Passing information to Pakistan about Karwar naval base: NIA detained three local people and interrogated them
Karwar: ಸೀಬರ್ಡ್ ನೌಕಾನೆಲೆ ಫೋಟೋಗಳು ಮತ್ತು ಇತರ ಮಾಹಿತಿಯನ್ನು ರವಾನೆ ಮಾಡಿದ ಆರೋಪದಲ್ಲಿ ಕಾರವಾರದ ನೌಕಾ ನೆಲೆ (Karwar Naval Base) ಯಲ್ಲಿನ ಮೂವರು ದಿನಗೂಲಿ ಕಾರ್ಮಿಕರನ್ನು ಎನ್ಐಎ (NIA) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬುಧವಾರ ಬೆಳಗಿನ ಜಾವ ಮೂರು ಗಂಟೆಗೆ ಈ ಕಾರ್ಯಾಚರಣೆ ನಡೆದಿದೆ. ನೌಕಾನೆಲೆಯ ಪಕ್ಕದಲ್ಲಿರುವ ಮುದಗಾ ನಿರಾಶ್ರಿತರ ಕಾಲನಿಯ ವೇತನ್ ತಾಂಡೇಲ್, ತೋಡೂರು ಲೇಬರ್ ಕಾಲನಿಯ ಸುನೀಲ್ ನಾಯ್ಕ್ (Sunil Naik) ಮತ್ತು ಹಳಹಳ್ಳಿಯ ಅಕ್ಷಯ ನಾಯ್ಕ ಅವರ ಮನೆ ಮೇಲೆ ದಾಳಿ ಮಾಡಿ ವಿಚಾರಣೆ ಮಾಡಿದ್ದಾರೆ.
ಬೆಳಗ್ಗೆ ಮೂರು ಗಂಟೆಗೆ ಕಾರ್ಯಾಚರಣೆಗಿಳಿದ ಎನ್ಐಎ ಅಧಿಕಾರಿಗಳು ದಿನವಿಡೀ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಒಬ್ಬನನ್ನು ಗೋವಾ (Goa) ಮತ್ತು ಇನ್ನಿಬ್ಬರನ್ನು ಕಾರವಾರದಲ್ಲಿ ವಿಚಾರಣೆ ಮಾಡಿದ್ದಾರೆ.ವಿಶಾಖಪಟ್ಟಣಂನಲ್ಲಿ ನಡೆದ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಡಿವೈಎಸ್ಪಿ ನೇತೃತ್ವದ ಇನ್ಸ್ಪೆಕ್ಟರ್ಗಳ (Inspector) ತಂಡ ಕಾರ್ಯಾಚರಣೆ ನಡೆಸಿದ್ದು ಮೂವರು ಆರೋಪಿಗಳ ಪೈಕಿ ಒಬ್ಬ ನೌಕಾನೆಲೆ ದಿನಗೂಲಿ ಕೆಲಸ ಬಿಟ್ಟು ಗೋವಾದಲ್ಲಿ ಕೆಲಸ ಮಾಡುತ್ತಿದ್ದ. ಆತನನ್ನು ಅಲ್ಲಿಯೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ನೌಕಾನೆಲೆಯ ಗೌಪ್ಯ ಸಂಗತಿಗಳ ಫೋಟೋ, ವಿಡಿಯೋವನ್ನು (Photo, Video) ಬಹಿರಂಗ ಮಾಡಿದ ಆರೋಪದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ವಿದೇಶಿ ಅಧಿಕಾರಿಗಳಿಗೆ ಇಲ್ಲಿನ ನೌಕಾನೆಲೆ ಮಾಹಿತಿ ರವಾನಿಸುತ್ತಿದ್ದ ಎನ್ನುವ ಆರೋಪದಡಿ ವಿಶಾಖಪಟ್ಟಣಂನಲ್ಲಿ 2023ರಲ್ಲಿ ದೀಪಕ್ ಎಂಬಾತ ಸೇರಿ ಕೆಲವರನ್ನು ಎನ್ಐಎ ಬಂಧಿಸಿತ್ತು.
ಆ ಆರೋಪಿಗಳ ವಿಚಾರಣೆ ವೇಳೆ ಸುನೀಲ್ ನಾಯ್ಕ್, ವೇತನ ತಾಂಡೇಲ ಹಾಗೂ ಅಕ್ಷಯ ನಾಯ್ಕ ಹೆಸರು ಬಹಿರಂಗವಾಗಿತ್ತು. ಇವರು ಕದಂಬ ನೌಕಾನೆಲೆ ಫೋಟೊ, ಇತರ ಮಾಹಿತಿಗಳನ್ನು ದೀಪಕ ಮತ್ತಿತರಿಗೆ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಮಾಹಿತಿ ನೀಡಿದ್ದಕ್ಕೆ ಮೂವರಿಗೆ ಹಣ ಕೂಡ ಜಮಾ ಆಗಿದೆ ಎನ್ನಲಾಗುತ್ತಿದೆ. ಸೀಬರ್ಡ್ (Seabird) ದಿನಗೂಲಿ ಕೆಲಸ ಮಾಡುತ್ತಿದ್ದ ಅಕ್ಷಯ ನಾಯ್ಕ ಇತ್ತೀಚೆಗೆ ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿಗಳಿಂದ ಮೊಬೈಲ್ ಸೇರಿ ಎಲೆಕ್ಟ್ರಾನಿಕ್ (Electronics) ವಸ್ತುಗಳನ್ನು ಎನ್ಐಎ ಅಧಿಕಾರಿಗಳು ಜಪ್ತು ಮಾಡಿದ್ದಾರೆ.ಕದಂಬ ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾನೆಲೆಯಾಗಿ ಬೆಳೆಯುತ್ತಿದೆ. ದೇಶದ ಅತಿ ದೊಡ್ಡ ಯುದ್ಧ ವಿಮಾನವಾಹಕ ನೌಕೆ ವಿಕ್ರಮಾದಿತ್ಯ ಕೂಡ ಇದೇ ನೌಕಾನೆಲೆಯಲ್ಲಿ ತಂಗುತ್ತದೆ. ಸದ್ಯ ಇಲ್ಲಿ ಸೀಬರ್ಡ್ ಯೋಜನೆ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಕದಂಬ ನೌಕಾನೆಲೆಗೆ ಸಂಬಂಧಿಸಿದಂತೆ ಇಷ್ಟು ದೊಡ್ಡ ಪ್ರಕರಣ ದಾಖಲಾಗಿರುವುದು ಇದೇ ಮೊದಲ ಬಾರಿಯಾಗಿದೆ.
Passing Information To Pakistan About Karwar Naval Base
Karwar: Three daily wage laborers at Karwar Naval Base have been detained and interrogated by NIA officials for allegedly sending seabird photos and other information. The operation took place at three in the morning on Wednesday. They raided and interrogated the houses of Evep Tandel of Mudaga Refugee Colony, Sunil Naik of Toduru Labor Colony and Akshaya Naik of Halahalli, which are adjacent to the naval base.
The NIA officers, who came into operation at three in the morning, interrogated the accused throughout the day. One has been interrogated in Goa and the other two in Karwar. In connection with the crime case in Visakhapatnam, a team of inspectors led by NIA DySP conducted an operation. He was arrested there and interrogated.
It is said that he has been interrogated on the charge of revealing photos and videos of the naval base’s confidential information. Earlier, the NIA had arrested some people including Deepak in Visakhapatnam in 2023 on the charge of passing information about the naval base here to foreign officials.
During the trial of those accused, the names of Sunil Naik, Vya Tandela and Akshay Naik were revealed. It is alleged that he used to send photos of Kadamba Naval Base and other information to Deepak and others. It is said that money has been deposited to the three for giving this information. It is said that Akshay Nayka, who used to work as a daily wage worker at Seabird, was working in Goa recently.
The NIA officials have confiscated mobile phones and electronics from the accused. Kadamba is growing into the largest naval base in Asia. The country’s largest aircraft carrier Vikramaditya also stays at the same naval base. At present, the second phase of the Seabird project is going on here, and this is the first time that such a big case has been registered in connection with the Kadamba Naval Base.