Mumbai : ಬಾಲಿವುಡ್ ಕಿಂಗ್ ಖಾನ್(Pathan box office collection), ನಟ ಶಾರುಖ್ ಖಾನ್(Shah Rukh Khan) ಮತ್ತು ನಟಿ ದೀಪಿಕಾ ಪಡುಕೋಣೆ(Deepika Padukone) ಅಭಿನಯದ ಪಠಾಣ್ ಚಿತ್ರ ಬಿಡುಗಡೆಗೊಂಡು ಯಶಸ್ವಿಯಾಗುವುದರ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ದಾಖಲಿಸಿದೆ!

ಪಠಾಣ್(Pathan) ಚಿತ್ರ ಬಿಡುಗಡೆಗೊಂಡು ಇದೀಗ ೩ನೇ ದಿನಕ್ಕೆ ಕಾಲಿಟ್ಟಿದ್ದು, ಮೊದಲ ದಿನದಿಂದಲೂ ಬಾಕ್ಸ್ ಆಫೀಸ್(Box Office) ಕಬಳಿಕೆ ಮಾಡುತ್ತಿರುವ ಚಿತ್ರ,
ಇದೀಗ ಶುಕ್ರವಾರಕ್ಕೆ ಭಾರತದಲ್ಲಿ 37.5 ಕೋಟಿ ರೂ. ನಿವ್ವಳ ಗಳಿಸಿದೆ.
ಪಠಾಣ್ ಈಗ ಮೂಲ ಸ್ವರೂಪದಲ್ಲಿ ಅಥವಾ ಒಂದೇ ಭಾಷೆಯಲ್ಲಿ ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗುವತ್ತ ಸಾಗುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸನಾತನ ಧರ್ಮ ನಮ್ಮ ರಾಷ್ಟ್ರೀಯ ಧರ್ಮ : ಸಿಎಂ ಯೋಗಿ ಆದಿತ್ಯನಾಥ್
ಪಠಾಣ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು, ಚಿತ್ರತಂಡ ಹಾಗೂ ಸಿನಿಪ್ರೇಕ್ಷಕರ (Pathan box office collection) ಲೆಕ್ಕಾಚಾರಗಳನ್ನು ಮೀರಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತಿದೆ.
ಶುಕ್ರವಾರದಂದು, ಶಾರುಖ್ ಖಾನ್ ಅವರು ಅಭಿನಯದ ಹಿಂದಿ ಆವೃತ್ತಿಯು ಭಾರತದಲ್ಲಿ 37.5 ಕೋಟಿ ನಿವ್ವಳ ಸಂಗ್ರಹಿಸಿದೆ.
ಪಠಾಣ್ ಮೊದಲ ಮೂರು ದಿನಗಳ ಒಟ್ಟು ಕಲೆಕ್ಷನ್ ಮೊತ್ತ 160-161 ಕೋಟಿ ರೂ.ನಿವ್ವಳವಾಗಿದೆ. ಸಿದ್ಧಾರ್ಥ್ ಆನಂದ್(Siddarth Anand) ನಿರ್ದೇಶಿಸಿದ ಈ ಸಿನಿಮಾವು,
ಸಾಹಸಮಯ ಚಲನಚಿತ್ರವಾಗಿದೆ. ನಟಿ ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ(John Abraham),
ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚಿತ್ರ ವಿವಾದದ ಅಲೆಯ ನಂತರ ಉತ್ತಮವಾಗಿ ಹೆಸರು ಗಳಿಸುತ್ತಿದೆ.

ಪಠಾಣ್ ಚಿತ್ರವು ಆರಂಭಿಕ ದಿನದಲ್ಲಿ ಜಾಗತಿಕವಾಗಿ 106 ಕೋಟಿ ರೂ. ಗಳಿಸಿತು,
ಇನ್ನು ಇತ್ತೀಚಿಗೆ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್(Yash Raj Films) ನೀಡಿರುವ ವರದಿ ಅನುಸಾರ ಪಠಾಣ್ ಬಿಡುಗಡೆಯಾದ ಎರಡು ದಿನಗಳಲ್ಲಿ ವಿಶ್ವಾದ್ಯಂತ 200 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದೆ.
ಬಾಲಿವುಡ್ ಅಂಗಳದಲ್ಲಿ ಅಮೀರ್ ಖಾನ್(Amir Khan) ನಟನೆಯ ದಂಗಲ್(Dangal) ಚಿತ್ರ ಈ ಹಿಂದೆ ವಿಶ್ವಾದ್ಯಂತ 702 ಕೋಟಿ ರೂ.
ಗಳಿಸುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ದಾಖಲೆಯೊಂದನ್ನು ನಿರ್ಮಿಸಿತ್ತು,
ಸದ್ಯ ಚಿತ್ರ ವಿಮರ್ಶಕರು ಹಾಗೂ ಸಿನಿ ವಹಿವಾಟಿನ ಮಾಹಿತಿಗಳ ಪ್ರಕಾರ ಪಠಾಣ್ ಚಿತ್ರ ಬಾಹುಬಲಿ 2(Bahubali 2) : ದಿ ಕನ್‌ಕ್ಲೂಷನ್‌ನ ಗಳಿಸಿದ ದಾಖಲೆಯನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಿದ್ದಾರೆ.
ಸದ್ಯ ಪಠಾಣ್ ಚಿತ್ರ ಬಾಲಿವುಡ್ ಮಾತ್ರವಲ್ಲದೇ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.