Vidhansabha: ಬಿಜೆಪಿ (BJP) ಆಡಳಿತಾವಧಿಯಲ್ಲಿ ಜಾರಿಗೆ ತಂದ ವಿವಾದಿತ ಎಪಿಎಂಸಿ (Passage APMC Amendment Bill) ಕಾಯಿದೆಗೆ ಪ್ರತಿಪಕ್ಷಗಳ ಧರಣಿಯ ನಡುವೆಯೇ
ಅನುಮೋದನೆ ನೀಡಲಾಯಿತು. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivanand Patil) ಅವರು ಕರ್ನಾಟಕ ಕೃಷಿ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ
ಮಸೂದೆ 2023 ಅನ್ನು ಮಂಡಿಸಿದರು. ಆದರೆ, ಈ ತಿದ್ದುಪಡಿ ಕ್ರಮವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಧರಣಿ ನಡೆಸಿದರು. ಇದೇ ವೇಳೆ ವಿಧೇಯಕಕ್ಕೆ ಧ್ವನಿಮತದ ಅನುಮೋದನೆ ನೀಡಲಾಯಿತು.

ವಿಧೇಯಕವನ್ನು ವಿರೋಧಿಸಿದ ಬಿಜೆಪಿ ಸಂಸದ ಎಸ್.ಟಿ.ಸೋಮಶೇಖರ್ (S.T Somashekhar), ಎಪಿಎಂಸಿ ವಿಧೇಯಕವನ್ನು ಅಧ್ಯಯನ ಮಾಡಿದ್ದರೆ ಎಪಿಎಂಸಿ ಮಸೂದೆಯನ್ನು
ಹಿಂಪಡೆಯುತ್ತಿರಲಿಲ್ಲ. ರೈತರಿಗೆ ಅನುಕೂಲವಾಗಲೆಂದು ಎಪಿಎಂಸಿ ಸ್ಥಾಪಿಸಲಾಗಿದೆ. ರೈತರು ತಮ್ಮ ಬೆಳೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು.
ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದರಿಂದ ಮತ್ತೊಮ್ಮೆ ರೈತರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ
ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಅವರು (Passage APMC Amendment Bill) ಹೇಳಿದರು.
ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !
ತಿದ್ದುಪಡಿ ಕಾನೂನಿನ ಪ್ರಕಾರ ಎಪಿಎಂಸಿ ಹೊರತಾಗಿ ಬೇರೆ ಬೇರೆ ಖರೀದಿದಾರರಿಗೆ ಬೆಳೆ ಮಾರಾಟ ಮಾಡಿದ್ದಲ್ಲಿ ಆರು ತಿಂಗಳ ಅವಧಿಗೆ ಜೈಲು, ಐದು ಸಾವಿರ ದಂಡ ಹಾಕುವ ಅವಕಾಶ ಇದೆ.
ಇದರಿಂದ ರೈತರ ಶೋಷಣೆಯಾಗಲಿದೆ ಎಂದರು. ಇದಕ್ಕೆ ಬಿಜೆಪಿಯ ಆರಗ ಜ್ಞಾನೇಂದ್ರ (Araga Jnendra) ಕೂಡ ದನಿಗೂಡಿಸಿದರು. ಅಷ್ಟೇ ಅಲ್ಲದೆ ಜೆಡಿಎಸ್(JDS) ಶಾಸಕ ಎಚ್ .ಡಿ.ರೇವಣ್ಣ
(H.D Revanna) ಈ ಬಗ್ಗೆ ಮಾತನಾಡಿ, ಸರಕಾರ ದಲ್ಲಾಳಿಗಳ ಜೊತೆ ಸೇರಿ ಈ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುತ್ತಿದೆ.

ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ರೈತರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ. ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಮಾಡಬೇಕು. ಆತುರವಾಗಿ ಈ ವಿಧೇಯಕ ತರುವ ಅಗತ್ಯ ಇಲ್ಲ.
ಇದನ್ನು ಒಂದು ಬಾರಿ ರಾಜ್ಯದ ರೈತರ ಜತೆ ಚರ್ಚೆ ಮಾಡಿ ತಿದ್ದುಪಡಿ ತನ್ನಿ. ಸರ್ವಾನುಮತದಿಂದ ತಿದ್ದುಪಡಿ ವಿಧೇಯಕ ತನ್ನಿ ಎಂದು ಆಗ್ರಹಿಸಿದರು. ಆದರೆ ವಿಧೇಯಕವನ್ನು ಸರಕಾರ ಒಪ್ಪದೆ
ಇದಕ್ಕೆ ಅಂಗೀಕರಿಸಲು ಮುಂದಾದಾಗ ಸದನದ ಬಾವಿಗಿಳಿದು ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು.
ವಿಧೇಯಕಕ್ಕೆ ಇದರ ಮಧ್ಯೆಯೇ ಸದನ ಒಪ್ಪಿಗೆ ನೀಡಿತು. ನಾವು ತರಾತುರಿಯಲ್ಲಿ ಈ ವಿಧೇಯಕವನ್ನು ತಂದಿಲ್ಲ.ಈ ಕಾನೂನನ್ನು ಕೇಂದ್ರ ಸರಕಾರ ಸುಗ್ರೀವಾಜ್ಞೆ ಮೂಲಕ ತಂದಿತ್ತು. ರೈತರಿಗೆ
ಇದರಿಂದ ಲಾಭ ಆಗಿಲ್ಲ. ಖಾಸಗಿಯವರು ಇದರಿಂದ ಲಾಭ ಪಡೆದುಕೊಳ್ಳುವಂತಾಗಿತ್ತು.ಕಾನೂನನ್ನು ಕೇಂದ್ರ ಸರಕಾರ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಯಿದೆ ಹಿಂಪಡೆದಿತ್ತು. ರಾಜ್ಯದಲ್ಲಿ ಹೀಗಿದ್ದರೂ,
ಈ ಕಾನೂನು ಹಿಂಪಡೆದಿರಲಿಲ್ಲ. ಇದರಿಂದ ರೈತರಿಗೆ ಆಗುತ್ತಿರುವ ತೊಂದರೆ ಪರಿಗಣಿಸಿ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು
ರಶ್ಮಿತಾ ಅನೀಶ್