ದಾರೆ.
ಇನ್ನು ಹಿಂದೂ ಬಾಲಕಿ ಪಾರ್ವತಿ ಚೆಮ್ಮರತೂರ್ ಕುರಾನ್ ಪಠಣದಲ್ಲಿ ಪ್ರಥಮ ಬಹುಮಾನ ಗೆದ್ದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು,
ಇದನ್ನೂ ಓದಿ : https://vijayatimes.com/nalin-about-mangaluru-blast/

ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಭಾಷೆಗೆ ಧರ್ಮವಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯರು ಅಭಿಪ್ರಾಯಪಟ್ಟಿದ್ದರೆ, “ಅರೇಬಿಕ್ ಭಾಷೆ ಕಲಿತು ಕುರಾನ್ ಗ್ರಂಥವನ್ನೇ ಯಾಕೆ ಪಠಣ ಮಾಡಬೇಕು” ಎಂದು ಕೆಲವರು ಪ್ರಶ್ನಿಸಿದ್ದಾರೆ.
- ಮಹೇಶ್.ಪಿ.ಎಚ್