New Delhi: ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ನಟ ಶಾರೂಖ್ ಖಾನ್(Shah Rukh Khan) ಮತ್ತು ನಟಿ ದೀಪಿಕಾ ಪಡುಕೋಣೆ,(Deepika Padukone)ಜಾನ್ ಅಬ್ರಾಹಂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಪಠಾಣ್ ಚಿತ್ರ ಇದೀಗ (pathan reached 500 crores) ೫೦೦ ಕೋಟಿ ಕ್ಷಬ್ ಅನ್ನು ಪ್ರವೇಶಿಸಿದೆ.

ಪಠಾಣ್(Pathan) ಚಿತ್ರ ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಭಾರಿ ಸದ್ದು-ಗದ್ದಲ ಮೂಡಿಸಿದ ಸಿನಿಮಾ. ಈ ಚಿತ್ರದ ಬೇಷರಂ ರಂಗ್ ಹಾಡು ಸಾಕಷ್ಟು ವಿವಾದಕ್ಕೆ ಕೂಡ ಕಾರಣವಾಯಿತು.
ಭುಗಿಲೆದ್ದಿದ್ದ ವಿವಾದಗಳನ್ನು ಬೇಧಿಸಿ, ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟ ಪಠಾಣ್ ಚಿತ್ರವೂ ಉತ್ತಮ ಕಲೆಕ್ಷನ್ ಮಾಡುವ ಮುಖೇನ ಬಾಲಿವುಡ್ (pathan reached 500 crores) ಚಿತ್ರರಂಗಕ್ಕೆ ಅತ್ಯುತ್ತಮ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಯಿತು.
ಇದೀಗ ಪಠಾಣ್ ಸಿನಿಮಾದ ಹಿಂದಿ ಅವತರಣಿಕೆ ದೇಶೀಯ ಬಾಕ್ಸ್ ಆಫೀಸ್ ನಲ್ಲಿ ೫೦೦ ಕೋಟಿ ರೂ. ಗಳಿಸಿದ್ದು, ೫೦೦ ಕೋಟಿ ಕ್ಲಬ್ ಸೇರಿದೆ.
ಈ ಬಗ್ಗೆ ಚಿತ್ರದ ನಟ ಜಾನ್ ಅಬ್ರಾಹಂ(John Abraham) ಸಂತಸ ವ್ಯಕ್ತಪಡಿಸಿದ್ದು,
ಇದು ನನಗೆ ಥ್ರಿಲ್ ಕೊಟ್ಟಿದೆ! ಇದು ನಿಜವಾದ ಹೆಗ್ಗುರುತು ಕ್ಷಣ, ಇದು ಕೇವಲ ನಮ್ಮ ಚಿತ್ರ ಮತ್ತು ಇಡೀ ಪಠಾಣ್ ತಂಡಕ್ಕೆ ಮಾತ್ರವಲ್ಲದೆ ಬಾಲಿವುಡ್ ಚಲನಚಿತ್ರೋದ್ಯಮಕ್ಕೂ ಒಂದು ಹೆಗ್ಗುರುತು ಕ್ಷಣವಾಗಿದೆ ಎಂದು ಹೇಳಿದ್ದಾರೆ.
ನಾವು ಭಾರತೀಯರು ಮತ್ತು ಹಿಂದಿ ಸಿನೆಮಾ ಪ್ರೇಮಿಗಳನ್ನು ರಂಜಿಸಿದೆವು ಎಂಬುದಕ್ಕೆ ನಾನು ಥ್ರಿಲ್ ಆಗಿದ್ದೇನೆ.

ಪಠಾಣ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ ಜಾನ್ ಅಬ್ರಾಹಂ(John Abraham), ಇದು ಹೊಸ ಮಾನದಂಡಗಳನ್ನು ಸ್ಥಾಪಿಸಿದ ಸ್ಮಾರಕ ಸಾಧನೆಯಾಗಿದೆ. ಟೀಮ್‌ವರ್ಕ್ ಯಾವಾಗಲೂ ಹೆಚ್ಚು ಪರಿಗಣಿಸುವಂತದ್ದು,
ಭಾಗಿಯಾದ ಎಲ್ಲರಿಗೂ ನಾನು ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ವರದಿ ನೀಡಿದ್ದು, ಪಠಾಣ್ ಚಿತ್ರ ಭಾರತದಲ್ಲಿ ೫೦೦.೦೫ ಕೋಟಿ ರೂ. ಗಳಿಸಿದ ಮೊದಲ ಹಿಂದಿ ಮೂಲ ಚಿತ್ರವಾಗಿದೆ. ಒಟ್ಟು ೫೦೦.೦೫ ಕೋಟಿ ರೂ. ಗಳಿಸಿದ ಚಿತ್ರ ಇದು ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಎಂದು ತರಣ್ ಆದರ್ಶ್(Taran Adarsh) ಟ್ವೀಟ್ ಮಾಡಿದ್ದಾರೆ.
ಸದ್ಯ ಪಠಾಣ್ ಚಿತ್ರ ೫೦೦ ಕೋಟಿ ಕ್ಲಬ್ ತಲುಪಿದ ಹಿನ್ನೆಲೆ ಚಿತ್ರತಂಡ ಸಂತಸವನ್ನು ವ್ಯಕ್ತಪಡಿಸಿದೆ.