New Delhi : ಕಾಡು ನಾಶವಾಗುತ್ತಿದ್ದಂತೆ ಮಾನವ ಸಂಘರ್ಷ ದಿನೇ ದಿನೇ ತಾರಕಕ್ಕೇರುತ್ತಿದೆ. ಅನ್ನ ಆಹಾರ ಹುಡುಕಿಕೊಂಡು ನಾಡಿಗೆ ಬರೋ ಮೂಕ ಪ್ರಾಣಿಗಳಿಂದ(people killed from wild Elephants) ನಾಡಿನ ಜನರಿಗೆ ತೊಂದರೆಗಳಾಗುತ್ತಿವೆ.
ಸಾವು ನೋವುಗಳ ಪ್ರಮಾಣ ಹೆಚ್ಚುತ್ತಿದೆ. ಕಳೆದ 8 ವರ್ಷಗಳಲ್ಲಿ 3,930 ಕ್ಕೂ ಹೆಚ್ಚು ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಆರ್‌ಟಿಐ ( RTI) ಪಡೆದ ಮಾಹಿತಿಯಿಂದ ಬಹಿರಂಗಗೊಂಡಿದೆ.
ಆರ್‌ಟಿಐ ಮಾಹಿತಿಯ ಪ್ರಕಾರ ಕಾಡಾನೆ ದಾಳಿಗೆ ಅತೀ ಹೆಚ್ಚು ಜನರು ಸಾವನ್ನಪ್ಪಿರುವ ರಾಜ್ಯಗಳ ಪಟ್ಟಿಯಲ್ಲಿ ಒಡಿಶಾ(Odisha) ರಾಜ್ಯ ಅಗ್ರಸ್ಥಾನದಲ್ಲಿದೆ. 2014-2022 ರಲ್ಲಿ ಕನಿಷ್ಠ 3,930 ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಈ ಎಂಟು ವರ್ಷಗಳ ಅವಧಿಯಲ್ಲಿ ಕಾಡಾನೆ ದಾಳಿಯಿಂದಾಗಿ ಒಡಿಶಾ ರಾಜ್ಯದಲ್ಲಿ 719 ಮಾನವ ಸಾವುಗಳು ದಾಖಲಾಗಿವೆ, ಇದು ಎಲ್ಲಾ ರಾಜ್ಯಗಳಲ್ಲಿ ಅತಿ ಹೆಚ್ಚು!
ಕೇರಳ ಮೂಲದ ಆರ್‌ಟಿಐ ಪ್ರಚಾರಕ ಕೆ.ಗೋವಿಂದನ್ ನಂಬೂತಿರಿ(K Govindan Nambuthiri) ಅವರ ಪ್ರಶ್ನೆಯ ನಂತರ ಕೇಂದ್ರ ಸರ್ಕಾರವು ಈ ಡೇಟಾವನ್ನು ಬಿಡುಗಡೆ ಮಾಡಿದೆ.

ದೇಶವು ಲಾಕ್‌ಡೌನ್(Lockdown) ಸಂಕಷ್ಟವನ್ನು ಎದುರಿಸುತ್ತಿರುವ ಸಮಯ 2021-2022 ರಲ್ಲಿ ಅತಿ ಹೆಚ್ಚು ಸಾವುಗಳು ವರದಿಯಾಗಿವೆ. 2021-22 ರಲ್ಲಿ ಒಟ್ಟು 533 ಸಾವುಗಳು ದಾಖಲಾಗಿದ್ದು,
2020-21 ರಲ್ಲಿ 461, 2017-18 ರಲ್ಲಿ 506 ಮತ್ತು 2016-17ರಲ್ಲಿ 516 ಸಾವುಗಳು ಸಂಭವಿಸಿವೆ ಎಂದು ಅರಣ್ಯ ಮತ್ತು ಪರಿಸರ ಸಚಿವಾಲಯ ಆರ್‌ಟಿಐ ಪ್ರಶ್ನೆಗೆ ಉತ್ತರಿಸಿದೆ.
ಒಡಿಶಾ ರಾಜ್ಯದಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿವೆ. ಒಟ್ಟು ಸಾವಿನ ಸಂಖ್ಯೆ 719. ಪಶ್ಚಿಮ ಬಂಗಾಳದಲ್ಲಿ(people killed from wild Elephants),
643 ಜನರು ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದೇ ಸಾಲಿನಲ್ಲಿ ಜಾರ್ಖಂಡ್ (640), ಅಸ್ಸಾಂ (561), ಛತ್ತೀಸ್ಗಢ (477), ತಮಿಳುನಾಡು (371) ಮತ್ತು ಕರ್ನಾಟಕ (252).
ಈ ಬೆಳವಣಿಗೆ ತೀವ್ರ ಅಪಾಯಕಾರಿಯಾಗಿದೆ! ಏಕೆಂದರೆ ವನ್ಯಜೀವಿಗಳು ಸಹ ಸಮಾನವಾಗಿ ಪರಿಣಾಮ ಬೀರುತ್ತಿವೆ ಎಂದು ಗೋವಿಂದನ್ ನಂಬೂತಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ರಾಜ್ಯದಲ್ಲಿ ಇದೇ ಅವಧಿಯಲ್ಲಿ 158 ಮಾನವ ಸಾವುಗಳು ದಾಖಲಾಗಿವೆ.
ಇಲಾಖೆ ಅಧಿಕಾರಿಗಳು ಸೂಕ್ತ ತರಬೇತಿ ಪಡೆದು ಮಾನವ-ಪ್ರಾಣಿ ಸಂಘರ್ಷದ(human-animal conflict) ಕುರಿತು ನಿವಾಸಿಗಳಲ್ಲಿ ಜಾಗೃತಿ ಮೂಡಿಸಿದರೆ ಕಾಡುಪ್ರಾಣಿಗಳ ಸಾವನ್ನು ತಡೆಗಟ್ಟಬಹುದು.
ಕಾಡುಪ್ರಾಣಿಗಳ ಆವಾಸಸ್ಥಾನದ ಸಮೀಪ ಕೃಷಿಭೂಮಿಗಳು ಹೆಚ್ಚುತ್ತಿರುವುದು ಇಂತಹ ಘಟನೆಗಳಿಗೆ ಹೆಚ್ಚು ಕಾರಣವಾಗುತ್ತಿದೆ ಎಂದು ಗೋವಿಂದನ್ ನಂಬೂತಿರಿ ಹೇಳಿದ್ದಾರೆ.
- ಮೋಹನ್ ಶೆಟ್ಟಿ