• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಪತಂಜಲಿ ಹಸುವಿನ ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ :ಉತ್ತರಾಖಂಡದಲ್ಲಿ ಕಂಪನಿಗೆ ದಂಡ ವಿಧಿಸಿದ ಕೋರ್ಟ್

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಪತಂಜಲಿ ಹಸುವಿನ ತುಪ್ಪ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ :ಉತ್ತರಾಖಂಡದಲ್ಲಿ ಕಂಪನಿಗೆ ದಂಡ ವಿಧಿಸಿದ ಕೋರ್ಟ್
0
SHARES
45
VIEWS
Share on FacebookShare on Twitter
  • ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆದ ಪತಂಜಲಿ (Patanjali ghee fails quality test) ತುಪ್ಪ
  • ಆರೋಗ್ಯಕ್ಕೆ ಅಪಾಯಕಾರಿಯೆಂದು ವರದಿ, ಬ್ರ್ಯಾಂಡ್ ದೊಡ್ಡದಾದರೂ ಗುಣಮಟ್ಟದಲ್ಲಿ ಸ್ವೀಕಾರಾರ್ಹವಲ್ಲ ಎಂದು ಸಂದೇಶ ನೀಡಿದ ಕೋರ್ಟ್
  • ಉತ್ಪಾದಕ ಮತ್ತು ವ್ಯಾಪಾರಿಗಳ ಮೇಲೂ ದಂಡ ವಿಧಿಸಿದ ಪಿಥೋರಗಢ ಕೋರ್ಟ್


Pithoragarh: ಭಾರತದ ಪ್ರಮುಖ ಕಂಪನಿಯಾಗಿರುವ ಪತಂಜಲಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾಗಿರುವ ಕಾರಣ

Patanjali ghee fails quality test

ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ದಂಡ ವಿಧಿಸಿದೆ. 2020ರಲ್ಲಿ ಪತಂಜಲಿ ತಯಾರಿಸಿದ ಹಸುವಿನ ತುಪ್ಪದ ಮಾದರಿಯನ್ನು ಪರಿಶೀಲಿಸಿದಾಗ ಅದು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ

ಎಂದು ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ಸ್ಪಷ್ಟಪಡಿಸಿದ್ದವು. ಇದರಿಂದ ಉತ್ಪಾದಕ, ವಿತರಕ ಮತ್ತು ಚಿಲ್ಲರೆ ವ್ಯಾಪಾರಿಗಳ ವಿರುದ್ಧ ಒಟ್ಟಾರೆ 1.40 ಲಕ್ಷ

ರೂಪಾಯಿಗೂ ಅಧಿಕ ದಂಡ ವಿಧಿಸಲಾಗಿದೆ. ದೇಶಾದ್ಯಂತ ಗ್ರಾಹಕರಲ್ಲಿ ದೊಡ್ಡ ಹೆಸರು ಹೊಂದಿರುವ ಪತಂಜಲಿ ಬ್ರ್ಯಾಂಡ್‌ಗೆ (Patanjali Brand) ಇದು ಮತ್ತೊಂದು ದೊಡ್ಡ ಹೊಡೆತವಾಗಿದೆ. ಅಷ್ಟಕ್ಕೂ ಮೂಲ

ಪ್ರಕರಣವು 2020ರಲ್ಲಿ ಆರಂಭವಾಗಿತ್ತು. ಪಿಥೋರಗಢದ (Pithoragarh) ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಅವರು ಕರಣ್ ಜನರಲ್ ಸ್ಟೋರ್‌ನಿಂದ ಪತಂಜಲಿ ತುಪ್ಪದ ಮಾದರಿಯನ್ನು ನಿಯಮಿತ

ಪರೀಕ್ಷೆಗಾಗಿ ಸಂಗ್ರಹಿಸಿದ್ದರು. ಈ ಮಾದರಿಯನ್ನು ಮೊದಲಿಗೆ ಉತ್ತರಾಖಂಡದ ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಅಲ್ಲಿಂದ ಬಂದ ವರದಿಯಲ್ಲಿ ತುಪ್ಪವು ಕಳಪೆ ಗುಣಮಟ್ಟದ್ದಾಗಿದ್ದು, ಆರೋಗ್ಯಕ್ಕೆ

ಹಾನಿಕಾರಕವಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಯಿತು.ಇನ್ನು ಈ ವರದಿಯ ಆಧಾರದ ಮೇಲೆ ಇಲಾಖೆ 2021ರಲ್ಲಿ ಪತಂಜಲಿಗೆ ನೋಟಿಸ್ ನೀಡಿತು. ಆದರೆ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದ

ಕಾರಣ ಪ್ರಕರಣ ಗಂಭೀರ ಸ್ವರೂಪ ಪಡೆದಿತ್ತು.ನಂತರ ಪತಂಜಲಿ ಅಧಿಕಾರಿಗಳು ಮರುಪರೀಕ್ಷೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. 2021ರ

ಅಕ್ಟೋಬರ್‌ನಲ್ಲಿ ಗಾಜಿಯಾಬಾದ್ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ನಡೆದಿದ್ದು, ನವೆಂಬರ್ 26ರಂದು ಬಂದ ವರದಿಯಲ್ಲಿಯೂ ತುಪ್ಪವು ಆಹಾರ ಸುರಕ್ಷತಾ ಮಾನದಂಡಗಳಲ್ಲಿ ಮತ್ತೆ ವಿಫಲವಾಗಿದೆ ಎಂದು

ದೃಢಪಡಿಸಲಾಯಿತು. ಎರಡು ಪ್ರಯೋಗಾಲಯಗಳ ವರದಿ ಒಂದೇ ರೀತಿಯದ್ದಾಗಿರುವುದು ಕಳಪೆ ಗುಣಮಟ್ಟದ ಆರೋಪವನ್ನು ಇನ್ನಷ್ಟು ಗಂಭೀರಗೊಳಿಸಿತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು

ಪಿಥೋರಗಢದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ದೂರು ದಾಖಲಿಸಿದರು. ಇನ್ನು ಕೆಲ ದಿನಗಳ ಹಿಂದಷ್ಟೇ ತೀರ್ಪು ಹೊರಬಿದ್ದಾಗ, ಎಡಿಎಂ (ADM) ಯೋಗೇಂದ್ರ ಸಿಂಗ್ ಅವರು ಎಲ್ಲಾ ದಾಖಲೆಗಳು

ಹಾಗೂ ಸಾಕ್ಷ್ಯಗಳನ್ನು ಪರಿಶೀಲಿಸಿ ಮೂವರು ಆರೋಪಿಗಳ ಮೇಲೂ ದಂಡ ವಿಧಿಸಿದರು. ಇದರಲ್ಲಿ ಮುಖ್ಯವಾಗಿ ಪತಂಜಲಿ ಆಯುರ್ವೇದ ಲಿಮಿಟೆಡ್‌ಗೆ 1 ಲಕ್ಷ ರೂ. ದಂಡ, ಪಿಥೋರಗಢದ ಧಾರ್ಚುಲಾ ರಸ್ತೆಯ ವಿತರಕ

‘ಬ್ರಹ್ಮ್ ಆಕ್ಸೆಸರೀಸ್’ಗೆ (Brahma Accessories) 25,000 ರೂ. ದಂಡ ಮತ್ತು ಚಿಲ್ಲರೆ ವ್ಯಾಪಾರಿ ಕರಣ್ ಜನರಲ್ ಸ್ಟೋರ್‌ಗೆ 15,000 ರೂ. ದಂಡ ವಿಧಿಸಲಾಗಿದೆ. ರಾಷ್ಟ್ರಪ್ರಸಿದ್ಧ ಬ್ರ್ಯಾಂಡ್‌ಗಳಿಗೂ ಆಹಾರ

ಗುಣಮಟ್ಟದ ಕಾನೂನು ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ ಎಂಬ ದೃಢ ಸಂದೇಶವನ್ನು ಈ ತೀರ್ಪು ಸಾರ್ವಜನಿಕರಿಗೆ ನೀಡಿದೆ. ಈ ಪ್ರಕರಣದ ಹಿನ್ನೆಲೆ ಹಾಗೂ ತೀರ್ಪಿನ ಮಹತ್ವವನ್ನು ವಿವರಿಸಿದ ಆಹಾರ ಸುರಕ್ಷತಾ

ಅಧಿಕಾರಿ ದಿಲೀಪ್ ಜೈನ್ (Jain) ಅವರು ಗ್ರಾಹಕರ ಕೈಗೆ ತಲುಪುವ ಆಹಾರ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ಕಲಬೆರಕೆ ಇರುವಂತಿಲ್ಲ. ಬ್ರ್ಯಾಂಡ್ ದೊಡ್ಡದಿದೆಯೇ, ಹೆಸರು ಇದ್ದಿದೆಯೇ ಎಂಬುದಕ್ಕಿಂತ ಆಹಾರ

ಸುರಕ್ಷತೆ ಮುಖ್ಯ. ಇದು ಕಂಪನಿಗಳಿಗೆ ಎಚ್ಚರಿಕೆಯ ಘಂಟೆಯಾಗಿದೆ, ಎಂದು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಇರುವ ವಿವಾದಗಳ ನಡುವೆ ಈ ತೀರ್ಪು ಹೊರಬಿದ್ದಿರುವುದು

ಪತಂಜಲಿ ಉತ್ಪನ್ನ ಬಳಸುತ್ತಿದ್ದ ಗ್ರಾಹಕರು ಮುಂದಿನ ದಿನಗಳಲ್ಲಿ ಬಳಸಲು (Patanjali ghee fails quality test) ಮತ್ತಷ್ಟು ಯೋಚಿಸುವಂತಾಗಿದೆ.

ಇದನ್ನು ಓದಿ : ಇನ್ಮುಂದೆ ಪ್ರೌಢಶಾಲೆಗೆ PUC ಉಪನ್ಯಾಸಕರಿಂದ ಪಾಠ: ನಿಯಮ ತಿದ್ದುಪಡಿ ತರಲು ಪ್ರಸ್ತಾವನೆ

Tags: GheeHealthPatanjaliPatanjali Ayurveda

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.